Home
ಸುದ್ದಿಜಾಲ

ಶೀಘ್ರದಲ್ಲೇ ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನ್‌ ಲಾಂಚ್‌! 120W ವೇಗದ ಚಾರ್ಜಿಂಗ್ ಸೌಲಭ್ಯ..

ರೆಡ್ಮಿ ಸ್ಮಾರ್ಟ್‌ಫೋನ್‌ಗಳು (Redmi smartphone) ಭಿನ್ನ ಫೀಚರ್ಸ್‌ ಆಯ್ಕೆಯ ಮೂಲಕ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಈ ನಡುವೆ ಇನ್ನೇನು ಕೆಲವೇ ದಿನಗಳಲ್ಲಿ ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನ್‌ (Redmi K70 Ultra Smartphone) ಲಾಂಚ್‌ ಆಗಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಈ ಫೋನ್‌ ಸ್ಮಾರ್ಟ್‌ಫೋನ್‌ ವಲಯದಲ್ಲಿ ದೊಡ್ಡ ಸಂಚಲನ ಉಂಟು ಮಾಡಲಿದೆ.

ಹೌದು, ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನ್‌ ಇದೀಗ 3C ಪ್ರಮಾಣೀಕರಣ ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಈ ಸ್ಮಾರ್ಟ್‌ಫೋನ್ 120W ವೇಗದ ಚಾರ್ಜಿಂಗ್ ಅನ್ನು ಖಚಿತಪಡಿಸಿದೆ. ಹಾಗೆಯೇ ಈ ಫೋನ್ ಅನ್ನು ಶೀಘ್ರದಲ್ಲೇ ಚೀನಾದಲ್ಲಿ ಅನಾವರಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಫೋನ್ ಏನೆಲ್ಲಾ ಫೀಚರ್ಸ್‌ ಪಡೆದಿರಲಿದೆ, ಇದು ಯಾವ ಫೋನ್‌ನ ಮರುಬ್ರಾಂಡ್ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಶೀಘ್ರದಲ್ಲೇ ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನ್‌ ಲಾಂಚ್‌!

ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನ್‌: ಕೆಲವು ಲೀಕ್‌ ಮಾಹಿತಿಗಳು ಈ ಫೋನ್‌ನ ಕೆಲವು ಪ್ರಮುಖ ಫೀಚರ್ಸ್‌ ಅನ್ನು ತಿಳಿಸಿವೆ. ಅದರಲ್ಲೂ ಮೊದಲೇ ತಿಳಿಸಿದಂತೆ ಈ ಫೋನ್ ಇದೀಗ 3C ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ರೆಡ್ಮಿ ಈವರೆಗೂ ಈ ಫೋನ್‌ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸದಿದ್ದರೂ, 3C ಪ್ರಮಾಣೀಕರಣ ಲಿಸ್ಟ್‌ನಲ್ಲಿ ಈ ಫೋನ್‌ನ ಚಾರ್ಜಿಂಗ್‌ ಬಗ್ಗೆ ತಿಳಿಸಲಾಗಿದೆ.

ಇನ್ನು ಈ ರೆಡ್ಮಿ K70 ಅಲ್ಟ್ರಾ ಫೋನ್‌ K60 ಅಲ್ಟ್ರಾದ ಉತ್ತರಾಧಿಕಾರಿಯಾಗಿ ಎನ್ನಲಾಗಿದೆ. ಜೊತೆಗೆ ಈ ಫೋನ್‌ ಶಿಯೋಮಿ 14T P ಪ್ರೊ ಎಂದು ಜಾಗತಿಕವಾಗಿ ಮರುಬ್ರಾಂಡ್ ಮಾಡಲು ನಿರೀಕ್ಷಿಸಲಾಗಿದೆ ಎಂದು ಲೀಕ್ ಮಾಹಿತಿ ಮೂಲಕ ತಿಳಿದುಬಂದಿದೆ. ಈ ಬಗ್ಗೆ ಮೈ ಸ್ಮಾರ್ಟ್ ಪ್ರೈಸ್ ಸೈಟ್‌ನಲ್ಲಿ ವರದಿ ಮಾಡಲಾಗಿದ್ದು, ಅದರ ಪ್ರಕಾರ ರೆಡ್ಮಿ K70 ಅಲ್ಟ್ರಾದ ಮಾದರಿ ಸಂಖ್ಯೆ 2407FRK8EC ಆಗಿದೆ. ಜೊತೆಗೆ MDY-160EB ಮತ್ತು MDY-14-ED ಮಾದರಿ ಸಂಖ್ಯೆಗಳೊಂದಿಗೆ ಚಾರ್ಜರ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಶೀಘ್ರದಲ್ಲೇ ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನ್‌ ಲಾಂಚ್‌!

ವರದಿಯ ಪ್ರಕಾರ, ಈ ಚಾರ್ಜರ್‌ಗಳು 15W (5V/3A), 27W (9V/3A), 66W (11V/6A), ಮತ್ತು 120W (20V/6A) ಗಳ ಪವರ್ ಔಟ್‌ಪುಟ್‌ಗಳನ್ನು ಹೊಂದಿರಲಿವೆ ಎಂದು ತಿಳಿದುಬಂದಿದೆ. ಆದ್ದರಿಂದ, ಮುಂಬರುವ ರೆಡ್ಮಿ K70 ಅಲ್ಟ್ರಾ 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ತಿಳಿದುಬಂದಿದೆ. ಇನ್ನು ಈ 3C ಪ್ರಮಾಣೀಕರಣ ಪಟ್ಟಿಯಲ್ಲಿ ರೆಡ್ಮಿ K70 ಅಲ್ಟ್ರಾ ಕುರಿತು ಯಾವುದೇ ಇತರ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ, ಫೋನ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು ಎಂದು ಈ ವರದಿಗಳಿಂದ ತಿಳಿದುಬಂದಿದೆ.

ಇನ್ನು ಈ ಫೋನ್‌ನ ನಿರೀಕ್ಷಿತ ಫೀಚರ್ಸ್‌ ಬಗ್ಗೆ ತಿಳಿಯುವುದಾದರೆ ಈ ಫೋನ್ 1.5K 8T LTPO 144Hz ರಿಫ್ರೆಶ್‌ ರೇಟ್‌ ಹಾಗೂ 2600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆಇರುವ ಡಿಸ್‌ಪ್ಲೇ ಹೊಂದಿರಬಹುದು ಎಂದು ಹೇಳಲಾಗಿದೆ. ಇದರ ಜೊತೆಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಅಲ್ಲದೆ ಸಜ್ಜುಗೊಂಡಿದೆ. 50 ಮೆಗಾಪಿಕ್ಸೆಲ್‌ OIS ಸಕ್ರಿಯಗೊಳಿಸುವ ಸೋನಿ IMX LYTIA 800 ಮುಖ್ಯ ಸೆನ್ಸರ್‌ ಮತ್ತು 108 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್‌ ಅನ್ನು ಈ ಫೋನ್‌ ಪಡೆದುಕೊಂಡಿರಲಿದೆ ಎಂದು ತಿಳಿದುಬಂದಿದೆ.

ಶೀಘ್ರದಲ್ಲೇ ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನ್‌ ಲಾಂಚ್‌!

ಎಲ್ಲಕ್ಕಿಂತ ಮಿಗಿಲಾಗಿ ಈ ಫೋನ್ 24GB LPDDR5T RAM ಮತ್ತು 1TB UFS 4.1 ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, 120W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Redmi K70 Ultra smartphone has now appeared on the 3C certification site. This smartphone ensures 120W fast charging.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+