Just In
- 23 min ago
ಸ್ಮಾರ್ಟ್ವಾಚ್ ಇಲ್ಲವೇ ಸ್ಮಾರ್ಟ್ಬ್ಯಾಂಡ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
- 1 hr ago
ಇಯರ್ಫೋನ್ ಖರೀದಿಸುವವರಿಗೆ ಅಮೆಜಾನ್ನಲ್ಲಿ ಸಿಗಲಿದೆ ಬಿಗ್ ಡಿಸ್ಕೌಂಟ್!
- 3 hrs ago
ವಾಟ್ಸಾಪ್, ಟೆಲಿಗ್ರಾಮ್ನಂತಹ ಆಪ್ಗಳ ನಿಯಂತ್ರಣಕ್ಕೆ ಸರ್ಕಾರದಿಂದ ಹೊಸ ಪ್ಲಾನ್!
- 4 hrs ago
ಇಂದು ಇನ್ಫಿನಿಕ್ಸ್ ಹಾಟ್ 12 ಪ್ರೊ ಫಸ್ಟ್ ಸೇಲ್; ಡಿಸ್ಕೌಂಟ್ ಎಷ್ಟು ಗೊತ್ತಾ?
Don't Miss
- Sports
CWG 2022: ಶ್ರೀಲಂಕಾದ 10 ಕ್ರೀಡಾಪಟುಗಳು ನಾಪತ್ತೆ!: ಲಂಕಾ ಕ್ರೀಡಾಪಟುಗಳ ಈ ಚಾಳಿಯ ಇತಿಹಾಸವೇ ವಿಚಿತ್ರ!
- Finance
ಮುಕೇಶ್ ಅಂಬಾನಿ ಮಾಸಿಕ ವೇತನ ಕೇಳಿದ್ರೆ ಅಚ್ಚರಿ ಮೂಡುತ್ತೆ!
- News
ಬಿಎಂಟಿಸಿ: ನಗರದಲ್ಲಿ ಅರ್ಧದಷ್ಟು ಎಸಿ ಬಸ್ಗಳ ಸೇವೆ ಅಲಭ್ಯ
- Automobiles
ಫೋರ್ಡ್ ಇಂಡಿಯಾದ ಸನಂದ್ ಕಾರ್ಖಾನೆ ಟಾಟಾ ಮೋಟಾರ್ಸ್ ತೆಕ್ಕೆಗೆ: 726 ಕೋಟಿ ರೂ.ಗೆ ಖರೀದಿ
- Movies
ಮುಂದುವರೆದ ದಚ್ಚು- ಅಪ್ಪು ಫ್ಯಾನ್ಸ್ ಪರ ವಿರೋಧ ಚರ್ಚೆ: ಮತ್ತೊಂದು ವಿಡಿಯೋ ವೈರಲ್!
- Lifestyle
ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್: ಇವರಿಗೆ ಸಿಗುವ ಸಂಬಳ, ಭತ್ಯೆ ಸೌಲಭ್ಯಗಳೇನು?
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಗುಡ್‌ನ್ಯೂಸ್!..ರೆಡ್ಮಿ ನೋಟ್ 10S ಅನ್ನು ಈಗ ಹಿಂದೆ ಮುಂದೆ ನೋಡದೇ ಖರೀದಿಸಬಹುದು!
ಶಿಯೋಮಿ ಸಂಸ್ಥೆಯ ಜನಪ್ರಿಯ ಸ್ಮಾರ್ಟ್‌ಪೋನ್‌ಗಳ ಪೈಕಿ ಒಂದಾಗಿರುವ ರೆಡ್ಮಿ ನೋಟ್ 10S ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಈಗಾಗಲೇ ಗ್ರಾಹಕರನ್ನು ಸೆಳೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಈಗಾಗಲೇ ಆನ್‌ಲೈನ್ ತಾಣಗಳ ಮೂಲಕ ಫ್ಲ್ಯಾಶ್ ಸೇಲ್ ಕಂಡಿದೆ. ಆದರೆ ಇದೀಗ ಶಿಯೋಮಿ ಕಂಪನಿಯು ಗ್ರಾಹಕರಿಗೆ ಭಾರೀ ಗುಡ್‌ನ್ಯೂಸ್ ನೀಡಿದ್ದು, ರೆಡ್ಮಿ ನೋಟ್ 10S ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್ ಲಭ್ಯ ಮಾಡಿದೆ.

ಹೌದು, ಶಿಯೋಮಿ ಸಂಸ್ಥೆಯ ರೆಡ್ಮಿ ನೋಟ್ 10S ಸ್ಮಾರ್ಟ್‌ಫೋನ್ 6GB RAM ಮತ್ತು 64GB , 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದ್ದು, ಹಾಗೆಯೇ 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಬಜೆಟ್ ಪ್ರೈಸ್ ಟ್ಯಾಗ್‌ನಲ್ಲಿ ಗುರುತಿಸಿಕೊಂಡಿದೆ. ರೆಡ್ಮಿ ನೋಟ್ 10S ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಈ ಮೂಲಕ ಗ್ರಾಹಕರನ್ನು ಸೆಳೆದಿದೆ. ಆದ್ರೆ ಇದೀಗ ರೆಡ್ಮಿ ನೋಟ್ 10S ಫೋನ್ ಬೆಲೆಯಲ್ಲಿ ಇಳಿಕೆ ಆಗಿದ್ದು, ಗ್ರಾಹಕರಿಗೆ ಮತ್ತಷ್ಟು ಖುಷಿ ಎನಿಸಿದೆ.

ಇನ್ನು ಈ ಫೋನ್ ಮೀಡಿಯಾ ಟೆಕ್ ಹೆಲಿಯೊ G95 SoC ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 6 GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಫೋನಿನ ಮೂಲ ಬೆಲೆ 14,999 ರೂ. ಆಗಿದೆ. ಆದ್ರೆ ರೆಡ್ಮಿ ನೋಟ್ 10S ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇದೀಗ 2,000ರೂ. ಇಳಿಕೆ ಆಗಿದೆ. ಹೀಗಾಗಿ 6GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ 12,999ರೂ.ಗಳ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ.

ಇನ್ನು 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ನಲ್ಲಿ 1,000ರೂ. ಇಳಿಕೆ ಆಗಿದ್ದು, 14,999ರೂ. ಪ್ರೈಸ್‌ನಲ್ಲಿ ದೊರೆಯುತ್ತದೆ. ಅದೇ ರೀತಿ 8GB + 128GB ಸ್ಟೋರೇಜ್ ವೇರಿಯಂಟ್ ನಲ್ಲಿ 1,000ರೂ. ಇಳಿಕೆ ಆಗಿದ್ದು, 16,499ರೂ. ಪ್ರೈಸ್‌ನಲ್ಲಿ ದೊರೆಯುತ್ತದೆ. ಹಾಗಾದರೇ ರೆಡ್ಮಿ ನೋಟ್ 10S ಫೋನಿನ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ
ಶಿಯೋಮಿ ರೆಡ್ಮಿ ನೋಟ್ 10s ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಚಿನ AMOLED ಫುಲ್ ಹೆಚ್‌ಡಿ ಡಿಸ್‌ಪ್ಲೇ ಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20: 9 ರಚನೆಯ ಅನುಪಾತವನ್ನು ಹೊಂದಿದೆ. ಅಲ್ಲದೆ 1100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, ಸ್ಕ್ರೀನ್ ಟು ಬಾಡಿ 83.5 % ಅನುಪಾತ ಹೊಂದಿರಲಿದ್ದು, ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಹೊಂದಿದೆ. ಡಿಸ್‌ಪ್ಲೇ 2,5D ಟೆಂಪರ್ ಗ್ಲಾಸ್‌ನಿಂದ ರಕ್ಷಣೆ ಹೊಂದಿದೆ. ಇದರೊಂದಿಗೆ ಈ ಪೋನ್ ಹಲವು ಕಲರ್ ಮೋಡ್ ಆಯ್ಕೆಗಳನ್ನು ಒಳಗೊಂಡಿದೆ. ಬಜೆಟ್ ಪ್ರೈಸ್‌ಟ್ಯಾಗ್‌ನಲ್ಲಿ ಉತ್ತಮ ಡಿಸ್‌ಪ್ಲೇ ಇದಾಗಿದೆ ಎನ್ನಬಹುದು.

ಪ್ರೊಸೆಸರ್ ಯಾವುದು
ಶಿಯೋಮಿ ರೆಡ್ಮಿ ನೋಟ್ 10s ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೊ G95 SoC ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ MIUI 12.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6 GB RAM ಮತ್ತು 64 GB, 6 GB RAM ಮತ್ತು 128 GB ಹಾಗೂ 8 GB + 128 GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಪಡೆದಿದೆ. ಇದೊಂದಿಗೆ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಕ್ಯಾಮೆರಾ ವಿಶೇಷತೆ
ಶಿಯೋಮಿ ರೆಡ್ಮಿ ನೋಟ್ 10s ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಅಪ್ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್,2.2 ಅಪರ್ಚರ್ ಮತ್ತು 118 ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಬೆಳಕಿನ ವೇಳೆ ಮುಖ್ಯ ಕ್ಯಾಮೆರಾದಲ್ಲಿ ಫೋಟೊಗಳು ಅತ್ಯುತ್ತಮವಾಗಿ ಮೂಡಿಬರುತ್ತವೆ. ಹಲವು ಫೋಟೊ ಮೋಡ್‌ಗಳ ಆಯ್ಕೆ ಇದ್ದು, ಉಪಯುಕ್ತ ಅನಿಸಲಿವೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಶಿಯೋಮಿ ರೆಡ್ಮಿ ನೋಟ್ 10s ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್ ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿರುತ್ತದೆ ಮತ್ತು ಎಐ ಫೇಸ್ ಅನ್ಲಾಕ್ ಅನ್ನು ಬೆಂಬಲಿಸುತ್ತದೆ.

ಬೆಲೆ ಮತ್ತು ಲಭ್ಯತೆ
ಶಿಯೋಮಿ ರೆಡ್ಮಿ ನೋಟ್ 10s ಸ್ಮಾರ್ಟ್‌ಫೋನ್ 6 GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ 12,999ರೂ.ಗಳ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ. ಇನ್ನು 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ 14,999 ರೂ. ಪ್ರೈಸ್‌ನಲ್ಲಿ ದೊರೆಯುತ್ತದೆ. ಅದೇ ರೀತಿ 8 GB + 128 GB ಸ್ಟೋರೇಜ್ ವೇರಿಯಂಟ್ 16,499 ರೂ. ಪ್ರೈಸ್‌ನಲ್ಲಿ ದೊರೆಯುತ್ತದೆ. ಇನ್ನು ಫೋನ್ ನೀಲಿ, ಡಾರ್ಕ್ ಗ್ರೇ ಮತ್ತು ವೈಟ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086