300W ಚಾರ್ಜಿಂಗ್ ಮೂಲಕ ಘರ್ಜಿಸಲು ಮುಂದಾದ ರೆಡ್ಮಿ; 5 ನಿಮಿಷದಲ್ಲಿ ಫೋನ್ ಬ್ಯಾಟರಿ ಫುಲ್!
ಸ್ಮಾರ್ಟ್‌ಫೋನ್‌ಗಳು ಹಾಗೂ ಇನ್ನಿತರೆ ಸ್ಮಾರ್ಟ್‌ಡಿವೈಸ್‌ಗಳು ಎಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿವೆಯೋ ಅದೇ ರೀತಿಯಲ್ಲಿ ಈಗ ಚಾರ್ಜ್‌ರ್‌ಗಳು ಸಹ ಜನರನ್ನು ಸೆಳೆಯುತ್ತಿವೆ. ಇದರ ಭಾಗವಾಗಿಯೇ ಈಗ ಕೆಲವೇ ನಿಮಿಷಗಳಲ್ಲಿ ಮೊಬೈಲ್ ಚಾರ್ಜ್ ಮಾಡಬಹುದಾದ ಚಾರ್ಜಿಂಗ್ ಟೆಕ್ನಾಲಜಿಯನ್ನು ರೆಡ್ಮಿ ಪ್ರದರ್ಶಿಸಿದೆ.
ಹೌದು, ತಂತ್ರಜ್ಞಾನ ವಲಯದಲ್ಲಿ ದಿನಕ್ಕೊಂದು ಬೆಳವಣಿಗೆ ಕಂಡುಬರುತ್ತಿದ್ದು, ಇದೀಗ ರೆಡ್ಮಿಯ 300W ನ ಚಾಜಿಂಗ್ ತಂತ್ರಜ್ಞಾನ ಭಾರೀ ಸದ್ದು ಮಾಡುತ್ತಿದೆ. ಈ ಹಿಂದೆ ಸ್ಮಾರ್ಟ್‌ಫೋನ್ ಬ್ಯಾಟರಿ ಭರ್ತಿ ಮಾಡಲು ಗಂಟೆಗಟ್ಟಲೆ ಕಾಯಬೇಕಿತ್ತು. ಆದರೆ, ಈ ಹೊಸ ಚಾರ್ಜರ್‌ಗಳ ಮೂಲಕ ಕೆಲವೇ ನಿಮಿಷಗಳಲ್ಲಿ ಮೊಬೈಲ್‌ಗಳು ಚಾರ್ಜಿಂಗ್ ಆಗಲಿವೆ. ಇನ್ನು
300W ಚಾಜಿಂಗ್ ತಂತ್ರಜ್ಞಾನ ಹೇಗೆ ಕೆಲಸ ಮಾಡಲಿದೆ, ಇದು ಯಾವ ಮೊಬೈಲ್‌ನಲ್ಲಿ ಕಂಡುಬರಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ರೆಡ್ಮಿ 300W ಚಾಜಿಂಗ್ ತಂತ್ರಜ್ಞಾನ
ಪ್ರಮುಖ ಸ್ಮಾರ್ಟ್‌ಡಿವೈಸ್ ತಯಾರಿಕಾ ಸಂಸ್ಥೆಯಾದ ರೆಡ್ಮಿ ಇದೀಗ 300W ವೇಗದ ಚಾಜಿಂಗ್ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿದೆ. ಈ ಚಾರ್ಜರ್ ಅನ್ನು ಇಮ್ಮಾರ್ಟಲ್ ಸೆಕೆಂಡ್ ಚಾರ್ಜರ್ ಎಂದು ಕರೆಯಲಾಗುತ್ತಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಶಿಯೋಮಿ, ರೆಡ್ಮಿ ಫೋನ್‌ಗಳಲ್ಲಿ ಲಭ್ಯ ಇರುವ 120W ಹೈಪರ್‌ಚಾರ್ಜ್ ತಂತ್ರಜ್ಞಾನಕ್ಕಿಂತ ಬಹಳ ವಿಭಿನ್ನವಾದ ತಂತ್ರಜ್ಞಾನವನ್ನು ಇದು ಪಡೆದುಕೊಂಡಿದೆ.
ಮೊಬೈಲ್ ಬ್ಯಾಟರಿ ಭರ್ತಿ ಆಗಲು ಎಷ್ಟು ಸಮಯ ಬೇಕು?
ಇನ್ನು ಈ 300W ಚಾರ್ಜಿಂಗ್‌ಬೆಂಬಲ ಇರುವ ಸ್ಮಾರ್ಟ್‌ಫೋನ್ ಅಥವಾ 4,100mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇರುವ ಫೋನ್ ಕೇವಲ ಐದು ನಿಮಿಷಗಳಲ್ಲಿ ಪೂರ್ಣವಾಗಿ ಚಾರ್ಜ್ ಆಗಿದೆ. ಇದಕ್ಕಾಗಿ ರೆಡ್ಮಿ ನೋಟ್ 12 ಡಿಸ್ಕವರಿ ಆವೃತ್ತಿಯನ್ನು ಪರೀಕ್ಷಿಸಲಾಗಿದೆ. ಪರೀಕ್ಷೆ ವೇಳೆ ಈ ಫೋನ್ 3 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಆಗಿದ್ದು, ಐದು ನಿಮಿಷಕ್ಕೆಲ್ಲಾ ಪೂರ್ಣ ಭರ್ತಿಯಾಗಿದೆ.

120W ಹೈಪರ್‌ಚಾರ್ಜ್ ತಂತ್ರಜ್ಞಾನಕ್ಕಿಂತ ಭಿನ್ನ
ಈ ಹೊಸ 300W ಚಾರ್ಜಿಂಗ್ ತಂತ್ರಜ್ಞಾನ ಬಹಳ ಭಿನ್ನತೆಯಿಂದ ಕೂಡಿದೆ ಎನ್ನಲಾಗಿದೆ. ಅಂದರೆ ಡಬಲ್ GaN ತಂತ್ರಜ್ಞಾನವನ್ನು ಇದು ಬಳಕೆ ಮಾಡಲಿದ್ದು, 50 ಕ್ಕೂ ಹೆಚ್ಚು ಸುರಕ್ಷತಾ ವಸ್ತುಗಳು ಇದರಲ್ಲಿ ಇವೆ. ಜೊತೆಗೆ ಬ್ಯಾಟರಿಯು 15C ಸೆಲ್‌ಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಯಾವ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಾಗುತ್ತದೆ ಎಂಬುದರ ಬಗ್ಗೆ ಕಂಪೆನಿ ಮಾಹಿತಿ ನೀಡಿಲ್ಲ.
ಈ ನಡುವೆ ನೀವೇನಾದರೂ ವೇಗದ ಚಾರ್ಜಿಂಗ್ ಬೆಂಬಲ ಹೊಂದಿರುವ ಅದರಲ್ಲೂ 200w ಚಾರ್ಜಿಂಗ್ ಬೆಂಬಲ ಇರುವ ಫೋನ್ ಖರೀದಿ ಮಾಡಲು ಇಚ್ಚಿಸಿದರೆ ಇಲ್ಲಿದೆ ನೋಡಿ ಲಿಸ್ಟ್.
ಐಕ್ಯೂ 10 ಪ್ರೊ
ಈ ಫೋನ್ 200W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,700 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 50W ವಾಯರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ 200W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ತನ್ನ ಮೊದಲ ಸ್ಮಾರ್ಟ್‌ಫೋನ್ ಎಂದು ಐಕ್ಯೂ ಘೋಷಣೆ ಮಾಡಿದೆ.
ಶಿಯೋಮಿ ರೆಡ್ಮಿ ನೋಟ್ 12
ಶಿಯೋಮಿ ರೆಡ್ಮಿ ನೋಟ್ 12 ಫೋನ್ ಸಹ 200W ವೇಗದ ಚಾರ್ಜಿಂಗ್ ಬೆಂಬಲ ಹೊಂದಿದ್ದು, ಇದು 4300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಐಕ್ಯೂ 11 ಪ್ರೊ
ಐಕ್ಯೂನ ಮತ್ತೊಂದು ಫೋನ್ ಆದ ಐಕ್ಯೂ 11 ಪ್ರೊ ಫೋನ್ 200W ವೇಗದ ಚಾರ್ಜರ್ ಹೊಂದಿದ್ದು, 4700mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಹಾಗೆಯೇ ಈ ಫೋನ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ನ ಶಕ್ತಿ ಪಡೆದುಕೊಂಡಿದೆ.


Click it and Unblock the Notifications








