ರೆಡ್ಮಿ ನೋಟ್ 11 ಸರಣಿ ಲಾಂಚ್; ದೈತ್ಯ ಕ್ಯಾಮೆರಾ ಸೆನ್ಸಾರ್!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಸಂಸ್ಥೆಗಳಲ್ಲಿ ಒಂದಾದ ಶಿಯೋಮಿ ಹೊಸದಾಗಿ ರೆಡ್ಮಿ ನೋಟ್‌ 11 ಸ್ಮಾರ್ಟ್‌ಫೋನ್‌ ಸರಣಿಯನ್ನು ಬಿಡುಗಡೆ ಮಾಡಿದೆ. ಬಾರೀ ಕುತೂಹಲ ಮೂಡಿಸಿದ್ದ ಈ ಸರಣಿಯಲ್ಲಿ ರೆಡ್ಮಿ ನೋಟ್‌ 11, ರೆಡ್ಮಿ ನೋಟ್‌ 11S ಮತ್ತು ರೆಡ್ಮಿ ನೋಟ್‌ 11 ಪ್ರೊ 4G ಹಾಗೂ 5G ವೇರಿಯಂಟ್ ಮಾಡೆಲ್‌ಗಳನ್ನು ಒಳಗೊಂಡಿದೆ. ಇನ್ನು ಈ ಸರಣಿಯ ರೆಡ್ಮಿ ನೋಟ್‌ 11 ಪ್ರೊ 4G ಹಾಗೂ 5G ಸ್ಮಾರ್ಟ್‌ಫೋನ್‌ 108 ಮೆಗಾ ಪಿಕ್ಸೆಲ್‌ ಸಾಮರ್ಥ್ಯದ ಕ್ಯಾಮೆರಾವನ್ನು ಒಳಗೊಂಡಿದೆ.

ರೆಡ್ಮಿ ನೋಟ್ 11 ಸರಣಿ ಲಾಂಚ್; ದೈತ್ಯ ಕ್ಯಾಮೆರಾ ಸೆನ್ಸಾರ್!

ಹೌದು, ಶಿಯೋಮಿ ತನ್ನ ಬಹು ನಿರೀಕ್ಷಿತ ರೆಡ್ಮಿ ನೋಟ್‌ 11 ಸ್ಮಾರ್ಟ್‌ಫೋನ್‌ ಸರಣಿಯನ್ನು ವಿಶ್ವ ಮಾರುಕಟ್ಟೆಗೆ ಲಾಂಚ್‌ ಮಾಡಿದೆ. ರೆಡ್ಮಿ ನೋಟ್‌ 11, ರೆಡ್ಮಿ ನೋಟ್‌ 11S ಮತ್ತು ರೆಡ್ಮಿ ನೋಟ್‌ 11 ಪ್ರೊ 4G ಹಾಗೂ 5G ಫೋನ್‌ಗಳು 5,000 mAh ಬ್ಯಾಟರಿ ಬ್ಯಾಕ್‌ಅಪ್ ಆಯ್ಕೆ ಪಡೆದಿವೆ. ಈ ಫೋನ್‌ಗಳು ಭಿನ್ನ ಪ್ರೊಸೆಸರ್ ಬಲವನ್ನು ಒಳಗೊಂಡಿವೆ. ಈ ಫೋನ್‌ಗಳು ಶೀಘ್ರದಲ್ಲೇ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಹಾಗಾದರೆ ಶಿಯೋಮಿ ರೆಡ್ಮಿ ನೋಟ್‌ 11, ರೆಡ್ಮಿ ನೋಟ್‌ 11S ಮತ್ತು ರೆಡ್ಮಿ ನೋಟ್‌ 11 ಪ್ರೊ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ ನೋಟ್ 11 ಸರಣಿ ಲಾಂಚ್; ದೈತ್ಯ ಕ್ಯಾಮೆರಾ ಸೆನ್ಸಾರ್!

ರೆಡ್ಮಿ ನೋಟ್ 11 ಪ್ರೊ 5G ಮತ್ತು ರೆಡ್ಮಿ ನೋಟ್ 11 ಪ್ರೊ 4G ಫೀಚರ್ಸ್‌
ಈ ಫೋನ್ ಹೈ ಎಂಡ್ ಮಾಡೆಲ್ ಆಗಿದೆ. ರೆಡ್ಮಿ ನೋಟ್ 11 ಪ್ರೊ 5G 6.67 ಇಂಚಿನ 1080p ಪ್ಯಾನೆಲ್ ಅನ್ನು 120Hz ರಿಫ್ರೆಶ್ ದರದೊಂದಿಗೆ ಹೊಂದಿದೆ. ಕ್ಯಾಮೆರಾ ಮುಂಭಾಗದಲ್ಲಿ, ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ 108 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾದಿಂದ ಹೆಡ್‌ಲೈನ್ ಆಗಿದೆ ಮತ್ತು 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದಿಂದ ಸಹಾಯ ಮಾಡುತ್ತದೆ. ಈ ಫೋನ್ 5G ವೇಋಇಯಂಟ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 695 SoC ಪ್ರೊಸೆಸರ್ ಪಡೆದಿದ್ದು, ಇನ್ನು 4G ವೇರಿಯಂಟ್ ಮೀಡಿಯಾ ಟೆಕ್ ಹಿಲಿಯೋ G96 ಪ್ರೊಸೆಸರ್ ಅನ್ನು ಹೊಂದಿದೆ. ಎರಡೂ ಮಾದರಿಗಳು 67W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿವೆ.

ರೆಡ್ಮಿ ನೋಟ್ 11S ಫೀಚರ್ಸ್‌
ರೆಡ್ಮಿ ನೋಟ್ 11S ಫೋನ್ 6.43 ಇಂಚಿನ ಪೂರ್ಣ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದ್ದು, 90Hz AMOLED ಡಿಸ್ಪ್ಲೇಯನ್ನು ಪಡೆದಿದೆ. ಈ ಫೋನ್ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕಗಳು ಮತ್ತು ಹೆಡ್‌ಫೋನ್ ಜ್ಯಾಕ್‌ಗಳನ್ನು ಹೊಂದಿವೆ.

ರೆಡ್ಮಿ ನೋಟ್ 11 ಸರಣಿ ಲಾಂಚ್; ದೈತ್ಯ ಕ್ಯಾಮೆರಾ ಸೆನ್ಸಾರ್!

ರೆಡ್ಮಿ ನೋಟ್ 11 ಫೀಚರ್ಸ್‌
ರೆಡ್ಮಿ ನೋಟ್ 11 ಫೋನ್ 6.43 ಇಂಚಿನ ಪೂರ್ಣ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದ್ದು, 90 Hz 1080p LCD ಡಿಸ್ಪ್ಲೇಯನ್ನು ಪಡೆದಿದೆ. ಈ ಫೋನ್ ಸ್ನಾಪ್‌ಡ್ರಾಗನ್ 680 ಚಿಪ್‌ಸೆಟ್ ಪ್ರೊಸೆಸರ್ ಹೊಂದಿದೆ. ಇನ್ನು ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿದೆ. ಜೊತೆಗೆ ಈ ಫೋನ್ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್‌ಗಳು ಶೀಘ್ರದಲ್ಲೇ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ.

ಬೆಲೆ ಎಷ್ಟು?
ರೆಡ್ಮಿ ನೋಟ್ 11 ಪ್ರೊ ಆರಂಭಿಕ ಬೆಲೆಯು $330 ಆಗಿದೆ. ರೆಡ್ಮಿ ನೋಟ್ 11 ಫೋನಿನ ಆರಂಭಿಕ ವೇರಿಯಂಟ್ ದರವು $199 ಆಗಿದ್ದು, ರೆಡ್ಮಿ ನೋಟ್ 11S ಫೋನ್ ಬೇಸ್ ವೇರಿಯಂಟ್ ಬೆಲೆಯು $249 ಆಗಿದೆ.

Best Mobiles in India

English summary
Redmi Note 11, Note 11S, Note 11 Pro Launched Globally: Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X