Home
ಸುದ್ದಿಜಾಲ

ಬಿಡುಗಡೆಗೆ ಸಜ್ಜಾದ ಶಿಯೋಮಿ 'ರೆಡ್ಮಿ ಕೆ30' ಫೋನ್!..ಕಾದಿದೆ ದೊಡ್ಡ ಅಚ್ಚರಿ!

ಬಜೆಟ್‌ ಬೆಲೆಯಲ್ಲಿ ಹಲವು ಶ್ರೇಣಿಯ ಸ್ಮಾರ್ಟ್‌ಫೋನ್‌ ಪರಿಚಯಿಸಿ ಗ್ರಾಹಕರನ್ನು ಸೆಳೆದಿರುವ ಶಿಯೋಮಿ ಕಂಪನಿಯು ಕೆಲವು ಫ್ಲ್ಯಾಗ್‌ಶಿಫ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಕಂಪನಿಯು ಈಗ ಮತ್ತೆ ಹೊಸದೊಂದು ಫ್ಲ್ಯಾಗ್‌ಶಿಫ್‌ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವತ್ತ ಚಿತ್ತ ಹರಿಸಿದ್ದು, ಅದುವೇ 'ರೆಡ್ಮಿ ಕೆ30'. ಈ ಸ್ಮಾರ್ಟ್‌ಫೋನ್ ಅತೀ ಹೆಚ್ಚಿನ ಇಮೇಜ್‌ ಸೆನ್ಸಾರ್ ಹೊಂದಿರಲಿದೆ.

ರೆಡ್ಮಿ ಕೆ30

ಹೌದು, ಶಿಯೋಮಿ ಇತ್ತೀಚಿಗೆ ರೆಡ್ಮಿ ಕೆ20 ಸರಣಿಯ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿ ಭಾರಿ ಸದ್ದು ಮಾಡಿತ್ತು ಅದರ ಬೆನ್ನಲ್ಲೇ ಈಗ 'ರೆಡ್ಮಿ ಕೆ30' ಹೆಸರಿನ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್ ಇದೇ ಡಿಸೆಂಬರ್ 10ರಂದು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳಿವೆ. ಈ ಫೋನ್ ಸೋನಿಯ IMX686 ಸೆನ್ಸಾರ್ ಹೊಂದಿರಲಿರುವುದು ಪ್ರಮುಖ ಹೈಲೈಟ್‌ ಆಗಿದೆ.

ಮೂರು ಕ್ಯಾಮೆರಾ

ಈ ಫೋನ್‌ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಆಗಿರಲಿದೆ. ಅತ್ಯುತ್ತಮ ಇಮೇಜ್ ಸೆನ್ಸಾರ್ ಮೂಡಿಬರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 13ಎಂಪಿ ಸೆನ್ಸಾರ್‌ ಆಗಿರಲಿದ್ದು, ತೃತೀಯ ಕ್ಯಾಮೆರಾ ಸೆನ್ಸಾರ್ 8ಎಂಪಿ ಆ ಗಿರಲಿದೆ. ಕೊನೆಯ ಕ್ಯಾಮೆರಾವು 2 ಎಂಪಿ ಸೆನ್ಸಾರ್ ಪಡೆದಿರಲಿದೆ. ಹಾಗೆಯೇ ಡ್ಯುಯಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಇರಲಿದ್ದು, ಅವುಗಳು ಕ್ರಮವಾಗಿ 20ಎಂಪಿ ಮತ್ತು 2ಎಂಪಿ ಆಗಿರಲಿವೆ.

ಪಿಕ್ಸಲ್ ರೆಸಲ್ಯೂಶನ್‌

ಬರಲಿರುವ ರೆಡ್ಮಿ ಕೆ30 ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.66 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಹಾಗೆಯೇ ಪಂಚ್ ಹೋಲ್ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿರಲಿದೆ. ಹಾಗೆಯೇ ಡಿಸ್‌ಪ್ಲೇಯಲ್ಲಿಯೇ ಎರಡು ಫ್ರಂಟ್ ಫೇಸಿಂಗ್ ಕ್ಯಾಮೆರಾ ಸೆನ್ಸಾರ್‌ಗಳನ್ನು ಸಹ ಒಳಗೊಂಡಿರಲಿದೆ. ಜೊತೆಗೆ ಸೈಡ್‌ ಮೌಂಟೆಡ್‌ ಫ್ರಿಂಗರ್‌ಪ್ರಿಂಟ್‌ ಸೆನ್ಸಾರ್ ಸಹ ಇರಲಿದೆ.

ಸ್ನ್ಯಾಪ್‌ಡ್ರಾಗನ್ 730G

ಈ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730G ಪ್ರೊಸೆಸರ್‌ ಹೊಂದಿರಲಿದ್ದು, ಇದರೊಂದಿಗೆ ಅಡ್ರೆನೊ 618 ಗ್ರಾಫಿಕ್ಸ್‌ ಸಹ ಇರಲಿದೆ. ಹಾಗೆಯೇ ಈ ಫೋನ್ 5G ಸಪೋರ್ಟ್ ಪಡೆದಿರಲಿದ್ದು, ಇದರೊಂದಿಗೆ ಆಂಡ್ರಾಯ್ಡ್‌ 10 ಆಕ್ಸಿಜನ್ ಓಎಸ್‌ ಬೆಂಬಲ ಪಡೆದಿರಲಿದೆ. ಜೊತೆಗೆ ಕಂಪನಿಯ MIUI 11 ಅಪ್‌ಡೇಟ್ ಸಹ ಸೇರಿರಲಿದೆ. 6GB RAM ಮತ್ತು 8GB RAM ವೇರಿಯಂಟ್‌ ಆಯ್ಕೆಗಳು ಇರಲಿವೆ.

Best Mobiles in India

English summary
Redmi K30 is all set to get launched in the company’s home market on 10th December. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+