Home
ಸುದ್ದಿಜಾಲ

Redmi: ರೆಡ್ಮಿಯ ಈ ವಿಶೇಷ ಫೋನ್‌ಗೆ ದೊಡ್ಡ ಡಿಸ್ಕೌಂಟ್‌! 108MP ಕ್ಯಾಮೆರಾ.. 8GB RAM

ರೆಡ್ಮಿ (Redmi) ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದಿದೆ. ಅದರಲ್ಲೂ ಕ್ಯಾಮೆರಾ ಹಾಗೂ ಸ್ಟೋರೇಜ್ ವಿಚಾರದಲ್ಲಿ ಈ ಫೋನ್‌ ವಿಶೇಷ ಗ್ರಾಹಕರನ್ನು ಪಡೆದುಕೊಂಡಿದೆ. ಈ ನಡುವೆ ಭಾರತದಲ್ಲಿ ಹೆಚ್ಚು ಸೇಲ್‌ ಆಗುತ್ತಿರುವ ಈ ಫೋನ್‌ಗೆ ದೊಡ್ಡ ರಿಯಾಯಿತಿ ನೀಡಲಾಗಿದೆ.

ಹೌದು, ರೆಡ್ಮಿ ನೋಟ್‌ 11 ಪ್ರೊ (Redmi Note 11 Pro) ಸ್ಮಾರ್ಟ್‌ಫೋನ್‌ ಇದೀಗ ಆಫರ್ ಬೆಲೆಯಲ್ಲಿ ಲಭ್ಯ ಇದೆ. ಫೋನ್ ಈಗಾಗಲೇ ಭಾರತದಲ್ಲಿ ಹೆಚ್ಚು ಸೇಲ್‌ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ, 8GB RAM ಹಾಗೂ 108MP ಮುಖ್ಯ ಕ್ಯಾಮೆರಾ ಸೆನ್ಸರ್ ಪಡೆಯುವ ಮೂಲಕ ವಿಶೇಷ ಎನಿಸಿದೆ. ಹಾಗಿದ್ರೆ, ಇದರ ಆಫರ್ ಬೆಲೆ ವಿವರ ಹಾಗೂ ಫೀಚರ್ಸ್‌ ಬಗ್ಗೆ ತಿಳಿಯೋಣ ಬನ್ನಿ.

ರೆಡ್ಮಿಯ ಈ ವಿಶೇಷ ಫೋನ್‌ಗೆ ದೊಡ್ಡ ಡಿಸ್ಕೌಂಟ್‌! 108MP ಕ್ಯಾಮೆರಾ.. 8GB RAM

ರೆಡ್ಮಿ ನೋಟ್‌ 11 ಪ್ರೊ ಸ್ಮಾರ್ಟ್‌ಫೋನ್‌ ಆಫರ್ ವಿವರ: ಈ ಸ್ಮಾರ್ಟ್‌ಫೋನ್ ಸಾಮಾನ್ಯ ಬೆಲೆ 24,999ರೂ.ಗಳಾಗಿದೆ. ಆದರೆ ಇದಕ್ಕೆ ಫ್ಲಿಪ್‌ಕಾರ್ಟ್ (Flipkart) 28% ರಿಯಾಯಿತಿ ಘೋಷಣೆ ಮಾಡಿದ್ದು, ಇದರಿಂದಾಗಿ ನೀವು ಇದನ್ನು 17,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಬ್ಯಾಂಕ್‌ ಆಫರ್ ಹಾಗೂ ವಿನಿಮಯ ಆಫರ್ ಮೂಲಕ ಇನ್ನೂ ಅಗ್ಗದ ದರದಲ್ಲಿ ಈ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ಬ್ಯಾಂಕ್‌ ಆಫರ್ ಕಡೆ ಕಣ್ಣಾಯಿಸುವುದಾದರೆ ಈ ಫೋನ್ ಅನ್ನು ಕೋಟಾಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿ ಮಾಡಿದ್ರೆ 10% ರಿಯಾಯಿತಿ ಪಡೆದುಕೊಳ್ಳಬಹುದು. ಹಾಗೆಯೇ ಆರ್‌ಬಿಎಲ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 10% ,ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಲ್ಲಿ 10% ರಿಯಾಯಿತಿ ಸಿಗಲಿದ್ದು, ಕೋಟಾಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಆರ್‌ಬಿಎಲ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಸೇರಿದಂತೆ ಇನ್ನೂ ಹತ್ತಾರು ಬ್ಯಾಂಕ್‌ ಆಫರ್ ಗಳನ್ನು ಪಡೆದುಕೊಳ್ಳಬಹುದಾಗಿದೆ

ರೆಡ್ಮಿಯ ಈ ವಿಶೇಷ ಫೋನ್‌ಗೆ ದೊಡ್ಡ ಡಿಸ್ಕೌಂಟ್‌! 108MP ಕ್ಯಾಮೆರಾ.. 8GB RAM

ರೆಡ್ಮಿ ನೋಟ್‌ 11 ಪ್ರೊ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.67 ಇಂಚಿನ ಅಮೋಲೆಡ್ ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದ್ದು, 395ppi ಪಿಕ್ಸೆಲ್ ಸಾಂದ್ರತೆ ಮತ್ತು 1080 x 2400 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಬೆಜೆಲ್-ಮುಕ್ತ ಮುಂಭಾಗದ ಡಿಸ್‌ಪ್ಲೇಯು 20:9 ಆಕಾರ ಅನುಪಾತ ಹೊಂದಿದ್ದು, 120Hz ನ ರಿಫ್ರೆಶ್ ರೇಟ್‌ ಮೂಲ ಉತ್ತಮ ಅನುಭವ ನೀಡಲಿದೆ.

ರೆಡ್ಮಿ ನೋಟ್‌ 11 ಪ್ರೊ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ: ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G96 ಸಿಪಿಯು (MediaTek Helio G96 CPU) ಬಲ ಪಡೆದಿದ್ದು, ಇದು ಟ್ವಿನ್ ಕೋರ್, ಕಾರ್ಟೆಕ್ಸ್ A76 ಲೇಔಟ್ ಮತ್ತು ಹೆಕ್ಸಾ ಕೋರ್, ಕಾರ್ಟೆಕ್ಸ್ A55 ಕಾನ್ಫಿಗರೇಶನ್ ಹೊಂದಿರುವ ಆಕ್ಟಾ-ಕೋರ್ CPU ನ ಗರಿಷ್ಠ ಗಡಿಯಾರದ ವೇಗವು 2.05GHz ಆಗಿದೆ. ಇದು ಮಾಲಿ G57 MC2 ಜಿಪಿಯು ಜೊತೆಗೆ ಪ್ಯಾಕ್‌ ಆಗಿದೆ. ಉಳಿದಂತೆ 8GB RAM ಆಯ್ಕೆ ಪಡೆದಿರುವುದರಿಂದ ಉತ್ತಮ ಕಾರ್ಯಕ್ಷಮತೆಯನ್ನು ಈ ಫೋನ್‌ನಲ್ಲಿ ಪಡೆಯಬಹುದಾಗಿದೆ.

ರೆಡ್ಮಿಯ ಈ ವಿಶೇಷ ಫೋನ್‌ಗೆ ದೊಡ್ಡ ಡಿಸ್ಕೌಂಟ್‌! 108MP ಕ್ಯಾಮೆರಾ.. 8GB RAM

ರೆಡ್ಮಿ ನೋಟ್‌ 11 ಪ್ರೊ ಕ್ಯಾಮೆರಾ ರಚನೆ: ಇನ್ನು ಈ ಫೋನ್ 108MP ನ f/1.9 ಪ್ರಾಥಮಿಕ ಸೆನ್ಸರ್‌, 8MP ನ f/2.2 ಅಲ್ಟ್ರಾ ವೈಡ್-ಆಂಗಲ್ ಸೆನ್ಸರ್‌, 2MP ನ f/2.4 ಡೆಪ್ತ್ ಸೆನ್ಸರ್‌ ಮತ್ತು 2MP ನ f/2.4 ಮ್ಯಾಕ್ರೋ ಸೆನ್ಸರ್‌ ನೊಂದಿಗೆ ಕ್ವಾಡ್ ರಿಯರ್‌ ಕ್ಯಾಮರಾ ರಚನೆ ಪಡೆದಿದ್ದು, ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ f/2.4 ತಂತ್ರಜ್ಞಾನದೊಂದಿಗೆ 16MP ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದೆ.

Best Mobiles in India

English summary
Redmi Note 11 Pro smartphone is now available at an offer price. The phone is already among the top selling smartphones in India. Now this smartphone is special by getting AMOLED display option, 8GB RAM and 108MP main camera sensor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+