Redmi: ಈ ರೆಡ್ಮಿ ಫೋನ್ ಖರೀದಿಸಿ 6 ಸಾವಿರ ಉಳಿಸಿ; ಎಲ್ಲಿ ಈ ವಿಶೇಷ ಆಫರ್?
ರೆಡ್ಮಿ ಫೋನ್‌ಗಳಿಗೆ (Redmi phone) ಭಾರತದಲ್ಲಿ ವಿಶೇಷ ಬೇಡಿಕೆ ಇದ್ದು, ಅದರಲ್ಲೂ ಮಿಡ್ ರೇಂಜ್ ಫೋನ್‌ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ನಡುವೆ ರೆಡ್ಮಿಯ ಸಾಕಷ್ಟು ಫೋನ್‌ಗಳಿಗೆ ವಿವಿಧ ರೀತಿಯಲ್ಲಿ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಇದರ ಸಾಲಿಗೆ ಈಗ ಮತ್ತೊಂದು ಆಕರ್ಷಕ ಫೋನ್ ಸೇರಿದೆ.
ಹೌದು, ರೆಡ್ಮಿ K50i 5G ಸ್ಮಾರ್ಟ್‌ಫೋನ್‌ಗೆ (Redmi K50i 5G smartphone) ವಿಶೇಷ ರಿಯಾಯಿತಿ ನೀಡಲಾಗಿದೆ. ಈ ಮೂಲಕ ಗ್ರಾಹಕರು 6 ಸಾವಿರಕ್ಕೂ ಅಧಿಕ ಹಣ ಉಳಿತಾಯ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹಾಗೂ 256 GB ಇಂಟರ್ ಸ್ಟೋರೇಜ್ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಈ ಫೋನ್‌ಗೆ ಇರುವ ಆಫರ್ ಏನು ಅನ್ನೋದನ್ನು ತಿಳಿಯೋಣ ಬನ್ನಿ.

ರೆಡ್ಮಿ K50i 5G ಸ್ಮಾರ್ಟ್‌ಫೋನ್ ಅಫರ್ ವಿವರ: ಈ ಸ್ಮಾರ್ಟ್‌ಫೋನ್ 35,999ರೂ.ಗಳ ಸಾಮಾನ್ಯ ದರ ಹೊಂದಿದ್ದು, ನೀವೀಗ ಇದನ್ನು 29,999ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್ ಈ ಫೋನ್‌ಗೆ 16% ರಿಯಾಯಿತಿ ನೀಡಲಾಗಿದೆ. ಈ ಕಾರಣಕ್ಕೆ ನೀವು ಈ ಫೋನ್ ಖರೀದಿಯಲ್ಲಿ ಆರು ಸಾವಿರ ಹಣ ಉಳಿತಾಯ ಮಾಡಬಹುದು.
ಇದರೊಂದಿಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ (Flipkart Axis Bank credit Card) ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಸಹ ಸಿಗಲಿದೆ. ಜೊತೆಗೆ ಡೆಬಿಟ್ ಕಾರ್ಡ್ ಇಎಮ್‌ಐ ಆಯ್ಕೆ ಸಹ ನೀಡಲಾಗಿದ್ದು, ತಿಂಗಳಿಗೆ 1,858ರೂ.ಗಳನ್ನು ಪಾವತಿ ಮಾಡುವ ಮೂಲಕ ಈ ಫೋನ್ ಖರೀದಿ ಮಾಡಬಹುದು. ಜೊತೆಗೆ ನಿಮಗೆ ಸ್ಟ್ಯಾಂಡರ್ಡ್ ಇಎಮ್‌ಐ ಆಯ್ಕೆ ಸಹ ಇದೆ. ಇದರೊಂದಿಗೆ ಸ್ಪಾಟಿಫೈ ಪ್ರೀಮಿಯಂ ಸೌಲಭ್ಯವನ್ನೂ ಸಹ ಪಡೆದುಕೊಳ್ಳಬಹುದಾಗಿದೆ.
ರೆಡ್ಮಿ K50i 5G ಡಿಸ್‌ಪ್ಲೇ ವಿವರ: ಇನ್ನು ಈ ಫೋನ್ ಅನ್ನು ನೀವು ಖರೀದಿ ಮಾಡಲು ಇಚ್ಚಿಸಿದ್ರೆ ಇದರ ಪ್ರಮುಖ ಫೀಚರ್ಸ್ ಕಡೆ ಕಣ್ಣಾಯಿಸುವುದು ಅಗತ್ಯವಾಗಿದೆ. ಅದರಂತೆ ಈ ಫೋನ್ 6.6 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇ (IPS LCD display) ಹೊಂದಿದೆ. 407 ppi ಪಿಕ್ಸೆಲ್ ಸಾಂದ್ರತೆ, 144Hz ರಿಫ್ರೆಶ್ ರೇಟ್ ಫೋನ್ ಬಳಕೆದಾರರಿಗೆ ವಿಶೇಷವಾದ ಅನುಭವ ನೀಡಲಿದೆ. ಅದರಲ್ಲೂ 2460 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರುವುದರಿಂದ ಸಿನಿಮಾ ಹಾಗೂ ಗೇಮಿಂಗ್‌ನಲ್ಲಿ ಹೊಸ ಅನುಭವವನ್ನೇ ಪಡೆಯಬಹುದು.

ರೆಡ್ಮಿ K50i 5G ಪ್ರೊಸೆಸರ್ ಮಾಹಿತಿ: ಇನ್ನು ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 MT6895Z ಚಿಪ್‌ಸೆಟ್ ಮತ್ತು ಅಕ್ವಾ ಕೋರ್ ಸಿಪಿಯು ನೊಂದಿಗೆ ಸಜ್ಜುಗೊಂಡಿದೆ. ಅದರಲ್ಲೂ ಮಾಲಿ -G610 MC6 GPU ಮತ್ತು 6GB RAM ಆಯ್ಕೆ ಈ ಫೋನ್ ಅನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿ ಮಾಡಿದೆ. ಇದರೊಂದಿಗೆ ಲಿಕ್ವಿಡ್‌ಕೂಲ್ 2.0 ಸುಧಾರಿತ ಆವಿ ಚೇಂಬರ್ ತಂತ್ರಜ್ಞಾನದ ಆಯ್ಕೆ ಸಹ ಈ ಫೋನ್‌ನಲ್ಲಿದೆ. ಅಂದರೆ ಈ ಫೋನ್ ಎಂದಿಗೂ ಬಿಸಿಯಾಗದಂತೆ ಕಾಪಾಡುತ್ತದೆ.

ರೆಡ್ಮಿ K50i 5G ಕ್ಯಾಮೆರಾ ರಚನೆ: ಕ್ಯಾಮರಾ ವಿಚಾರಕ್ಕೆ ಬಂದರೆ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದೆ. ಅದರಲ್ಲಿ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಪಡೆದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆ ಉದ್ದೇಶಕ್ಕಾಗಿ ಇದರಲ್ಲಿ 16 ಮೆಗಾಪಿಕ್ಸೆಲ್ ಸೆನ್ಸರ್ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ 67W ಟರ್ಬೊ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5080mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ.


Click it and Unblock the Notifications








