ಭಾರತದಲ್ಲಿ ರೆಡ್ಮಿ ನೋಟ್ 10 ಬಿಡುಗಡೆಗೆ ದಿನಾಂಕ ನಿಗದಿ: ಬೆಲೆ ಎಷ್ಟು?

|

ಶಿಯೋಮಿ ಕಂಪನಿಯ ಬಹುನಿರೀಕ್ಷಿತ ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಅಧಿಕೃತ ಮುಹೂರ್ತ ಫಿಕ್ಸ್‌ ಆಗಿದೆ. ಹೊಸ ರೆಡ್ಮಿ ಫೋನ್ ಇದೇ ಮಾರ್ಚ್ 4ರಂದು ಭಾರತದಲ್ಲಿ ಅಧಿಕೃತವಾಗಿ ಅನಾವರಣ ಆಗಲಿದೆ. ರೆಡ್ಮಿ ನೋಟ್ 10 ಫೋನ್ ಸರಣಿಯು ರೆಡ್ಮಿ ನೋಟ್ 10, ರೆಡ್ಮಿ ನೋಟ್ 10 ಪ್ರೊ ಮತ್ತು ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್‌ ಮಾಡೆಲ್‌ಗಳಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ.

ನೋಟ್

ಹೌದು, ಶಿಯೋಮಿಯ ನೂತನ ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಸರಣಿಯು ಮಾರ್ಚ್ 4ರಂದು ಬಿಡುಗಡೆ ಆಗಲಿದೆ. ಈ ಸರಣಿಯಲ್ಲಿನ ರೆಡ್ಮಿ ನೋಟ್ 10 ಫೋನ್ 4GB + 64GB ವೇರಿಯಂಟ್ ದರವು 13,999ರೂ. ಇರಲಿದೆ ಹಾಗೆಯೇ 6GB + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 15,999ರೂ ಎಂದು ಅಂದಾಜಿಸಲಾಗಿದೆ. ರೆಡ್ಮಿ ನೋಟ್ 10 ಪ್ರೊ ಫೋನ್ ಬೇಸ್‌ ವೇರಿಯಂಟ್‌ 20,400ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿರಲಿದೆ. ಇನ್ನುಳಿದಂತೆ ಈ ಫೋನ್ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿಯು AMOLED ಡಿಸ್‌ಪ್ಲೇ ಒಳಗೊಂಡಿರಲಿದ್ದು, ವಾಟರ್‌ ಡ್ರಾಪ್ ನಾಚ್ ಡಿಸೈನ್ ಇರಲಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು ಫಿಂಗರ್‌ಪ್ರಿಂಟ್ ಸೆನ್ಸಾರ್ ರಚನೆಯನ್ನು ಪಡೆದಿರಲಿದೆ.

ಪ್ರೊಸೆಸರ ಮತ್ತು ಮೆಮೊರಿ

ಪ್ರೊಸೆಸರ ಮತ್ತು ಮೆಮೊರಿ

ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730G ಚಿಪ್‌ಸೆಟ್ ಪ್ರೊಸೆಸರ್‌ ಇದರಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 10 ಓಎಸ್‌ ಇರುವ ಸಾಧ್ಯತೆಗಳಿವೆ. ಇದರೊಂದಿಗೆ 6GB ಹಾಗೂ 8GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಪಡೆದಿರುವ ನಿರೀಕ್ಷೆಗಳಿವೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಲಭ್ಯ ಇರಲಿದೆ.

ಸ್ಪೆಷಲ್ ಕ್ಯಾಮೆರಾ

ಸ್ಪೆಷಲ್ ಕ್ಯಾಮೆರಾ

ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿರಲಿದೆ. ಉಳಿದಂತೆ 20ಎಂಪಿ ಅಲ್ಟ್ರಾ ವೈಲ್ಡ್‌ ಆಂಗಲ್ ಕ್ಯಾಮೆರಾ, 12ಎಂಪಿಯ + 5ಎಂಪಿಯ ಟೆಲಿಫೋಟೊ ಸೆನ್ಸಾರ್ ಕ್ಯಾಮೆರಾ ಸೆಟ್‌ಅಪ್ ಇರಲಿದೆ. ಇನ್ನು ಸೆಲ್ಫಿಗಾಗಿ 32ಎಂಪಿ ಸೆನ್ಸಾರ್ ಕ್ಯಾಮೆರಾ ಇರಲಿದೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆ ಪಡೆದಿರಲಿದ್ದು, ಇದರೊಂದಿಗೆ 30W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಸಹ ಇರಲಿದೆ. ಇದರೊಂದಿಗೆ ವೈಫೈ, ಜಿಪಿಎಸ್, ಬ್ಲೂಟೂತ್, ಕ್ಯಾಮೆರಾ ಜೂಮ್ ಆಯ್ಕೆಗಳು ಸೇರಿದಂತೆ ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರಲಿದೆ.

Best Mobiles in India

English summary
Redmi Note 10 Pro could be priced at Rs. 13,999 for the 6GB RAM + 64GB storage option.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X