ಸದ್ಯದಲ್ಲೇ ಗ್ರ್ಯಾಂಡ್ ಎಂಟ್ರಿ ಕೊಡಲಿದೆ ರೆಡ್ಮಿ ನೋಟ್ 10!..ಸ್ಪೆಷಲ್ ಕ್ಯಾಮೆರಾ!
ಶಿಯೋಮಿ ಕಂಪನಿಯು ತನ್ನ ಜನಪ್ರಿಯ ನೋಟ್ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಈಗಾಗಲೇ ನೋಟ್ 7, ನೋಟ್ 8 ಹಾಗೂ ನೋಟ್ 9 ಮಾಡೆಲ್‌ಗಳನ್ನು ಪರಿಚಯಿಸಿದೆ. ಇದೀಗ ಅದರ ಮುಂದುವರಿದ ಭಾಗವಾಗಿ ಶಿಯೋಮಿಯು ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡಲು ಸಜ್ಜಾಗಿದೆ. ಬರಲಿರುವ ಈ ಸ್ಮಾರ್ಟ್‌ಫೋನ್ ಸರಣಿಯು 6000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದೆ.

ಹೌದು, ಶಿಯೋಮಿಯು ನೂತನವಾಗಿ ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಲು ತಯಾರಾಗಿದ್ದು, ಸದ್ಯದಲ್ಲೇ ಅನಾವರಣಗೊಳ್ಳಲಿದೆ. ಈ ಸ್ಮಾರ್ಟ್‌ಫೋನ್ ಸಂಪೂರ್ಣ ಹೈ ಎಂಡ್ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿರಲಿದ್ದು, 8GB RAM ಸಾಮರ್ಥ್ಯದ ವೇರಿಯಂಟ್ ಅನ್ನು ಹೊಂದಿರಲಿದೆ ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ. ಇನ್ನುಳಿದಂತೆ ಈ ಫೋನ್ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್
ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿಯು AMOLED ಡಿಸ್‌ಪ್ಲೇ ಒಳಗೊಂಡಿರಲಿದ್ದು, ವಾಟರ್ ಡ್ರಾಪ್ ನಾಚ್ ಡಿಸೈನ್ ಇರಲಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು ಫಿಂಗರ್‌ಪ್ರಿಂಟ್ ಸೆನ್ಸಾರ್ ರಚನೆಯನ್ನು ಪಡೆದಿರಲಿದೆ.

ಪ್ರೊಸೆಸರ ಮತ್ತು ಮೆಮೊರಿ
ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730G ಚಿಪ್‌ಸೆಟ್ ಪ್ರೊಸೆಸರ್ ಇದರಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 10 ಓಎಸ್ ಇರುವ ಸಾಧ್ಯತೆಗಳಿವೆ. ಇದರೊಂದಿಗೆ 6GB ಹಾಗೂ 8GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಪಡೆದಿರುವ ನಿರೀಕ್ಷೆಗಳಿವೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಲಭ್ಯ ಇರಲಿದೆ.

ಸ್ಪೆಷಲ್ ಕ್ಯಾಮೆರಾ
ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿರಲಿದೆ. ಉಳಿದಂತೆ 20ಎಂಪಿ ಅಲ್ಟ್ರಾ ವೈಲ್ಡ್ ಆಂಗಲ್ ಕ್ಯಾಮೆರಾ, 12ಎಂಪಿಯ + 5ಎಂಪಿಯ ಟೆಲಿಫೋಟೊ ಸೆನ್ಸಾರ್ ಕ್ಯಾಮೆರಾ ಸೆಟ್‌ಅಪ್ ಇರಲಿದೆ. ಇನ್ನು ಸೆಲ್ಫಿಗಾಗಿ 32ಎಂಪಿ ಸೆನ್ಸಾರ್ ಕ್ಯಾಮೆರಾ ಇರಲಿದೆ.

ಬ್ಯಾಟರಿ ಪವರ್
ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆ ಪಡೆದಿರಲಿದ್ದು, ಇದರೊಂದಿಗೆ 30W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಇರಲಿದೆ. ಇದರೊಂದಿಗೆ ವೈಫೈ, ಜಿಪಿಎಸ್, ಬ್ಲೂಟೂತ್, ಕ್ಯಾಮೆರಾ ಜೂಮ್ ಆಯ್ಕೆಗಳು ಸೇರಿದಂತೆ ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರಲಿದೆ.


Click it and Unblock the Notifications