Home
ಸುದ್ದಿಜಾಲ

ಇಂದು ರೆಡ್ಮಿ ನೋಟ್‌ 11 ಪ್ರೊ ಮೊದಲ ಮಾರಾಟ!..ಡಿಸ್ಕೌಂಟ್‌ ಸಿಗುತ್ತಾ?

ಶಿಯೋಮಿ ಕಂಪೆನಿಯು ನೂತನವಾಗಿ ಲಾಂಚ್ ಮಾಡಿರುವ ರೆಡ್ಮಿ ನೋಟ್‌ 11 ಪ್ರೊ ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಈಗಾಗಲೇ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್‌ ಫಸ್ಟ್ ಸೇಲ್ ಇಂದು ಮಧ್ಯಾಹ್ನ 12 ರಿಂದ ಇ ಕಾಮರ್ಸ್‌ ತಾಣ ಅಮೆಜಾನ್ ಮತ್ತು ಅಧಿಕೃತ Mi.com ತಾಣಗಳಲ್ಲಿ ಮಾರಾಟ ಆರಂಭವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಆರಂಭಿಕ 6GB RAM + 128GB ಸ್ಟೋರೇಜ್‌ನ ವೇರಿಯಂಟ್ 17,999 ರೂ.ಗಳ ಪ್ರೈಸ್‌ ಟ್ಯಾಗ್‌ ಹೊಂದಿದೆ.

ಸ್ಮಾರ್ಟ್‌ಫೋನ್

ರೆಡ್ಮಿ ನೋಟ್‌ 11 ಪ್ರೊ ಸ್ಮಾರ್ಟ್‌ಫೋನ್ ಮೊದಲ ಮಾರಾಟ ಇಂದು (ಮಾರ್ಚ್‌. 23) ನಡೆಯಲಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, 108 ಮೆಗಾ ಪಿಕ್ಸಲ್ ಕ್ಯಾಮೆರಾ ಸೆನ್ಸಾರ್ ಒಳಗೊಂಡಿದೆ. ಹಾಗೆಯೇ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ನೊಂದಿಗೆ 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಹಾಗೆಯೇ ಎರಡು ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿದ್ದು, ಅವುಗಳು ಕ್ರಮವಾಗಿ 6GB RAM + 128GB ಮತ್ತು 8GB + 128GB ಆಗಿವೆ. ಹಾಗಾದರೇ ರೆಡ್ಮಿ ನೋಟ್ 11 ಪ್ರೊ ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ರೆಡ್ಮಿ ನೋಟ್‌ 11 ಪ್ರೊ ಫೀಚರ್ಸ್‌

ರೆಡ್ಮಿ ನೋಟ್‌ 11 ಪ್ರೊ ಫೀಚರ್ಸ್‌

ರೆಡ್ಮಿ ನೋಟ್‌ 11 ಪ್ರೊ ಫೋನ್ 6.67 ಇಂಚಿನ ಫುಲ್‌ ಹೆಚ್‌ಡಿ + ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಕೂಡ 120Hz ರಿಫ್ರೆಶ್ ರೇಟ್‌ ಮತ್ತು 320Hz ಟಚ್ ಸ್ಯಾಂಪ್ಲಿಂಗ್ ಬೆಂಬಲದೊಂದಿಗೆ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಮೀಡಿಯಾ ಟೆಕ್‌ ಹಿಲಿಯೋ G96 ಪ್ರೊಸೆಸರ್ ಬಲವನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸಲ್ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಒಳಗೊಂಡಿದೆ.

ಚಾರ್ಜಿಂಗ್

ಇದಲ್ಲದೆ ಈ ಫೋನ್ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 67W ವೇಗದ ಚಾರ್ಜಿಂಗ್ ಅನ್ನು ಹೊಂದಿದೆ. ಇನ್ನು ಈ ಫೋನ್ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಸ್ಟಿರಿಯೊ ಸ್ಪೀಕರ್ ಸೆಟಪ್, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, (ಹೈಬ್ರಿಡ್) ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್, ಐಆರ್ ಬ್ಲಾಸ್ಟರ್ ಮತ್ತು 3.5 ಎಂಎಂ ಆಡಿಯೊ ಜಾಕ್ ಅನ್ನು ಹೊಂದಿದೆ. ಇದು IP53 ಸ್ಪ್ಲಾಶ್-ನಿರೋಧಕ ರೇಟಿಂಗ್ ಅನ್ನು ಸಹ ಹೊಂದಿದೆ. ಆಂಡ್ರಾಯ್ಡ್ 11 ಅನ್ನು ಆಧರಿಸಿದ MIUI 13 ಅನ್ನು ಹ್ಯಾಂಡ್‌ಸೆಟ್ ಬೂಟ್ ಮಾಡುತ್ತದೆ. ಈ ಸ್ಮಾರ್ಟ್‌ಫೋನ್‌ ಸ್ಟೆಲ್ತ್ ಬ್ಲ್ಯಾಕ್, ಫ್ಯಾಂಟಮ್ ವೈಟ್ ಮತ್ತು ಸ್ಟಾರ್ ಬ್ಲೂ ಬಣ್ಣಗಳಲ್ಲಿ ಬರುತ್ತದೆ.

ಬೆಲೆ ಎಷ್ಟು, ಆಫರ್ ಏನು ಮತ್ತು ಲಭ್ಯತೆ?

ಬೆಲೆ ಎಷ್ಟು, ಆಫರ್ ಏನು ಮತ್ತು ಲಭ್ಯತೆ?

ಭಾರತದಲ್ಲಿ ರೆಡ್ಮಿ ನೋಟ್‌ 11 ಪ್ರೊ ಫೋನ್ ಎರಡು ವೇರಿಯಂಟ್ ಆಯ್ಕೆ ಪಡೆದಿದೆ. 6GB RAM + 128GB ಸ್ಟೋರೇಜ್‌ ವೇರಿಯಂಟ್ ಬೆಲೆಯು 17,999ರೂ. ಆಗಿದೆ. 8GB + 128GB ಸ್ಟೋರೇಜ್‌ ವೇರಿಯಂಟ್ ಬೆಲೆಯು 19,999ರೂ. ಆಗಿದೆ. ಇನ್ನು ಈ ಫೋನ್ ಇಂದು ಅಮೆಜಾನ್ ತಾಣದ ಮೂಲಕ ಇಂದು (ಮಾರ್ಚ್‌. 23) ಪ್ರಾರಂಭಿಸಲಿದೆ. ಹೆಚ್‌ಡಿಎಫ್‌ ಕ್ರೆಡಿಟ್ ಕಾರ್ಡ್‌ ನಲ್ಲಿ 1,000ರೂ. ರಿಯಾಯಿತಿ ಸಿಗಲಿದೆ. ಹಾಗೆಯೇ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯ ಮಾಡಿದೆ.

Best Mobiles in India

English summary
Redmi Note 11 Pro Set to Go For First Sale Today Via Amazon: Price, Offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+