Redmi: ರೆಡ್ಮಿಯ ಈ ಸ್ಮಾರ್ಟ್‌ಟಿವಿಗೆ ಭಾರೀ ಡಿಸ್ಕೌಂಟ್... 8GB ಸ್ಟೋರೇಜ್ ಆಯ್ಕೆ!
ರೆಡ್ಮಿ ಸ್ಮಾರ್ಟ್ ಡಿವೈಸ್‌ಗಳಿಗೆ (Redmi smart device) ಭಾರತದಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ರೆಡ್ಮಿ ಸ್ಮಾರ್ಟ್‌ಫೋನ್‌ಗಳು (Redmi smartphone) ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದು, ಗ್ರಾಹಕರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡುತ್ತಿವೆ. ಈ ನಡುವೆ ರೆಡ್ಮಿ ಸ್ಮಾರ್ಟ್‌ಟಿವಿಗಳು (Redmi SmartTVs) ಸಹ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಉಂಟು ಮಾಡಿವೆ.
ಹೌದು, ರೆಡ್ಮಿ ಸ್ಮಾರ್ಟ್‌ಟಿವಿಗಳು ಇತ್ತೀಚಿನ ದಿನಗಳಲ್ಲಿ ವಿವಿಧ ಸುಧಾರಿತ ಫೀಚರ್ಸ್ ಅನ್ನು ಹೊಂದುವ ಮೂಲಕ ಅದರಲ್ಲೂ ಅಗ್ಗದ ದರದಲ್ಲಿ ಲಭ್ಯವಾಗುವ ಮೂಲಕ ಗ್ರಾಹಕರಿಗೆ ಇಷ್ಟವಾಗುತ್ತಿವೆ. ಅದರಂತೆ ಈಗ ರೆಡ್ಮಿ L32R8-FVIN ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಫೈರ್ ಟಿವಿಗೆ (Redmi L32R8-FVIN 32 inch HD Ready Smart LED Fire TV) ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಭರ್ಜರಿ ಡಿಸ್ಕೌಂಟ್ ನೀಡಲಾಗಿದೆ. ಈ ಸ್ಮಾರ್ಟ್‌ಟಿವಿ ಕ್ವಾಡ್ ಕೋರ್ ಕಾರ್ಟೆಕ್ಸ್ A35 ಪ್ರೊಸೆಸರ್ ಬಲ ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಇ-ಕಾಮರ್ಸ್ ಸೈಟ್‌ನಲ್ಲಿ ಇದರಕ್ಕಿರುವ ಆಫರ್ ತಿಳಿಯೋಣ ಬನ್ನಿ.

ರೆಡ್ಮಿ L32R8-FVIN ಹೆಚ್‌ಡಿ ರೆಡಿ ಸ್ಮಾರ್ಟ್‌ಟಿವಿ ಆಫರ್ ವಿವರ: 32 ಇಂಚಿನ ಡಿಸ್‌ಪ್ಲೇ ಆಯ್ಕೆಯ ಈ ಸ್ಮಾರ್ಟ್‌ಟಿವಿಗೆ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಎರಡರಲ್ಲೂ ಭಿನ್ನ ಆಫರ್ ಘೋಷಣೆ ಮಾಡಲಾಗಿದೆ. ಅಮೆಜಾನ್‌ನಲ್ಲಿ ಇದಕ್ಕೆ ಕಡಿಮೆ ಬೆಲೆ ನಿಗದಿ ಮಾಡಲಾಗಿದೆ ಅಂದರೆ 24,999 ರೂ.ಗಳ ಮೂಲ ಬೆಲೆ ಉಲ್ಲೇಖ ಮಾಡಿದ್ದು, 60% ರಿಯಾಯಿತಿ ನಂತರ 9,999ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಇಎಮ್‌ಐ ಆಯ್ಕೆ ಸಹ ಇದ್ದು, ತಿಂಗಳಿಗೆ 490ರೂ.ಗಳನ್ನು ಪಾವತಿ ಮಾಡಿದ್ರೆ ಸಾಕು.
ಅದೇ ರೀತಿ ಎಸ್‌ಬಿಐ ಡೆಬಿಟ್ ಕಾರ್ಡ್ ನಾನ್-ಇಎಮ್‌ಐ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೂ ಸಹ 1500 ವರೆಗೆ 10% ತ್ವರಿತ ರಿಯಾಯಿತಿ ಸಿಗಲಿದೆ. ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ (Amazon Pay ICICI Bank Credit Card) 450 ರೂ.ಗಳ ಇಎಮ್‌ಐ ಆಯ್ಕೆ ನೀಡಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿಯನ್ನು ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದ್ರೆ 2,000 ರೂ.ಗಳ ಬಹುಮಾನ ಸಿಗಲಿದೆ.
ರೆಡ್ಮಿ L32R8-FVIN ಹೆಚ್‌ಡಿ ರೆಡಿ ಸ್ಮಾರ್ಟ್‌ಟಿವಿ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಟಿವಿ 32 ಇಂಚಿನ ಎಲ್ಇಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ 60 Hz ರಿಫ್ರೆಶ್ ರೆಟ್ ಆಯ್ಕೆ ಇದರಲ್ಲಿದ್ದು, ಈ ಮೂಲಕ ವಿಡಿಯೋ ವೀಕ್ಷಣೆಯಲ್ಲಿ ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದು. ಮುಖ್ಯವಾಗಿ 178 ° ವೀಕ್ಷಣಾ ಕೋನದ (178 ° viewing angle) ಆಯ್ಕೆಯನ್ನು ಈ ಟಿವಿಯಲ್ಲಿ ಕಾಣಬಹುದು.
ರೆಡ್ಮಿ L32R8-FVIN ಹೆಚ್‌ಡಿ ರೆಡಿ ಸ್ಮಾರ್ಟ್ ಟಿವಿ ಫೀಚರ್ಸ್ : ಈ ಸ್ಮಾರ್ಟ್‌ಟಿವಿ ಆಡಿಯೋ ವಿಭಾಗದಲ್ಲಿ ಬಹಳ ಉತ್ತಮ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಅಂದರೆ 2 ಸ್ಪೀಕರ್ ಆಯ್ಕೆ ಹೊಂದಿದ್ದು, ಈ ಮೂಲಕ ಬಳಕೆದಾರರು 20 W ಸ್ಪೀಕರ್ ಔಟ್‌ಪುಟ್ ಅನ್ನು ಆಲಿಸಬಹುದು. ಉಳಿದಂತೆ ಕ್ವಾಡ್ ಕೋರ್ ಕಾರ್ಟೆಕ್ಸ್ A35 ಪ್ರೊಸೆಸರ್ ಆಯ್ಕೆ ಹಾಗೂ ಮಾಲಿ G31 MP2 ಗ್ರಾಫಿಕ್ ಸೌಲಭ್ಯ ಪಡೆದುಕೊಂಡಿದ್ದು, 1 GB RAM, 8 GB ಇಂಟರ್ ಸ್ಟೋರೇಜ್ ಹೊಂದಿದೆ.

ಹಾಗೆಯೇ ಈ ಸ್ಮಾರ್ಟ್‌ಟಿವಿ ಸ್ಕ್ರೀನ್ ಮಿರರಿಂಗ್, ವೈ-ಫೈ, ಬ್ಲೂಟೂತ್, 2 ಹೆಚ್‌ಡಿಎಮ್‌ಐ ಪೋರ್ಟ್, 2 ಯುಎಸ್‌ಬಿ ಪೋರ್ಟ್, ಒಂದು ಹೆಡ್‌ಫೋನ್ ಪೋರ್ಟ್ ಹಾಗೂ ಎತರ್ನೆಟ್ ಆಯ್ಕೆಯನ್ನು ನೀಡಲಾಗಿದ್ದು, ಈ ಮೂಲಕ ಈ ಸ್ಮಾರ್ಟ್‌ಟಿವಿಯನ್ನು ವಿವಿಧ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ ರಿಮೋಟ್‌ನಲ್ಲಿ ಇಂಟರ್ನೆಟ್‌ಗೆ ಪ್ರವೇಶದ ಆಯ್ಕೆ , ಅಲೆಕ್ಸಾ ಫೀಚರ್ಸ್ ನೊಂದಿಗೆ ಪ್ಯಾಕ್ ಆಗಿದ್ದು, ಒಟ್ಟಾರೆ 3.9 ಕೆಜಿ ತೂಕವನ್ನು ಈ ಟಿವಿ ಹೊಂದಿದೆ.


Click it and Unblock the Notifications








