Redmi: ಬಂಡಲ್ ಆಫರ್... ರೆಡ್ಮಿ ನೋಟ್ 12 ಫೋನ್ ಸೇರಿದಂತೆ ಈ ನಾಲ್ಕು ಡಿವೈಸ್‌ಗಳಿಗೆ ಭಾರೀ ಆಫರ್
ರೆಡ್ಮಿ ಸ್ಮಾರ್ಟ್‌ಫೋನ್‌ಗಳು (Redmi smartphones) ಇಂದು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲೂ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ವಿಶೇಷ ಆಫರ್ ಬೆಲೆಗೆ ಈ ಫೋನ್ ಲಭ್ಯ ಆಗುತ್ತಿದೆ. ಆದರೆ, ಈಗ ನೀವು ಕೇವಲ ಫೋನ್ ಮಾತ್ರವಲ್ಲದೆ ಈ ಫೋನ್‌ನೊಂದಿಗೆ ಇತರೆ ಮೂರು ಅಗತ್ಯ ಡಿವೈಸ್‌ಗಳನ್ನೂ ಸಹ ಪಡೆದುಕೊಳ್ಳಬಹುದು. ಅದೂ ಸಹ ಕೈಗೆಟಕುವ ದರದಲ್ಲಿ.
ಹೌದು, ರೆಡ್ಮಿ ನೋಟ್ 12 ಫೋನ್, ರೆಡ್ಮಿ ವಾಚ್ 3 ಆಕ್ಟಿವ್ ಸ್ಮಾರ್ಟ್‌ವಾಚ್, ರೆಡ್ಮಿ ಬಡ್ಸ್ 4 ಆಕ್ಟಿವ್ ಇಯರ್‌ಬಡ್ಸ್ ಮತ್ತು ಮಿ ಪಾಕೆಟ್ ಪವರ್ ಬ್ಯಾಂಕ್ ಪ್ರೊ (Redmi Note 12 5G 6 GB + 128 GB,Redmi Watch 3 Active,Redmi Buds 4 Active, Mi Pocket Power Bank Pro) ಅನ್ನು ನೀವು ಭಾರೀ ಅಗ್ಗದ ದರದಲ್ಲಿ ಈ ವಿಶೇಷವಾದ ನಾಲ್ಕು ಡಿವೈಸ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಗಿದ್ರೆ, ಏನಿದು ಹೊಸ ಆಫರ್?, ಇಷ್ಟೂ ಡಿವೈಸ್‌ಗಳಿಗೆ ಬೆಲೆ ಎಷ್ಟು? ಎಂಬ ಮಾಹಿತಿ ಇಲ್ಲಿದೆ ನೋಡಿ.

ರೆಡ್ಮಿ ನೋಟ್ 12: ಈ ನಾಲ್ಕು ಡಿವೈಸ್‌ಗಳನ್ನು ಅಗ್ಗದ ದರದಲ್ಲಿ ಒಟ್ಟಾಗಿ ಖರೀದಿ ಮಾಡುವ ಮುನ್ನ ಇವುಗಳ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ತಿಳಿದುಕೊಳ್ಳೋಣ. ಅದರಲ್ಲಿ ಪ್ರಮುಖವಾಗಿ ರೆಡ್ಮಿ ನೋಟ್ 12 (Redmi Note 12) ಫೋನ್ 6.67 ಇಂಚಿನ ಫುಲ್ ಹೆಚ್ ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 1080×2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್, 1200 ನಿಟ್ಸ್ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಪಡೆದಿದೆ.
ಇದರೊಂದಿಗೆ ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 ಜನ್ 1 6nm ಪ್ರೊಸೆಸರ್ ಬಲ ಪಡೆದಿದ್ದು, ಆಂಡ್ರಾಯ್ಡ್ 12 ಓಎಸ್ ಅನ್ನು ರನ್ ಮಾಡಲಿದೆ. ಜೊತೆಗೆ ಅಡ್ರಿನೋ GPU ಗ್ರಾಫಿಕ್ಸ್ ಕಾರ್ಡ್‌ನೊಂದಿಗೆ ಪ್ಯಾಕ್ ಆಗಿದ್ದು, ಈ ಮೂಲಕ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಉಳಿದಂತೆ 4GB RAM + 128GB ಸ್ಟೋರೇಜ್ ಮತ್ತು 6GB RAM + 128GB ಸ್ಟೋರೇಜ್‌ನ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ.
ಉಳಿದಂತೆ ಈ ಫೋನ್ 48 MP ಮುಖ್ಯ ಕ್ಯಾಮೆರಾ + 8 MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ + 2 MP ಮ್ಯಾಕ್ರೋ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದ್ದು, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಕಾಣಿಸಿಕೊಂಡಿರುವ ಈ ಫೋನ್ 33W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 21,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ನೀವು ಈಗ ಇದನ್ನು 17,999 ರೂ.ಗಳ ಡಿಸ್ಕೌಂಟ್‌ನಲ್ಲಿ ಖರೀದಿ ಮಾಡಬಹುದು.
ರೆಡ್ಮಿ ವಾಚ್ 3 ಆಕ್ಟಿವ್ ಸ್ಮಾರ್ಟ್‌ವಾಚ್: ಈ ವಾಚ್ (Redmi Watch 3 Active Smartwatch) 1.83 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 240×280 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಇದರಲ್ಲಿದ್ದು, ಬ್ಲೂಟೂತ್ ಆವೃತ್ತಿ v5.3 ಮೂಲಕ ಬ್ಲೂಟೂತ್ ಕರೆಗೆ ಬೆಂಬಲ ನೀಡಲಿದೆ. ಇನ್‌ಬಿಲ್ಟ್ ಮೈಕ್ ಹಾಗೂ ಸ್ಪೀಕರ್ ಮೂಲಕ ವಿಶೇಷ ಎನಿಸಿದೆ. ಈ ವಾಚ್ 2,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಇದನ್ನು ನೀವು ಈಗ 2,599 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದು.
ರೆಡ್ಮಿ ಬಡ್ಸ್ 4 ಆಕ್ಟಿವ್ ಇಯರ್‌ಬಡ್ಸ್: ಈ ಇಯರ್‌ಬಡ್ಸ್(Redmi Buds 4 Active Earbuds) 12 ಎಂಎಂ ಡ್ರೈವರ್‌ಗಳನ್ನು ಪ್ಯಾಕ್ ಆಗಿದ್ದು, ಪ್ರೊ ಬೇಸ್ ತಂತ್ರಜ್ಞಾನ ಹಾಗೂ ENC ಬೆಂಬಲ ಪಡೆದುಕೊಂಡಿದೆ. ಬ್ಲೂಟೂತ್ ಆವೃತ್ತಿ 5.3 ಇದ್ದು, ಈ ಮೂಲಕ ಪಾಸ್ಟ್ ಕನೆಕ್ಟಿವಿಟಿ ಸೌಲಭ್ಯ ಇದರಲ್ಲಿದೆ. ಇಷ್ಟೇ ಅಲ್ಲದೆ 60ms ಕಡಿಮೆ ಲೇಟೆನ್ಸಿ ಗೇಮಿಂಗ್ ಮೋಡ್‌ನೊಂದಿಗೆ ಕಾಣಿಸಿಕೊಂಡಿರುವ ಈ ಬಡ್ಸ್, ಟಚ್ ಕಂಟ್ರೋಲ್ ಆಯ್ಕೆ ಪಡೆದುಕೊಂಡಿದೆ. ಇದರ ಸಾಮಾನ್ಯ ದರ 1399ರೂ.ಗಳಾಗಿದ್ದು, ಆಫರ್ ಬೆಲೆ 999ರೂ.ಗಳಲ್ಲಿ ಖರೀದಿ ಮಾಡಬಹುದು.

ಮಿ ಪಾಕೆಟ್ ಪವರ್ ಬ್ಯಾಂಕ್ ಪ್ರೊ: ಕೊನೆಯದಾಗಿ ಈ ಪವರ್ ಬ್ಯಾಂಕ್ ವಿಚಾರಕ್ಕೆ ಬರುವುದಾದರೆ ಇದು 10000mAh ಬ್ಯಾಕಪ್ ಹೊಂದಿದೆ. ಡ್ಯುಯಲ್ ಯುಎಸ್‌ಬಿ ಪೋರ್ಟ್, ಟೈಪ್-ಸಿ ಪೋರ್ಟ್ ಮತ್ತು ಮೈಕ್ರೋ ಯುಎಸ್‌ಬಿ ಪೋರ್ಟ್‌ನೊಂದಿಗೆ ಪ್ಯಾಕ್ ಆಗಿದ್ದು, ಸುಧಾರಿತ ಸರ್ಕ್ಯೂಟ್ ರಕ್ಷಣೆಯನ್ನು ಪಡೆದಿದೆ. ಈ ಮೂಲಕ ಈ ಡಿವೈಸ್ 2,699 ರೂ. ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ಆಫರ್ ಬೆಲೆ 1,599 ರೂಗಳಲ್ಲಿ ಕಾಣಿಸಿಕೊಂಡಿದೆ.
ಈ ಎಲ್ಲಾ ಡಿವೈಸ್‌ಗಳಿಗೆ ಆಫರ್ ಬೆಲೆ ಎಷ್ಟು?: ಶಿಯೋಮಿ (Xiaomi) ಈ ಮೇಲಿನ ಎಲ್ಲಾ ನಾಲ್ಕು ಡಿವೈಸ್‌ಗಳನ್ನು ಒಟ್ಟಾಗಿ ನಿಮಗೆ ಕೇವಲ 21,999 ರೂ.ಗಳ ಆಫರ್ ಬೆಲೆಗೆ ನೀಡುತ್ತಿದೆ. ವಿಶೇಷ ಏನೆಂದರೆ 2000 ರೂ.ಗಳ ಬ್ಯಾಂಕ್ ಕೊಡುಗೆಗಳನ್ನು ಸಹ ನೀಡಲಾಗುತ್ತಿದ್ದು, ಈ ಮೂಲಕ ನೀವು ಇದನ್ನು ಕೇವಲ 19,999 ರೂ.ಗಳಿಗೆ ಕೊಂಡುಕೊಳ್ಳಬಹುದು. ಈ ಮೂಲಕ ಸರಿಸುಮಾರು ಹನ್ನೊಂದು ಸಾವಿರಕ್ಕೂ ಅಧಿಕ ಹಣ ಉಳಿತಾಯ ಮಾಡಬಹುದಾಗಿದೆ. ಅಂದರೆ ಈ ಎಲ್ಲಾ ಡಿವೈಸ್‌ಗಳ ಸಾಮಾನ್ಯ ದರ 33,696ರೂ. ಗಳಾಗಲಿದೆ.


Click it and Unblock the Notifications








