ರೆಡ್ಮಿ ನೋಟ್ 11S ಸ್ಮಾರ್ಟ್‌ಫೋನ್‌ಗೆ ಇಷ್ಟೊಂದು ರಿಯಾಯಿತಿಯೇ... ಆಫರ್ ಬೆಲೆ ಎಷ್ಟು?
ಸ್ಮಾರ್ಟ್‌ಫೋನ್ (smartphone) ಹೊಂದುವುದು ಪ್ರತಿಯೊಬ್ಬರ ಆಸೆ. ಹಾಗೆಯೇ ಹಲವಾರು ಜನರು ಹೊಸ ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಅಗುವುದು ಸಹ ಸಾಮಾನ್ಯವಾದ ವಿಚಾರ. ಈ ನಡುವೆ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಬೆಲೆ ಹೊಂದಿರುವುದರಿಂದ ಹಲವು ಜನರಿಗೆ ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಆಗುವುದು ಕಷ್ಟ. ಆದರೆ ಈ ವಿಶೇಷ ಆಫರ್‌ಗಳು ನಿಮ್ಮ ಕನಸನ್ನು ನನಸು ಮಾಡಲಿವೆ.
ಹೌದು, ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಆಗಾಗ್ಗೆ ಹೊಸ ಫೋನ್‌ಗಳಿಗೆ ಆಫರ್ ಸಿಗುವುದು ಸಾಮಾನ್ಯ ವಿಚಾರ. ಅದರಂತೆ ಈಗ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದ್ದ ರೆಡ್ಮಿ ನೋಟ್ 11S (Redmi Note 11S) ಗೆ ಭರ್ಜರಿ ಡಿಸ್ಕೌಂಟ್ ನೀಡಲಾಗಿದೆ. ಈ ಮೂಲಕ ನೀವು ಕೈಗೆಟಕುವ ದರದಲ್ಲಿ ಈ ಫೋನ್ ಖರೀದಿ ಮಾಡಬಹುದು. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ತಿಳಿಯೋಣ ಬನ್ನಿ.

ರೆಡ್ಮಿ ನೋಟ್ 11S ಆಫರ್ ವಿವರ: ಈ ಸ್ಮಾರ್ಟ್‌ಫೋನ್ 19,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ, ಈ ಫೋನ್‌ಗೆ ಅಮೆಜಾನ್‌ನಲ್ಲಿ ಅಫರ್ ನೀಡಲಾಗಿದ್ದು, ಈ ಮೂಲಕ ನೀವು 12,999ರೂ.ಗಳಿಗೆ ಖರೀದಿ ಮಾಡಬಹುದು. ಅಂದರೆ ಈ ಫೋನ್ ಮೇಲೆ ಅಮೆಜಾನ್ 35% ಡಿಸ್ಕೌಂಟ್ ನೀಡಿದೆ. ಅಷ್ಟಾಗಿಯೂ ಇನ್ನೂ ಹೆಚ್ಚಿನ ಆಫರ್ ಬೇಕು ಎಂದರೆ ನೀವು ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳನ್ನು ಬಳಕೆ ಮಾಡಿಕೊಳ್ಳಬಹುದು. ಅದರಲ್ಲೂ ಎಕ್ಸ್‌ಚೇಂಜ್ ಆಫರ್‌ನಲ್ಲಿ 11,700 ರೂ. ವರೆಗೆ ಉಳಿಸಬಹುದು.
ರೆಡ್ಮಿ ನೋಟ್ 11S ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ ಕೈಗೆಟಕುವ ದರದಲ್ಲಿ ಏನೋ ಲಭ್ಯವಾಗುತ್ತಿದೆ. ಆದರೆ ಇದನ್ನು ಈ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಫೀಚರ್ಸ್ ಬಗ್ಗೆ ಕಣ್ಣಾಡಿಸುವುದು ಅಗತ್ಯವಾಗಿದೆ. ಅದರಂತೆ ಈ ಫೋನ್ 6.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಈ ಡಿಸ್‌ಪ್ಲೇ 20:9 ಆಕಾರ ಅನುಪಾತ ಹೊಂದಿದೆ. ಜೊತೆಗೆ 1080 x 2400 ಪಿಕ್ಸೆಲ್ ಸ್ಕ್ರೀನ್‌ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿರುವ ಈ ಡಿಸ್‌ಪ್ಲೇ 409ppi ಪಿಕ್ಸೆಲ್ ಸಾಂದ್ರತೆ ಮತ್ತು 90Hz ರಿಫ್ರೆಶ್ ರೇಟ್ ಪಡೆದಿದೆ.
ರೆಡ್ಮಿ ನೋಟ್ 11S ಪ್ರೊಸೆಸರ್ ಮಾಹಿತಿ: ಈ ಫೋನ್ ಮೀಡಿಯಾಟೆಕ್ ಹಿಲಿಯೋ G96 CPU ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಮಾಲಿ -G57 MC2 GPU ಬಲ ಪಡೆದುಕೊಂಡಿದೆ. ಇದರೊಂದಿಗೆ 6GB RAM ಆಕ್ಟಾ-ಕೋರ್ CPU ಅನ್ನು ಬೆಂಬಲಿಸಲಿದ್ದು, ಇದು 2.05GHz ಕಾರ್ಟೆಕ್ಸ್ A76 ಜೊತೆಗೆ 2GHz ಕಾರ್ಟೆಕ್ಸ್ A55 ಅನ್ನು ಸಂಯೋಜಿಸುತ್ತದೆ.
ರೆಡ್ಮಿ ನೋಟ್ 11S ಕ್ಯಾಮೆರಾ ರಚನೆ: ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ 108MP f/1.9 ವೈಡ್-ಆಂಗಲ್ ಮುಖ್ಯ ಕ್ಯಾಮೆರಾ, 8MP f/2.2 ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ, 2MP f/2.4 ಮ್ಯಾಕ್ರೋ ಕ್ಯಾಮೆರಾ ಮತ್ತು 2MP f/2.4 ಡೆಪ್ತ್ ಕ್ಯಾಮೆರಾ ಮೂಲಕ ಕ್ವಾಡ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಸೆನ್ಸರ್‌ಗಳು ಆಟೋಫೋಕಸ್, ಡಿಜಿಟಲ್ ಜೂಮ್, ಟಚ್-ಟು-ಫೋಕಸ್, ಎಕ್ಸ್‌ಪೋಸರ್, ISO ಹೊಂದಾಣಿಕೆ ಮತ್ತು ಹೆಚ್‌ಡಿಆರ್ ಮೋಡ್ ಫೀಚರ್ಸ್ ಹೊಂದಿವೆ ಮತ್ತು 16MP f/2.4 ಸೆಲ್ಫಿ ಕ್ಯಾಮೆರಾ ಆಯ್ಕೆ ವಿಶೇಷ ಎನಿಸಿದೆ.

ರೆಡ್ಮಿ ನೋಟ್ 11S ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ ತಲ್ಲೀನಗೊಳಿಸುವ ಆಡಿಯೊ ಅನುಭವಕ್ಕಾಗಿ ಡ್ಯುಯಲ್ ಸ್ಟಿರಿಯೊ ಸ್ಪೀಕರ್, 3.5 ಎಂಎಂ ಜ್ಯಾಕ್, ಐಆರ್ ಬ್ಲಾಸ್ಟರ್, ಡೆಡಿಕೇಟೆಡ್ ಮೈಕ್ರೋ ಎಸ್‌ಡಿ ಸ್ಲಾಟ್, ಝಡ್-ಆಕ್ಸಿಸ್ ಲೀನಿಯರ್ ವೈಬ್ರೇಶನ್ ಮೋಟಾರ್, ಸ್ಪ್ಲಾಶ್, ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ ಸೌಲಭ್ಯ ಪಡೆದುಕೊಂಡಿದೆ.


Click it and Unblock the Notifications








