ಈ ರೆಡ್ಮಿ ಮೊಬೈಲ್ ಬೆಲೆ ಇಳಿಕೆ!..6GB RAM ಇದೆ, ಖರೀದಿಸಲು ಉತ್ತಮವೇ?
ಜನಪ್ರಿಯ ಮೊಬೈಲ್ ಸಂಸ್ಥೆಗಳಲ್ಲಿ ರೆಡ್ಮಿ ಕಂಪನಿಯು ಸಹ ಒಂದಾಗಿದ್ದು, ಕೆಲವು ಅತ್ಯುತ್ತಮ ಫೋನ್‌ಗಳ ಮೂಲಕ ಸೈ ಎನಿಸಿಕೊಂಡಿದೆ. ಆ ಪೈಕಿ ರೆಡ್ಮಿ ನೋಟ್ 11SE ಮೊಬೈಲ್ ಸಹ ಬಜೆಟ್ ಬೆಲೆಯಲ್ಲಿ ಗಮನ ಸೆಳೆದಿದೆ. ಆದರೆ ಇದೀಗ ಈ ಮೊಬೈಲ್ ಬೆಲೆಯಲ್ಲಿ ಸಖತ್ ಡಿಸ್ಕೌಂಟ್ ಆಗಿದ್ದು, ಗ್ರಾಹಕರು ಖುಷಿ ಪಡುವಂತೆ ಮಾಡಿದೆ.
ಇ ಕಾಮರ್ಸ್ ತಾಣ ಅಮೆಜಾನ್ ನಲ್ಲಿ ರೆಡ್ಮಿ ನೋಟ್ 11SE ಮೊಬೈಲ್ 19% ರಷ್ಟು ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. 6GB RAM + 64 GB ವೇರಿಯಂಟ್ ಫೋನ್ ಬೆಲೆ 16,999ರೂ. ಇದ್ದು, ಈಗ 13,690ರೂ. ಗಳ ಡಿಸ್ಕೌಂಟ್ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್ ಸಹ ದೊರೆಯುತ್ತದೆ.

ಇನ್ನು ರೆಡ್ಮಿ ನೋಟ್ 11SE ಫೋನ್ ಮೀಡಿಯಾ ಟೆಕ್ ಹಿಲಿಯೋ G95 SoC ಪ್ರೊಸೆಸರ್ ಸಾಮರ್ಥ್ಯ ಪಡೆದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಜೊತೆಗೆ ಇನ್ನು ಈ ಫೋನ್ ಬ್ಲೂ, ಕಾಸ್ಮಿಕ್ ವೈಟ್, ಸ್ಪೇಸ್ ಬ್ಲ್ಯಾಕ್ ಮತ್ತು ಥಂಡರ್ ಪರ್ಪಲ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೇ ರೆಡ್ಮಿ ನೋಟ್ 11SE ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ ನೋಟ್ 11SE ಡಿಸ್‌ಪ್ಲೇ ರಚನೆ ಹೇಗಿದೆ : ಈ ಸ್ಮಾರ್ಟ್‌ಫೋನ್ 6.43 ಇಂಚಿನ AMOLED ಡಿಸ್‌ಪ್ಲೇಯನ್ನು ಪಡೆದಿದ್ದು, ಇನ್ನು ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409ppi ಆಗಿದೆ. ಹಾಗೆಯೇ ಬ್ರೈಟ್ನೆಸ್ 1,100 nits ಆಗಿದೆ.
ರೆಡ್ಮಿ ನೋಟ್ 11SE ಪ್ರೊಸೆಸರ್ ಪವರ್ : ರೆಡ್ಮಿ ನೋಟ್ 11SE ಮೊಬೈಲ್ ಮೀಡಿಯಾ ಟೆಕ್ ಹಿಲಿಯೋ G95 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ MIUI 12.5 ಓಎಸ್ ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6GB RAM ಮತ್ತು 64GB ಆಂತರೀಕ ಸ್ಟೋರೇಜ್‌ನ ಸಿಂಗಲ್ ವೇರಿಯಂಟ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ.
ರೆಡ್ಮಿ ನೋಟ್ 11SE ಕ್ಯಾಮೆರಾ ಸೆನ್ಸಾರ್ ಆಯ್ಕೆ : ರೆಡ್ಮಿ ನೋಟ್ 11SE ಮೊಬೈಲ್ ಕ್ವಾಡ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ.
ಹಾಗೆಯೇ ಮೂರನೇ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿವೆ. ಜೊತೆಗೆ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಎರಡೂ ಕ್ಯಾಮೆರಾ ರಚನೆಗಳು 30 fps ನಲ್ಲಿ 4K ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಪಡೆದಿವೆ.
ರೆಡ್ಮಿ ನೋಟ್ 11SE ಬ್ಯಾಟರಿ ಬ್ಯಾಕ್‌ಅಪ್ ಎಷ್ಟು : ರೆಡ್ಮಿ ನೋಟ್ 11SE ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದೆ. ಇದು 33W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸ್ಪೀಕರ್ ಸೆಟಪ್, 3.5mm ಹೆಡ್‌ಫೋನ್ ಜ್ಯಾಕ್, USB ಟೈಪ್-C ಪೋರ್ಟ್, ಸೈಡ್-ಮೌಂಟರ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು AI ಫೇಸ್ ಅನ್‌ಲಾಕ್ ಅನ್ನು ಒಳಗೊಂಡಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಸ್ಮಾರ್ಟ್‌ಫೋನ್ IP53 ಆಯ್ಕೆ ಅನ್ನು ಪಡೆದಿದೆ.
ರೆಡ್ಮಿ ನೋಟ್ 11SE ಮೆಮೊರಿ ಹಾಗೂ ಕಲರ್ ಆಯ್ಕೆ : ಈ ಸ್ಮಾರ್ಟ್‌ಫೋನ್ 6GB RAM ಮತ್ತು 64GB ಸಾಮರ್ಥ್ಯದ ಸಿಂಗಲ್ ವೇರಿಯಂಟ್ ಆಯ್ಕೆ ಪಡೆದಿದೆ. ಇನ್ನು ಈ ಮೊಬೈಲ್ ಬ್ಲೂ, ಕಾಸ್ಮಿಕ್ ವೈಟ್, ಸ್ಪೇಸ್ ಬ್ಲ್ಯಾಕ್ ಮತ್ತು ಥಂಡರ್ ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ.


Click it and Unblock the Notifications








