Home
ಸುದ್ದಿಜಾಲ

Redmi: ರೆಡ್ಮಿ ನೋಟ್‌ 10S ಗೆ ಈ ಪರಿ ರಿಯಾಯಿತಿಯೇ! 128 GB ಸ್ಟೋರೇಜ್‌.. 64 MP ಕ್ಯಾಮೆರಾ

ರೆಡ್ಮಿ ಸ್ಮಾರ್ಟ್‌ಫೋನ್‌ಗಳಿಗೆ (Redmi smartphone) ಭಾರತದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಈ ನಡುವೆ ರೆಡ್ಮಿಯ ವಿವಿಧ ಸ್ಮಾರ್ಟ್‌ಫೋನ್‌ಗಳು ಭಿನ್ನ ವಿಭಿನ್ನ ಫೀಚರ್ಸ್‌ನೊಂದಿಗೆ ಆಫರ್ ಬೆಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಬಹು ಬೇಡಿಕೆ ಇರುವ ರೆಡ್ಮಿಯ ಈ ಸ್ಮಾರ್ಟ್‌ಫೋನ್‌ಗೆ 33% ಡಿಸ್ಕೌಂಟ್‌ ನೀಡಲಾಗಿದೆ.

ಹೌದು, ರೆಡ್ಮಿ ನೋಟ್‌ 10S ಗೆ (Redmi Note 10S) ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಭಾರೀ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 8GB RAM ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, 64 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾದೊಂದಿಗೆ ಕ್ವಾಡ್‌ ರಿಯರ್‌ ಕ್ಯಾಮೆರಾ (Quad rear camera) ಆಯ್ಕೆ ಪಡೆದಿದೆ. ಹಾಗಿದ್ರೆ, ಈ ಫೋನ್‌ಗಿರುವ ಆಫರ್ ಬೆಲೆ ಏನು?, ಈ ಫೋನ್‌ನ ಪ್ರಮುಖ ಫೀಚರ್ಸ್‌ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ರೆಡ್ಮಿ ನೋಟ್‌ 10S ಗೆ ಈ ಪರಿ ರಿಯಾಯಿತಿಯೇ! 128 GB ಸ್ಟೋರೇಜ್‌..

ರೆಡ್ಮಿ ನೋಟ್‌ 10S ಆಫರ್‌ ವಿವರ: ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 20,999ರೂ.ಗಳಾಗಿದ್ದು, ಇದಕ್ಕೆ ಅಮೆಜಾನ್‌ 33% ಡಿಸ್ಕೌಂಟ್‌ ನೀಡುವ ಮೂಲಕ 13,999 ರೂ.ಗಳ ಬೆಲೆಯಲ್ಲಿ ಇದನ್ನು ಖರೀದಿ ಮಾಡಲು ಅನುವು ಮಾಡಿಕೊಟ್ಟಿದೆ. ಅದಾಗ್ಯೂ ನೀವು ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಖರೀದಿ ಮಾಡಲು ಇಚ್ಚಿಸಿದರೆ ಬ್ಯಾಂಕ್‌ ಆಫರ್ ಹಾಗೂ ಇಎಮ್ಐ ,ವಿನಿಮಯ ಆಫರ್ ಬಳಕೆ ಮಾಡಬಹುದು.

ಬ್ಯಾಂಕ್‌ ಅಫರ್ ವಿಚಾರಕ್ಕೆ ಬರೋದಾದ್ರೆ ಈ ಸ್ಮಾರ್ಟ್‌ಫೋನ್ ಅನ್ನು ನೋ ಕಾಸ್ಟ್‌ ಇಎಂಐ ಆಯ್ಕೆ ಮೂಲಕ ತಿಂಗಳಿಗೆ 679 ರೂ.ಗಳನ್ನು ಪಾವತಿ ಮಾಡಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ ಸಿಗಲಿದೆ. ಇಷ್ಟೇ ಅಲ್ಲದೆ ಇನ್ನೂ ಹಲವಾರು ರೀತಿಯ ಬ್ಯಾಂಕ್‌ ಆಫರ್ ಅನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ರೆಡ್ಮಿ ನೋಟ್‌ 10S ಗೆ ಈ ಪರಿ ರಿಯಾಯಿತಿಯೇ! 128 GB ಸ್ಟೋರೇಜ್‌..

ರೆಡ್ಮಿ ನೋಟ್‌ 10S ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಫೋನ್ 6.43 ಇಂಚಿನ ಪುಲ್‌ಹೆಚ್‌ಡಿ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು 1080x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಉಳಿದಂತೆ ಈ ಫೋನ್ 20:9 ಆಕಾರ ಅನುಪಾತ 450 ನಿಟ್ಸ್‌ನಿಂದ 1100 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ರೆಡ್ಮಿ ನೋಟ್‌ 10S ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೊ G95 (12 nm) ಪ್ರೊಸೆಸರ್ ಬಲ ಪಡೆದುಕೊಂಡಿದ್ದು, ಇದು ಆಕ್ಟಾ-ಕೋರ್ (2x2.05 GHz ಕಾರ್ಟೆಕ್ಸ್-A76 & 6x2.0 GHz ಕಾರ್ಟೆಕ್ಸ್-A55) ನಿಂದ ಕೂಡಿದೆ. ಇದರೊಂದಿಗೆ ಮಾಲಿ-G76 MC4 ಜಿಪಿಯು ಆಯ್ಕೆ ಇದ್ದು, ಈ ಮೂಲಕ ಬಳಕೆದಾರರು ಉತ್ತಮ ಬಳಕೆಯ ಅನುಭವ ಪಡೆದುಕೊಳ್ಳಬಹುದು. ಉಳಿದಂತೆ ಈ ಫೋನ್ ಓಎಸ್ ಆಂಡ್ರಾಯ್ಡ್ 11, ನಲ್ಲಿ ರನ್‌ ಆಗಲಿದೆ. ಹಾಗೆಯೇ ಆಫರ್ ಬೆಲೆಯಲ್ಲಿ ಲಭ್ಯ ಆಗುತ್ತಿರುವ ಈ ಫೋನ್ 128GB + 8GB RAM ಆಯ್ಕೆ ಪಡೆದಿದೆ.

ರೆಡ್ಮಿ ನೋಟ್‌ 10S ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಕ್ಯಾಮೆರಾ ವಿಚಾರದಲ್ಲಂತೂ ಈ ಫೋನ್‌ ಪ್ರೀಮಿಯಂ ಫೀಚರ್ಸ್‌ ಪಡೆದುಕೊಂಡಿದೆ. ಅಂದರೆ ಕ್ವಾಡ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಅದರಲ್ಲಿ 64 MP ಮುಖ್ಯ ಕ್ಯಾಮೆರಾ, 8 MP ಅಲ್ಟ್ರಾವೈಡ್ ಸೆನ್ಸರ್‌, 2 MP ಮ್ಯಾಕ್ರೋ ಲೆನ್ಸ್ ಹಾಗೂ 2 MP ಡೆಪ್ತ್‌ ಸೆನ್ಸರ್‌ ಪಡೆದುಕೊಂಡಿದೆ. ಈ ಸೆನ್ಸರ್‌ಗಳು ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್‌, ಪನೋರಮಾ ಫೀಚರ್ಸ್‌ ಪಡೆದುಕೊಂಡಿವೆ. ಇದರೊಂದಿಗೆ 13 MP ಸೆಲ್ಫಿ ಕ್ಯಾಮೆರಾದಿಂದ ಉತ್ತಮ ಎನಿಸಿದೆ.

ರೆಡ್ಮಿ ನೋಟ್‌ 10S ಗೆ ಈ ಪರಿ ರಿಯಾಯಿತಿಯೇ! 128 GB ಸ್ಟೋರೇಜ್‌..

ರೆಡ್ಮಿ ನೋಟ್‌ 10S ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000 ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 33W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇದರೊಂದಿಗೆ ವೈ ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.1, A2DP, LE, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ,
FM ರೇಡಿಯೋ, ಯುಎಸ್‌ಬಿ ಟೈಪ್-ಸಿ 2.0 ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಪಡೆದುಕೊಂಡಿದೆ.

Best Mobiles in India

English summary
Redmi Note 10S has been given a huge offer on a leading e-commerce site. This smartphone has appeared with 8GB RAM option and 64 megapixel main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+