Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಅಬ್ಬರಿಸಲು ರೆಡಿಯಾಗುತ್ತಿದೆ ರೆಡ್ಮಿ K60 ಅಲ್ಟ್ರಾ; ಪ್ರೊಸೆಸರ್‌ ಯಾವುದು!?

ರೆಡ್ಮಿ ಸ್ಮಾರ್ಟ್‌ಫೋನ್‌ಗಳು ಏನಾದರೂ ಲಾಂಚ್‌ ಆದರೆ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸುತ್ತವೆ. ಯಾಕೆಂದರೆ ಈ ಫೋನ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ಇದರ ನಡುವೆ ರೆಡ್ಮಿ ಕಂಪನಿಯು ರೆಡ್ಮಿ K60 ಅಲ್ಟ್ರಾ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ.

ಹೌದು, ಡಿಸೆಂಬರ್‌ 2022 ರಲ್ಲಿ ರೆಡ್ಮಿ K60 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡುವ ಮೂಲಕ ಕಂಪೆನಿ ಜನಪ್ರಿಯತೆ ಗಳಿಸಿಕೊಂಡಿತ್ತು. ಇದೇ ಸರಣಿ ಸರಣಿ ಸ್ಮಾರ್ಟ್‌ಫೋನ್‌ ಆಗಿರುವ ರೆಡ್ಮಿ K60 ಅಲ್ಟ್ರಾ ಸ್ಮಾರ್ಟ್‌ಫೋನ್‌ (Redmi K60 Ultra) ಅನ್ನು ಅನಾವರಣ ಮಾಡಲಾಗುತ್ತಿದೆ. ಈ ಫೋನ್‌ ಲಾಂಚ್‌ ಆಗುವ ಮುನ್ನವೇ ಕೆಲವು ಫೀಚರ್ಸ್‌ಗಳು ಲೀಕ್‌ ಆಗಿದ್ದು, ಅದರಂತೆ ಯಾವಾಗ ಈ ಫೋನ್‌ ಲಾಂಚ್‌ ಆಗಲಿದೆ?, ಲೀಕ್‌ ಆದ ಫೀಚರ್ಸ್‌ ಯಾವುವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಮಾರುಕಟ್ಟೆಯಲ್ಲಿ ಅಬ್ಬರಿಸಲು ರೆಡಿಯಾಗುತ್ತಿದೆ ರೆಡ್ಮಿ K60 ಅಲ್ಟ್ರಾ...

ರೆಡ್ಮಿ K60 ಅಲ್ಟ್ರಾ ಡಿಸ್‌ಪ್ಲೇ ವಿವರ

ಲೀಕ್‌ ಆದ ಮಾಹಿತಿಯಂತೆ ಈ ರೆಡ್ಮಿ K60 ಅಲ್ಟ್ರಾ ಸ್ಮಾರ್ಟ್‌ಫೋನ್ 6.67 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದ್ದು, ಇದು 2712 x 1220 ಪಿಕ್ಸೆಲ್‌ ರೆಸಲ್ಯೂಶನ್ ನೀಡಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಈ ಫೋನ್ 144Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಸಹ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಈ ಫೋನ್‌ ಕೆಲವು ಫೀಚರ್ಸ್‌ಗಳು ಈ ಹಿಂದೆ ಲಾಂಚ್‌ ಆಗಿರುವ K50 ಅಲ್ಟ್ರಾವನ್ನೇ ಹೋಲಲಿದೆ ಎಂದೂ ಸಹ ಹೇಳಲಾಗುತ್ತಿದೆ.

ರೆಡ್ಮಿ K60 ಅಲ್ಟ್ರಾ ಫೋನ್‌ನ ಪ್ರೊಸೆಸರ್‌

ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ನೊಂದಿಗೆ ಈ ವರ್ಷದ ಆರಂಭದಲ್ಲಿ ರೆಡ್ಮಿ K60 ಪ್ರೊ ಲಾಂಚ್‌ ಆಗಿತ್ತು. ಹೀಗಾಗಿ ಇದಕ್ಕಿಂತ ಬಲಶಾಲಿಯ ಪ್ರೊಸೆಸರ್‌ ಅನ್ನು ರೆಡ್ಮಿ K60 ಅಲ್ಟ್ರಾ ಫೋನ್‌ ಪಡೆದುಕೊಳ್ಳಲಿದೆ ಎನ್ನಲಾಗಿದೆ. ಆದರೂ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9000 ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಳ್ಳಲಿದೆ ಎಂದು ಕಡೆಯಿಂದ ತಿಳಿದುಬಂದಿದೆ. ಈ ಪ್ರೊಸೆಸರ್‌ ಸ್ನಾಪ್‌ಡ್ರಾಗನ್ 8 ಜನ್‌ 2 ರಂತೆ ಹೆಚ್ಚು ಶಕ್ತಿಯುತವಾಗಿಲ್ಲ ಎಂಬುದನ್ನು ಗಮನಿಸಬೇಕಿದೆ.

ಮಾರುಕಟ್ಟೆಯಲ್ಲಿ ಅಬ್ಬರಿಸಲು ರೆಡಿಯಾಗುತ್ತಿದೆ ರೆಡ್ಮಿ K60 ಅಲ್ಟ್ರಾ...

ಇನ್ನುಳಿದಂತೆ ಈ ಫೋನ್‌ ಚಾರ್ಜಿಂಗ್‌ ಫೀಚರ್ಸ್‌ಗಳು ಲೀಕ್‌ ಆಗಿದ್ದು, ಅದರಂತೆ ಇದು 100W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಇದನ್ನು ರೆಡ್ಮಿ K60 ಪ್ರೊ ಗೆ ಹೋಲಿಕೆ ಮಾಡಿದರೆ ಈ ಫೋನ್ 120W ನ ವೇಗದ ಚಾರ್ಜಿಂಗ್ ಹೊಂದಿದೆ. ಅದಾಗ್ಯೂ ಅಲ್ಟ್ರಾದಲ್ಲಿ ಕಾಣಿಸಿಕೊಳ್ಳುವ ಈ ಚಾರ್ಜಿಂಗ್‌ ಫೀಚರ್ಸ್‌ ಬಹಳ ವಿಭಿನ್ನವಾಗಿರಲಿದೆ ಎನ್ನಲಾಗಿದೆ.

ರೆಡ್ಮಿ K60 ಅಲ್ಟ್ರಾ ಲಾಂಚ್‌ ಯಾವಾಗ?

ರೆಡ್ಮಿಯು ಚೀನಾದಲ್ಲಿ ಈ K ಸರಣಿ ಫೋನ್ ಅನ್ನು ಈ ವರ್ಷದ ಕೊನೆಯಲ್ಲಿ ಲಾಂಚ್‌ ಮಾಡುವ ಸಾಧ್ಯತೆಯಿದೆ ಇದೆ ಎನ್ನಲಾಗಿದೆ. ಹಾಗೆಯೇ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಲಾಂಚ್‌ ಆಗಲಿದೆ ಎನ್ನುವ ವದಂತಿಗಳು ಎಲ್ಲಡೆ ಹರಿದಾಡುತ್ತಿವೆ. ಅದಾಗ್ಯೂ ಈ ಮಾಹಿತಿ ಅಸ್ಪಷ್ಟವಾಗಿದೆ.

ಮಾರುಕಟ್ಟೆಯಲ್ಲಿ ಅಬ್ಬರಿಸಲು ರೆಡಿಯಾಗುತ್ತಿದೆ ರೆಡ್ಮಿ K60 ಅಲ್ಟ್ರಾ...

ಇನ್ನುಳಿದಂತೆ ಈ ಫೋನ್‌ ಇತರೆ ಫೀಚರ್ಸ್‌ಗಳ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಇದರ ನಡುವೆ ರೆಡ್ಮಿ K50 ಅಲ್ಟ್ರಾದ ಉತ್ತರಾಧಿಕಾರಿಯಾಗಿರುವ ಈ ಫೋನ್ ಕೆಲವು ಹೊಸ ನವೀಕರಣಗಳನ್ನು ಹೊಂದಿರಲಿದೆ ಎಂದು ನಿರೀಕ್ಷಿಸಬಹುದು. ಹಾಗೆಯೇ ರೆಡ್ಮಿ K50 ಅಲ್ಟ್ರಾ ಸ್ಮಾರ್ಟ್‌ಫೋನ್ 6.67 ಇಂಚಿನ 1.5K ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಹೊಂದಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 8+ ಜನ್‌ 1 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಈ ಫೋನ್‌ ಆಂಡ್ರಾಯ್ಡ್‌ 12 ಆಧಾರಿತ MIUI 13 ಇದನ್ನು ರನ್‌ ಮಾಡಲಿದೆ.

Best Mobiles in India

English summary
stage is set for the unveiling of the Redmi K60 Ultra smartphone and some features have been leaked before the launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+