ವಿಶ್ವದ ಮೊದಲ 64ಎಂಪಿ ಕ್ಯಾಮೆರಾ ಫೋನ್‌ ಬಿಡುಗಡೆಗೆ ಸಜ್ಜಾದ ಶಿಯೋಮಿ!

|

ಶಿಯೋಮಿ ಸ್ಮಾರ್ಟ್‌ಫೋನ್‌ ಕಂಪನಿಯು ರೆಡ್ಮಿ ಸರಣಿಯಲ್ಲಿ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ 'ರೆಡ್ಮಿ ನೋಟ್ 7 ಪ್ರೊ' ಮೊಬೈಲ್‌ ಮಾರುಕಟ್ಟೆಯಲ್ಲಿ ಭಾರಿ ಸಂಚಲವನ್ನೇ ಸೃಷ್ಠಿಮಾಡಿತ್ತು. ಹಾಗೆಯೇ ಇತ್ತೀಚಿಗಷ್ಟೆ ಸೇಲ್ ಆರಂಭಿಸಿರುವ 'ರೆಡ್ಮಿ ಕೆ3 ಪ್ರೊ' ಸ್ಮಾರ್ಟ್‌ಫೋನ್‌ ಸದ್ಯ ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿದ್ದು, ಈ ನಡುವೆಯೇ ಕಂಪನಿಯು ಗ್ರಾಹಕರಿಗೆ ಈಗ ಮತ್ತೊಂದು ದೊಡ್ಡ ಅಚ್ಚರಿ ಹೊರಹಾಕಿದೆ.

ವಿಶ್ವದ ಮೊದಲ 64ಎಂಪಿ ಕ್ಯಾಮೆರಾ ಫೋನ್‌ ಬಿಡುಗಡೆಗೆ ಸಜ್ಜಾದ ಶಿಯೋಮಿ!

ಹೌದು, ಚೀನಾ ಮೂಲದ ಶಿಯೋಮಿ ಕಂಪನಿಯು ಹೊಸದೊಂದು ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ನೂತನ ಸ್ಮಾರ್ಟ್‌ಫೋನ್ ಬರೊಬ್ಬರಿ '64ಎಂಪಿ' ಸೆನ್ಸಾರ್‌ ಕ್ಯಾಮೆರಾ ಹೊಂದಿರುವ ಸೂಚನೆಯನ್ನು ಕಂಪನಿಯು ಬಹಿರಂಗ ಮಾಡಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಹುಬ್ಬೇರಿಸುವಂತೆ ಮಾಡಿದೆ. ಬಹುಶಃ ಹೊಸ ಫೋನ್‌ ಹೆಸರು 'ರೆಡ್ಮಿ ನೋಟ್‌ 8 ಪ್ರೊ' ಆಗಿರಲಿದೆ ಎನ್ನಲಾಗುತ್ತಿದೆ.

ವಿಶ್ವದ ಮೊದಲ 64ಎಂಪಿ ಕ್ಯಾಮೆರಾ ಫೋನ್‌ ಬಿಡುಗಡೆಗೆ ಸಜ್ಜಾದ ಶಿಯೋಮಿ!

ಈ ವರ್ಷದಲ್ಲಿ ಈಗಾಗಲೇ ಎರಡು ಹೈ ಎಂಡ್‌ ಕ್ಯಾಮೆರಾ ಫೀಚರ್ಸ್‌ ಫೋನ್‌ಗಳನ್ನು ಪರಿಚಯಿಸಿರುವ ಶಿಯೋಮಿ ಇದೀಗ ಮೂರನೇ ಅಚ್ಚರಿ ನೀಡುವ ಸನಿಹದಲ್ಲಿದೆ. ಹೊಸ ಫೋನಿನ್ 64ಎಂಪಿ ಕ್ಯಾಮೆರಾದಲ್ಲಿ ಸ್ಯಾಮ್‌ಸಂಗ್‌ ISOCELL ಬ್ರೈಟ್‌ GW1 ಸೆನ್ಸಾರ್‌ ಇರಲಿದೆ ಎನ್ನಲಾಗಿದೆ. ಈ ಕುರಿತು ಶಿಯೋಮಿ ಭಾರತೀಯ ಮ್ಯಾನೇಜಿಂಗ ಡೈರೆಕ್ಟರ್‌ ಮನು ಕುಮಾರ ಜೈನ್‌ ಸ್ಯಾಂಪಲ್‌ ಫೋಟೊಗಳನ್ನು ಶೇರ್‌ ಮಾಡಿದ್ದಾರೆ.

ವಿಶ್ವದ ಮೊದಲ 64ಎಂಪಿ ಕ್ಯಾಮೆರಾ ಫೋನ್‌ ಬಿಡುಗಡೆಗೆ ಸಜ್ಜಾದ ಶಿಯೋಮಿ!

ಸ್ಯಾಂಪಲ್‌ ಫೋಟೊ ಬಿಟ್ಟು ಬೇರೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಕಂಪನಿಯು ಬಿಟ್ಟುಕೊಟ್ಟಿಲ್ಲ. ಆದರೆ 64ಎಂಪಿ ಕ್ಯಾಮೆರಾವು ಅಲ್ಟ್ರಾ ಪಿಕ್ಸಲ್ ಮೋಡ್ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿರಲಿದ್ದು, ಫೋಟೊಗಳು ಹೈ ರೆಸಲ್ಯೂಶನ್‌ನಲ್ಲಿರುತ್ತವೆ. ಜೊತೆಗೆ ಅತ್ಯುತ್ತಮ ಝೂಮ್‌ ಸಾಮರ್ಥ್ಯವನ್ನು ಹೊಂದಿರಲಿದ್ದು, ಫೋಟೊವನ್ನು ಝೂಮ್‌ ಮಾಡಿದಾಗ ಪಿಕ್ಸಲ್ ಗುಣಮಟ್ಟವು ಉತ್ತಮವಾಗಿಯೇ ಕಾಣಿಸಿಕೊಳ್ಳವೆ ಎನ್ನಲಾಗಿದೆ.

ಓದಿರಿ : ಭಾರತದಲ್ಲಿ ಇಂದಿನಿಂದ 'ಒಪ್ಪೊ ಕೆ3' ಸೇಲ್ ಆರಂಭ!..ಹೇಗಿವೆ ಫೀಚರ್ಸ್?ಓದಿರಿ : ಭಾರತದಲ್ಲಿ ಇಂದಿನಿಂದ 'ಒಪ್ಪೊ ಕೆ3' ಸೇಲ್ ಆರಂಭ!..ಹೇಗಿವೆ ಫೀಚರ್ಸ್?

ಹಾಗೆಯೇ ಕಂಪನಿಯ MIUI ಕ್ಯಾಮೆರಾ ಆಪ್‌ ಸಹ ಇರಲಿದೆ ಎನ್ನಲಾಗಿದ್ದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುವ ಸೂಚನೆ ನೀಡಿದೆ. ಶಿಯೋಮಿ ಅಷ್ಟೇ ಅಲ್ಲದೇ ರಿಯಲ್ ಮಿ ಸ್ಮಾರ್ಟ್‌ಫೋನ್‌ ಕಂಪನಿಯು ಸಹ 64ಎಂಪಿ ಸೆನ್ಸಾರ್‌ ಕ್ಯಾಮೆರಾ ಪರಿಚಯಿಸಲು ಸಜ್ಜಾಗುತ್ತಿದ್ದು, ಸ್ಯಾಮ್‌ಸಂಗ್‌ ಕಂಪನಿಯು ಮುಂದಿನ ವರ್ಷ ಹೈ ಎಂಡ್‌ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುವ ಸಾಧ್ಯತೆಗಳು ಇವೆ.

ಓದಿರಿ : ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!ಓದಿರಿ : ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

Best Mobiles in India

English summary
Xiaomi is working to make the 64MP camera the new normal. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X