ಶಿಯೋಮಿ 'ರೆಡ್ಮಿ ಕೆ30' ಸ್ಮಾರ್ಟ್‌ಫೋನ್ ಬಿಡುಗಡೆ!.ಬೆಲೆ ಎಷ್ಟು?.ಫೀಚರ್ಸ್ ಏನು?
ಶಿಯೋಮಿಯ ಬಹುನಿರೀಕ್ಷಿತ ''ರೆಡ್ಮಿ ಕೆ30'' ಸ್ಮಾರ್ಟ್‌ಫೋನ್ ಅಂತೂ ಇಂದು ಬಿಡುಗಡೆ ಆಗಿದೆ. ರೆಡ್ಮಿ ಕೆ30 ಸ್ಮಾರ್ಟ್‌ಫೋನ್ ಇತ್ತೀಚಿನ ರೆಡ್ಮಿ ಕೆ20 ಸ್ಮಾರ್ಟ್‌ಫೋನ್ ಯಶಸ್ಸಿನ ಮುಂದಿನ ಭಾಗವಾಗವಾಗಿದ್ದು, ಸಂಪೂರ್ಣ ಅಚ್ಚರಿಯ ಫೀಚರ್ಸ್‌ಗಳನ್ನು ಒಳಗೊಂಡಿದೆ. ಪಂಚ್ ಹೋಲ್ ಡಿಸ್‌ಪ್ಲೇ, ಹಿಂಬದಿಯಲ್ಲಿ 64ಎಂಪಿ ಕ್ಯಾಮೆರಾ, ಡ್ಯುಯಲ್ ಸೆಲ್ಫಿ ಮತ್ತು 4,500mAh ಬ್ಯಾಟರಿ ಲೈಫ್ ಈ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ಸ್‌ಗಳಾಗಿವೆ.

ಹೌದು, ಶಿಯೋಮಿಯ ರೆಡ್ಮಿ ಕೆ30 ಸ್ಮಾರ್ಟ್‌ಫೋನ್ ಇಂದು (ಡಿಸೆಂಬರ್ 10) ಚೀನಾದಲ್ಲಿ ರಿಲೀಸ್ ಆಗಿದ್ದು, ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 765 ಪ್ರೊಸೆಸರ್ ಅನ್ನು ಒಳಗೊಂಡಿದೆ. ಹಾಗೆಯೇ 6GB/64GB, 8GB/128GB, ಮತ್ತು 12GB RAM/256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಜೊತೆಗೆ ಆಂಡ್ರಾಯ್ಡ್ 10 ಹಾಗೂ MIUI 11 ಓಎಸ್ ಸಪೋರ್ಟ್ ಸಹ ಒಳಗೊಂಡಿದೆ, ಹಾಗಾದರೇ ಶಿಯೋಮಿ ರೆಡ್ಮಿ ಕೆ30 ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
ರೆಡ್ಮಿ ಕೆ30 ಸ್ಮಾರ್ಟ್‌ಫೋನ್ 1080×2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಡಿಸ್‌ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅಂತರ 91% ಆಗಿದೆ. ಡಿಸ್‌ಪ್ಲೇ ರಿಫ್ರೇಶ್ ರೇಟ್ 120Hz ಆಗಿದ್ದು, ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ.

ಪ್ರೊಸೆಸರ್ ಸಾಮರ್ಥ್ಯ
ರೆಡ್ಮಿ ಕೆ30 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 765 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಹಾಗೂ MIUI 11 ಓಎಸ್ ಬೆಂಬಲವನ್ನು ಪಡೆದಿದೆ. ಇದರೊಂದಿಗೆ 6GB/64GB, 8GB/128GB, ಮತ್ತು 12GB RAM/256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ಹೆಚ್ಚಿಸಿಕೊಳ್ಳುವ ಅವಕಾಶ ಇದೆ.

ಸ್ಪೆಷಲ್ ಕ್ಯಾಮೆರಾ
ರೆಡ್ಮಿ ಕೆ30 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ರಿಯರ್ ಕ್ವಾಡ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಅದರಲ್ಲಿ ಮುಖ್ಯ ಕ್ಯಾಮೆರಾವು ಸೋನಿಯ IMX686 ಸೆನ್ಸಾರ್‌ನೊಂದಿಗೆ 64ಎಂಪಿ ಸಾಮರ್ಥ್ಯದಲ್ಲಿದೆ. ಉಳಿದಂತೆ 2ಎಂಪಿ ಸೆನ್ಸಾರ್ ಕ್ಯಾಮೆರಾ, 5ಎಂಪಿ ಸೆನ್ಸಾರ್ ಕ್ಯಾಮೆರಾ ಮತ್ತು 8ಎಂಪಿ ಸೆನ್ಸಾರ್‌ನ ಕ್ಯಾಮೆರಾಗಳು ಸಹ ಇವೆ. ಇನ್ನು ಎರಡು ಸೆಲ್ಫಿ ಕ್ಯಾಮೆರಾ ನೀಡಿದ್ದು, ಅವುಗಳು 20ಎಂಪಿ ಮತ್ತು 2ಎಂಪಿ ಸೆನ್ಸಾರ್ ಪಡೆದಿವೆ.

ಬ್ಯಾಟರಿ ಬಲ
ರೆಡ್ಮಿ ಕೆ30 ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 30W ಫಾಸ್ಟ್ ಚಾರ್ಜಿಂಗ್ ಸೌಲಬ್ಯವನ್ನು ಪಡೆದುಕೊಂಡಿದೆ. ಹಾಗೆಯೇ ರೆಡ್ಮಿ ಕೆ30 4G ವೇರಿಯಂಟ್ 27W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಬ್ಯಾಟರಿ ಲೈಫ್ ಉತ್ತಮವಾಗಿದ್ದು, ಅಧಿಕ ಡೇಟಾ ಬೇಡುವ ಗೇಮಿಂಗ್‌ಗೆ ಸಹ ಅತ್ಯುತ್ತಮ ಬ್ಯಾಕ್‌ಅಪ್ ನೀಡಲಿದೆ.

ಇತರೆ ಸೌಲಭ್ಯಗಳು
ರೆಡ್ಮಿ ಕೆ30 ಸ್ಮಾರ್ಟ್‌ಫೋನ್ 4G ಮತ್ತು 5G(ಚೀನಾದಲ್ಲಿ) ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಫೋನಿನಲ್ಲಿ NFC, ವೈಫೈ, ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5ಎಂಎಂ ಆಡಿಯೊ ಜಾಕ್, ಜಿಪಿಎಸ್ ನಂತಹ ಇತ್ತೀಚಿಗಿನ ಅಗತ್ಯ ಫೀಚರ್ಸ್‌ಗಳನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ
ಸದ್ಯ ಚೀನಾದಲ್ಲಿ ಬಿಡುಗಡೆ ಆಗಿರುವ ರೆಡ್ಮಿ ಕೆ30 ಸ್ಮಾರ್ಟ್‌ಫೋನ್ ಆರಂಭಿಕ 6GB RAM ಮತ್ತು 64GB ವೇರಿಯಂಟ್ ಬೆಲೆಯು 1,999 Yuan,(ಭಾರತದಲ್ಲಿ ಅಂದಾಜು 20,140ರೂ.). ಇನ್ನು 8GB + 128GB ವೇರಿಯಂಟ್ ಬೆಲೆಯು 2,299 Yuan (ಅಂದಾಜು 23,160ರೂ), ಮತ್ತು 12GB + 256GB ವೇರಿಯಂಟ್ ಬೆಲೆಯು 2599 Yuan (ಅಂದಾಜು 26,189ರೂ)ರೂಅತೀ ಶೀಘ್ರದಲ್ಲೇ ಭಾರತದಲ್ಲಿಯೂ ರೆಡ್ಮಿ ಕೆ30 4G ವೇರಿಯಂಟ್ ಲಾಂಚ್ ಆಗಲಿದೆ.


Click it and Unblock the Notifications