Home
ಸುದ್ದಿಜಾಲ

ರೆಡ್ಮಿ K50i 5G ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!..ಬ್ಯಾಂಕ್‌ ಆಫರ್‌ ಸಹ ಲಭ್ಯ!

ಶಿಯೋಮಿ ಸಂಸ್ಥೆಯು ಬಜೆಟ್‌ ಬೆಲೆಯಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆ ಪೈಕಿ ರೆಡ್ಮಿ K50i ಫೋನ್‌ ಬೊಂಬಾಟ್‌ ಫೀಚರ್ಸ್‌ ಹಾಗೂ ಆಕರ್ಷಕ ಡಿಸೈನ್‌ನಿಂದ ಗ್ರಾಗಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್‌ ಇದೀಗ ಅಮೆಜಾನ್ ಇ ಕಾಮರ್ಸ್‌ ತಾಣದಲ್ಲಿ ಬಿಗ್ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಬ್ಯ ಇದ್ದು, ಗ್ರಾಹಕರು ಅಚ್ಚರಿ ಆಗುವಂತೆ ಮಾಡಿದೆ.

ಹೌದು, ಶಿಯೋಮಿ ಸಂಸ್ಥೆಯು ರೆಡ್ಮಿ K50i ಸ್ಮಾರ್ಟ್‌ಫೋನ್‌ ಅಮೆಜಾನ್ ಆನ್‌ಲೈನ್‌ ತಾಣದಲ್ಲಿ ಈಗ 34% ನಷ್ಟು ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ 6GB RAM + 128GB ಸ್ಟೋರೇಜ್‌ನ ವೇರಿಯಂಟ್‌ 31,999ರೂ. ಗಳ ಬೆಲೆಯನ್ನು ಹೊಂದಿದ್ದು, ಈಗ ಗ್ರಾಹಕರು 20,999ರೂ. ಗಳ ರಿಯಾಯಿತಿ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಜೊತೆಗೆ ಬ್ಯಾಂಕ್ ರಿಯಾಯಿತಿ ಸಹ ಲಭ್ಯವಾಗಲಿವೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

ರೆಡ್ಮಿ K50i 5G ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!..ಬ್ಯಾಂಕ್‌ ಆಫರ್‌ ಸಹ ಲಭ್ಯ!

ರೆಡ್ಮಿ K50i ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ : ರೆಡ್ಮಿ K50i ಸ್ಮಾರ್ಟ್‌ಫೋನ್ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಮಾದರಿಯ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಫೋನ್ 20.5:9 ರಚನೆಯನ್ನು ಹೊಂದಿದ್ದು, ಫೋನಿನ ಮೇಲ್ಭಾಗದ ಮಧ್ಯದಲ್ಲಿ ಪಂಚ್‌ಹೋಲ್‌ ರಚನೆ ಇದೆ. ಜೊತೆಗೆ 144Hz ರಿಫ್ರೇಶ್‌ ರೇಟ್‌ ಅನ್ನು ಒಳಗೊಂಡಿದ್ದು, ಡಾಲ್ಬಿ ವಿಷನ್ ಮತ್ತು HDR10 ಸಪೋರ್ಟ್‌ ಸಹ ಪಡೆದಿದೆ.

ರೆಡ್ಮಿ K50i ಪ್ರೊಸೆಸರ್‌ ಪವರ್‌ : ರೆಡ್ಮಿ K50i ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 8100 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ ಈ ಫೋನ್ ಎರಡು ವೇರಿಯಂಟ್‌ ಮಾಡೆಲ್‌ಗಳಲ್ಲಿ ಕಾಣಿಸಿಕೊಂಡಿದೆ. ಅವುಗಳು ಕ್ರಮವಾಗಿ 8GB + 256GB ಮತ್ತು 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಗಿವೆ.

ರೆಡ್ಮಿ K50i 5G ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!..ಬ್ಯಾಂಕ್‌ ಆಫರ್‌ ಸಹ ಲಭ್ಯ!

ರೆಡ್ಮಿ K50i ಕ್ಯಾಮೆರಾ ಸೆನ್ಸಾರ್ ರಚನೆ : ರೆಡ್ಮಿ K50i ಸ್ಮಾರ್ಟ್‌ಫೋನ್ ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿದ್ದು, ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ.

ರೆಡ್ಮಿ K50i ಬ್ಯಾಟರಿ ಪವರ್‌ ಹಾಗೂ ಇತರೆ : ರೆಡ್ಮಿ K50i ಸ್ಮಾರ್ಟ್‌ಫೋನ್ 5,080mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 67W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಪಡೆದಿದೆ. ಇದು ಲಿಕ್ವಿಡ್‌ಕೂಲ್ 2.0 ಸೌಲಭ್ಯ ಹೊಂದಿದೆ. ಹಾಗೆಯೇ ಇದು ಆಂಡ್ರಾಯ್ಡ್ 12 ಆಧಾರಿತ MIUI 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ IP53 ರೇಟಿಂಗ್, ಡಾಲ್ಬಿ ಅಟ್ಮೋಸ್‌, Wi-Fi 6, 3.5mm ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ ಜೊತೆಗೆ ಡ್ಯುಯಲ್ ಸ್ಪೀಕರ್‌ಗಳನ್ನು ಒಳಗೊಂಡಿದೆ.

ರೆಡ್ಮಿ K50i ಮೆಮೊರಿ ಮತ್ತು ಕಲರ್ ಆಯ್ಕೆ : ರೆಡ್ಮಿ K50i ಸ್ಮಾರ್ಟ್‌ಫೋನ್ 6GB + 128 GB ಮತ್ತು 8GB + 256 GB ಸ್ಟೋರೇಜ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನು ಈ ಫೋನ್ ಕ್ವಿಕ್ ಸಿಲ್ವರ್, ಸ್ಟೆಲ್ತ್ ಬ್ಲ್ಯಾಕ್ ಮತ್ತು ಫ್ಯಾಂಟಮ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಲಭ್ಯ.

Best Mobiles in India

English summary
Redmi K50i 5G available at big discount price on amazon: Check Offer Price and Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+