ಮಾರುಕಟ್ಟೆಗೆ ಎಂಟ್ರಿ ಕೊಡ್ತು Redmi K70 Ultra ಫೋನ್; ಇದರ ಫೀಚರ್ಸ್‌ಗೆ ವಾವ್ ಅಂತೀರಾ!
ಸ್ಮಾರ್ಟ್‌ಫೊನ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಶಿಯೋಮಿ ಸಂಸ್ಥೆಯ ರೆಡ್ಮಿ K70 ಅಲ್ಟ್ರಾ (OnePlus Nord 4) ಸ್ಮಾರ್ಟ್‌ಫೋನ್‌ಇದೀಗ ಅಧಿಕೃತವಾಗಿ ಬಿಡುಗಡೆ ಆಗಿದೆ. ಈ ಬಹುನಿರೀಕ್ಷಿತ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9300+ SoC ಪ್ರೊಸೆಸರ್ ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಜೊತೆಗೆ ಸ್ಟನ್ನಿಂಗ್ ಲುಕ್ ರಚನೆ ಪಡೆದಿರುವುದು ಪ್ಲಸ್ ಪಾಯಿಂಟ್ ಆಗಿ ಕಾಣಿಸಿದೆ. ಹಾಗೆಯೇ ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ರಚನೆ ಅನ್ನು ಒಳಗೊಂಡಿದೆ.
ಹೌದು, ಜನಪ್ರಿಯ ಶಿಯೋಮಿ ಕಂಪನಿಯು ತನ್ನ ಹೊಸ ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಮೆಟಲ್ ರಚನೆ ಪಡೆದಿರುವ ಈ ಸ್ಮಾರ್ಟ್‌ಫೋನ್ ರೆಡ್ಮಿ K60 ಅಲ್ಟ್ರಾ ಫೋನಿನ ಉತ್ತರಾಧಿಕಾರಿ ಆಗಿದೆ. ಹಾಗೆಯೇ ಈ ಫೋನ್ 5,500m Ah ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದರ ಜೊತೆಗೆ 1.5K ರೆಸಲ್ಯೂಶನ್ ಹೊಂದಿರುವ AMOLED ಸ್ಕ್ರೀನ್ ಪಡೆದಿದೆ.

ಹಾಗೆಯೇ ಇದು 12 GB / 16 GB / 24 GB RAM + 256 GB / 512 GB / 1 TB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಅಲ್ಲದೇ 3D ಐಸ್ ಸೈಕಲ್ ಕೋಲ್ಡ್ ಪಂಪ್ ಮತ್ತು 5000m² ಅಲ್ಟ್ರಾ-ಲಾರ್ಜ್ 3D ಕಾನ್ಕೇವ್-ಕಾನ್ವೆಕ್ಸ್ ಪ್ಲಾಟ್‌ಫಾರ್ಮ್ ಪಡೆದಿದೆ. ಇನ್ನುಳಿದಂತೆ ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ K70 ಅಲ್ಟ್ರಾ ಫೀಚರ್ಸ್
ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 2272 x 1220 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಹಾಗೆಯೇ ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಸಪೋರ್ಟ್ ಸಹ ಪಡೆದುಕೊಂಡಿದ್ದು, 4000 nits ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ.
ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9200+ SoC ಪ್ರೊಸೆಸರ್ ಪವರ್‌ನೊಂದಿಗೆ ಲಗ್ಗೆ ಇಟ್ಟಿದೆ. ಇದು ಆಂಡ್ರಾಯ್ಡ್ 14 ಬೆಂಬಲ ಜೊತೆಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಇದು 12 GB / 16 GB / 24 GB RAM + 256 GB / 512 GB / 1 TB ಸ್ಟೋರೇಜ್ ವೇರಿಯಂಟ್ ಸೌಲಭ್ಯದ ಆಯ್ಕೆ, 3D ಐಸ್ ಸೈಕಲ್ ಕೋಲ್ಡ್ ಪಂಪ್ ಮತ್ತು 5000m² ಅಲ್ಟ್ರಾ-ಲಾರ್ಜ್ 3D ಕಾನ್ಕೇವ್-ಕಾನ್ವೆಕ್ಸ್ ಪ್ಲಾಟ್‌ಫಾರ್ಮ್ ಪಡೆದಿದೆ.
ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಆಯ್ಕೆಯಲ್ಲಿ ಇದೆ. ಇದಲ್ಲದೆ 20 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
ರೆಡ್ಮಿ K70 ಅಲ್ಟ್ರಾ ಸ್ಮಾರ್ಟ್‌ಫೋನ್ 5500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಅನ್ನು ಒಳಗೊಂಡಿದ್ದು, ಇದಕ್ಕೆ ಅನುಗುಣವಾಗಿ 120W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ವೈಫೈ, ಬ್ಲೂಟೂತ್ 5.3 ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಸಪೋರ್ಟ್ ಮಾಡಲಿದೆ.


Click it and Unblock the Notifications








