ರೆಡ್ಮಿ K50 ಮತ್ತು ರೆಡ್ಮಿ K50 ಪ್ರೊ ಲಾಂಚ್; ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ಸಂಸ್ಥೆ ತನ್ನ ಬಹುನಿರೀಕ್ಷಿತ ರೆಡ್ಮಿ K50 ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್‌ ಮಾಡಿದೆ. ಈ ಸರಣಿಯಲ್ಲಿ ರೆಡ್ಮಿ K50 ಮತ್ತು ರೆಡ್ಮಿ K50 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ರಚನೆ ಅನ್ನು ಪಡೆದುಕೊಂಡಿದ್ದು, ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ ಬಿಗ್‌ ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿವೆ.

ರೆಡ್ಮಿ K50 ಮತ್ತು ರೆಡ್ಮಿ K50 ಪ್ರೊ ಲಾಂಚ್; ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌!

ಹೌದು, ಶಿಯೋಮಿಯ ಕಂಪೆನಿ ರೆಡ್ಮಿ K50 ಸ್ಮಾರ್ಟ್‌ಫೋನ್ ಸರಣಿಯಲ್ಲಿ ರೆಡ್ಮಿ K50 ಮತ್ತು ರೆಡ್ಮಿ K50 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಲಿಕ್ವಿಡ್ ಕೂಲಿಂಗ್, 120Hz ಡಿಸ್‌ಪ್ಲೇ ರೀಫ್ರೇಶ್ ರೇಟ್‌ ಅನ್ನು ಒಳಗೊಂಡಿವೆ. ಹಾಗೆಯೇ ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಹಾಗೂ ಹೈ ಎಂಡ್ ಕ್ಯಾಮೆರಾ ಸೆನ್ಸಾರ್ ರಚನೆಯನ್ನು ಪಡೆದಿವೆ. ಹಾಗಾದರೇ ರೆಡ್ಮಿ K50 ಮತ್ತು ರೆಡ್ಮಿ K50 ಪ್ರೊ ಸ್ಮಾರ್ಟ್‌ಫೋನ್‌ ಗಳ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ K50 ಮತ್ತು ರೆಡ್ಮಿ K50 ಪ್ರೊ ಲಾಂಚ್; ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌!

ರೆಡ್ಮಿ K50 ಪ್ರೊ ಫೀಚರ್ಸ್‌
ರೆಡ್ಮಿ K50 ಪ್ರೊ ಫೋನ್ 1440 x 3200 ಪಿಕ್ಸೆಲ್‌ ರೆಸಲ್ಯುಶನ್‌ನೊಂದಿಗೆ 6.7 ಇಂಚಿನ ಸ್ಯಾಮ್‌ಸಂಗ್ ನಿರ್ಮಿತ OLED 2K ಡಿಸ್‌ಪ್ಲೇ ಅನ್ನು ಪಡೆದಿದೆ. ಇದು ಡಾಲ್ಬಿ ವಿಷನ್, HDR10+ ಬೆಂಬಲ ಮತ್ತು 120Hz. ಡಿಸ್‌ಪ್ಲೇಯು 1,200 ನಿಟ್‌ಗಳ ಬ್ರೈಟ್ನೆಸ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಜೊತೆಗೆ 12GB ವರೆಗಿನ RAM ಅನ್ನು ಹೊಂದಿದೆ.

ರೆಡ್ಮಿ K50 ಪ್ರೊ ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 100 ಮೆಗಾ ಪಿಕ್ಸೆಲ್ 1/1.52-ಇಂಚಿನ ಸೆನ್ಸಾರ್ ಹೊಂದಿದೆ. ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಮತ್ತು ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಮುಂಭಾಗದಲ್ಲಿ, ಇದು 20 ಮೆಗಾ ಪಿಕ್ಸೆಲ್ ಸೋನಿ IMX596 ಸಂವೇದಕವನ್ನು ಹೊಂದಿದೆ. ಈ ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 120W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಪಡೆದಿದೆ.

ರೆಡ್ಮಿ K50 ಮತ್ತು ರೆಡ್ಮಿ K50 ಪ್ರೊ ಲಾಂಚ್; ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌!

ರೆಡ್ಮಿ K50 ಫೀಚರ್ಸ್‌
ರೆಡ್ಮಿ K50 ಫೋನ್ ಅಧಿಕ ಪಿಕ್ಸೆಲ್‌ ರೆಸಲ್ಯುಶನ್‌ನೊಂದಿಗೆ 6.7 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದೆ. ಇದು 120Hz. ಡಿಸ್‌ಪ್ಲೇಯು 1,200 ನಿಟ್‌ಗಳ ಬ್ರೈಟ್ನೆಸ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಜೊತೆಗೆ 12GB ವರೆಗಿನ RAM ಅನ್ನು ಹೊಂದಿದೆ.

ರೆಡ್ಮಿ K50 ಪ್ರೊ ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ 1/1.52-ಇಂಚಿನ ಸೆನ್ಸಾರ್ ಹೊಂದಿದೆ. ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಮತ್ತು ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಮುಂಭಾಗದಲ್ಲಿ, ಇದು 20 ಮೆಗಾ ಪಿಕ್ಸೆಲ್ ಸೋನಿ IMX596 ಸಂವೇದಕವನ್ನು ಹೊಂದಿದೆ. ಈ ಫೋನ್ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 67W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಪಡೆದಿದೆ.

ಬೆಲೆ ಎಷ್ಟು?
ರೆಡ್ಮಿ K50 ಪ್ರೊ ಫೋನ್‌ 8GB + 128GB ಬೇಸಿಕ್ ವೇರಿಯಂಟ್‌ CNY 2,999 (ಭಾರತದಲ್ಲಿ ಅಂದಾಜು ಸರಿಸುಮಾರು 35,900ರೂ.) ಆಗಿದೆ. ಹಾಗೆಯೇ ರೆಡ್ಮಿ K50 ಪೋನ್‌ 8GB + 128GB ಆರಂಭಿಕ ವೇರಿಯಂಟ್ ದರವು CNY 2,399 (ಭಾರತದಲ್ಲಿ ಅಂದಾಜು ಸುಮಾರು ರೂ. 28,700) ಆಗಿದೆ. ಇನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು ಡಿಮ್ ಲೈಟ್, ಫ್ಯಾಂಟಸಿ, ಇಂಕ್ ಫೆದರ್ ಮತ್ತು ಸಿಲ್ವರ್ ಟ್ರೇಸಸ್ ಬಣ್ಣ ರೂಪಾಂತರಗಳಲ್ಲಿ ಲಭ್ಯವಿರುತ್ತವೆ.

Best Mobiles in India

English summary
Redmi K50 Pro, Redmi K50 With Liquid Cooling Launched: Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X