Home
ಸುದ್ದಿಜಾಲ

ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ ರೆಡ್ಮಿಯ ಈ ಹೊಸ ಫೋನ್‌!..ಬೆಲೆ ಎಷ್ಟು?

ಜನಪ್ರಿಯ ಶಿಯೋಮಿ ಮೊಬೈಲ್‌ ಕಂಪನಿಯು ರೆಡ್ಮಿ ಸರಣಿಯಲ್ಲಿ ಈಗಾಗಲೇ ಹಲವು ಮೊಬೈಲ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಈಗ ಶಿಯೋಮಿಯು ರೆಡ್ಮಿ K70 ( Redmi K70 ) ಸ್ಮಾರ್ಟ್‌ಫೋನ್‌ ಸರಣಿ ಲಾಂಚ್ ಮಾಡಲು ಉತ್ಸುಕವಾಗಿದ್ದು, ಸದ್ಯದಲ್ಲಿ ಮಾರುಕಟ್ಟೆಗೆ ಈ ನೂತನ ಸರಣಿಯ ಅನ್ನು ಅನಾವರಣ ಮಾಡಲಿದೆ.

ಶಿಯೋಮಿ ಕಂಪನಿಯು ತನ್ನ ಬಹುನಿರೀಕ್ಷಿತ ರೆಡ್ಮಿ K70 ಫೋನ್ ಸರಣಿಯನ್ನು ಇದೇ ನವೆಂಬರ್‌ನಲ್ಲಿ ಮೊದಲು ಚೀನಾ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಂದಹಾಗೆ ಈ ರೆಡ್ಮಿ K70 ಫೋನ್‌ ಸರಣಿಯು ಕ್ರಮವಾಗಿ ರೆಡ್ಮಿ K70, ರೆಡ್ಮಿ K70 ಪ್ರೊ ಹಾಗೂ ರೆಡ್ಮಿ K70e ವೇರಿಯಂಟ್‌ ಮಾದರಿಯಗಳನ್ನು ಹೊಂದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ ರೆಡ್ಮಿಯ ಈ ಹೊಸ ಫೋನ್‌!..ಬೆಲೆ ಎಷ್ಟು?

ಲಗ್ಗೆ ಇಡಲಿರುವ ಹೊಸ ರೆಡ್ಮಿ K70 ಫೋನ್‌ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 3 SoC ಚಿಪ್‌ಸೆಟ್‌ ಪ್ರೊಸೆಸರ್‌ ಇರಲಿದ್ದು, 90W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ. ಹಾಗೆಯೇ ಇದು 5G ಸಂಪರ್ಕದ ಬೆಂಬಲ ಕೂಡಾ ಒಳಗೊಂಡಿರುತ್ತದೆ. ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಹೊಂದಿರುವುದು ಬಹುತೇಕ ಖಚಿತವಾಗಿದೆ. ಹಾಗಾದರೆ ರೆಡ್ಮಿ K70 ಫೋನ್‌ ಸರಣಿಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ ರೆಡ್ಮಿಯ ಈ ಹೊಸ ಫೋನ್‌!..ಬೆಲೆ ಎಷ್ಟು?

ನೂತನ ರೆಡ್ಮಿ K70 ಮೊಬೈಲ್‌ ಫೋನ್‌ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ಮಾಡಲಿದ್ದು, ಆದರೆ ರೆಡ್ಮಿ k70 ಪ್ರೊ ಮಾದರಿಯು ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 3 SoC ಚಿಪ್‌ಸೆಟ್‌ ಪ್ರೊಸೆಸರ್‌ ಒಳಗೊಂಡಿರುವ ನಿರೀಕ್ಷೆಗಳು ಇವೆ. ಅದೇ ರೀತಿ ರೆಡ್ಮಿ K70e ರೂಪಾಂತರವು ಮೀಡಿಯಾ ಟೆಕ್ ಡೈಮೆನ್ಸಿಟಿ 9200+ SoC ಪ್ರೊಸೆಸರ್ ಸೌಲಭ್ಯ ಪಡೆದಿರಲಿದೆ ಎಂದು ತಿಳಿದು ಬಂದಿದೆ.

ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ರೆಡ್ಮಿಯ ಈ ಹೊಸ ಫೋನ್ ಸರಣಿಯು ಇತ್ತೀಚಿನ ಹೊಸ ಆಂಡ್ರಾಯ್ಡ್ 14 ಓಎಸ್‌ ಹೊಂದಿರಲಿದೆ ಹಾಗೂ 16 GB RAM ವೇರಿಯಂಟ್‌ ಆಯ್ಕೆ ಇರುವ ಸಾಧ್ಯತೆಗಳು ಹೆಚ್ಚಾಗಿವೆ. ಸೋರಿಕೆಯಾದ ಕೆಲವು ಮಾಹಿತಿ ಪ್ರಕಾರ ಈ ಫೋನ್ ಸರಣಿಯು ಇದೇ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಆಗಬಹುದು.

ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ ರೆಡ್ಮಿಯ ಈ ಹೊಸ ಫೋನ್‌!..ಬೆಲೆ ಎಷ್ಟು?

ರೆಡ್ಮಿ ಸಂಸ್ಥೆಯು ಈ ಹಿಂದಿನ ರೆಡ್ಮಿ K60 ಅಲ್ಟ್ರಾ 5G ಮೊಬೈಲ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿತ್ತು. ಈ ಫೋನ್ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಜೊತೆಗೆ 1220 x 2712 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದೆ. ಅಲ್ಲದೇ ಇದರ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ ಹೊಂದಿದ್ದು, ಮೀಡಿಯಾ ಟೆಕ್‌ ಡೈಮೆನ್ಸಿಟಿ 9200+ SoC ಪ್ರೊಸೆಸರ್‌ ನಲ್ಲಿ ಕಾರ್ಯ ಮಾಡುತ್ತದೆ. ಇದರ ಜೊತೆಗೆ ಆಂಡ್ರಾಯ್ಡ್‌ 13 ಓಎಸ್‌ ಇದ್ದು, 16 GB RAM + 512 GB ವೇರಿಯಂಟ್ ಆಯ್ಕೆ ಇದೆ.

ಹಾಗೆಯೇ ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಒಳಗೊಂಡಿದ್ದು, ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಆಗಿದೆ. ದ್ವಿತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ನಲ್ಲಿದೆ. ಅಲ್ಲದೇ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಲಭ್ಯ ಇದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು 120W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಇದೆ.

Best Mobiles in India

English summary
Redmi K70 series launch timeline surfaces online. check expected specifications, price and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+