ಇಂದು 'ರೆಡ್ಮಿ ನೋಟ್‌ 11SE' ಫಸ್ಟ್‌ ಸೇಲ್‌!..ಏನಾದ್ರೂ ಡಿಸ್ಕೌಂಟ್‌ ಇದೆಯಾ?

|

ಶಿಯೋಮಿ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ರೆಡ್ಮಿ ನೋಟ್‌ 11SE ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಈಗಾಗಲೇ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್‌ ಫಸ್ಟ್ ಸೇಲ್ ಇಂದು ಮಧ್ಯಾಹ್ನ 12 ರಿಂದ ಇ ಕಾಮರ್ಸ್‌ ತಾಣ ಅಮೆಜಾನ್ ಮತ್ತು ಅಧಿಕೃತ Mi.com ತಾಣಗಳಲ್ಲಿ ಮಾರಾಟ ಆರಂಭವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ 6GB RAM ಮತ್ತು 64GB ಸಾಮರ್ಥ್ಯದ ವೇರಿಯಂಟ್‌ ಬೆಲೆಯು 13,499 ರೂ. ಆಗಿದೆ.

ಫೋನ್

ರೆಡ್ಮಿ ನೋಟ್‌ 11SE ಸ್ಮಾರ್ಟ್‌ಫೋನ್ ಮೊದಲ ಮಾರಾಟ ಇಂದು (ಆಗಷ್ಟ್‌ 31) ಫ್ಲಿಪ್‌ಕಾರ್ಟ್‌ನಲ್ಲಿ ನಡೆಯಲಿದೆ. ಈ ಫೋನ್ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್ ಒಳಗೊಂಡಿದೆ. ಹಾಗೂ ಫಾಸ್ಟ್‌ ಚಾರ್ಜಿಂಗ್ ಬೆಂಬಲಿತ 5000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಹಾಗೆಯೇ 6GB RAM + 64 GB ಸ್ಟೋರೇಜ್‌ನ ಸಿಂಗಲ್‌ ವೇರಿಯಂಟ್ ಆಯ್ಕೆ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬ್ಲೂ, ಕಾಸ್ಮಿಕ್‌ ವೈಟ್‌, ಸ್ಪೇಸ್‌ ಬ್ಲ್ಯಾಕ್ ಮತ್ತು ಥಂಡರ್‌ ಪರ್ಪಲ್‌ ಬಣ್ಣದ ಆಯ್ಕೆಗಳಲ್ಲಿ ಪಡೆದಿದೆ. ಇನ್ನುಳಿದಂತೆ ರೆಡ್ಮಿ ನೋಟ್‌ 11SE ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ರೆಡ್ಮಿ ನೋಟ್‌ 11SE ಸ್ಮಾರ್ಟ್‌ಫೋನ್‌ 6.43 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 409ppi ಆಗಿದೆ. ಹಾಗೆಯೇ ಬ್ರೈಟ್ನೆಸ್‌ 1,100 nits ಆಗಿದೆ.

ಪ್ರೊಸೆಸರ್‌ ಪವರ್ ಯಾವುದು?

ಪ್ರೊಸೆಸರ್‌ ಪವರ್ ಯಾವುದು?

ರೆಡ್ಮಿ ನೋಟ್‌ 11SE ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೋ G95 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ MIUI 12.5 ಓಎಸ್‌ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 64GB ಆಂತರೀಕ ಸ್ಟೋರೇಜ್‌ನ ಸಿಂಗಲ್‌ ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ.

ಕ್ಯಾಮೆರಾ ಸೆನ್ಸಾರ್ ವಿಶೇಷ

ಕ್ಯಾಮೆರಾ ಸೆನ್ಸಾರ್ ವಿಶೇಷ

ರೆಡ್ಮಿ ನೋಟ್‌ 11SE ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಾಗೆಯೇ ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿವೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಎರಡೂ ಕ್ಯಾಮೆರಾ ಸೆಟಪ್‌ಗಳು 30 fps ನಲ್ಲಿ 4K ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ರೆಡ್ಮಿ ನೋಟ್‌ 11SE ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸ್ಪೀಕರ್ ಸೆಟಪ್, 3.5mm ಹೆಡ್‌ಫೋನ್ ಜ್ಯಾಕ್, USB ಟೈಪ್-C ಪೋರ್ಟ್, ಸೈಡ್-ಮೌಂಟರ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು AI ಫೇಸ್ ಅನ್‌ಲಾಕ್ ಅನ್ನು ಒಳಗೊಂಡಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಸ್ಮಾರ್ಟ್‌ಫೋನ್ IP53 ಎಂದು ರೇಟ್ ಮಾಡಲಾಗಿದೆ.

ಫೋನಿನ ಬೆಲೆ ಎಷ್ಟು ಮತ್ತು ಲಭ್ಯತೆ

ಫೋನಿನ ಬೆಲೆ ಎಷ್ಟು ಮತ್ತು ಲಭ್ಯತೆ

ರೆಡ್ಮಿ ನೋಟ್‌ 11SE ಸ್ಮಾರ್ಟ್‌ಫೋನ್‌ ಅಧಿಕೃತ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಫೋನ್ 6GB RAM ಮತ್ತು 64GB ಸಾಮರ್ಥ್ಯದ ಸಿಂಗಲ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಇದರ ಬೆಲೆಯು 13,499 ರೂ. ಆಗಿದೆ. ಇನ್ನು ಇದೇ ಆಗಷ್ಟ್‌ 31 ರಂದು ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಹಾಗೂ ಸಂಸ್ಥೆಯ ವೆಬ್‌ಸೈಟ್ ಮೂಲಕ ಫಸ್ಟ್ ಸೇಲ್ ಪ್ರಾರಂಭಿಸಲಿದೆ. ಹಾಗೆಯೇ ಬ್ಲೂ, ಕಾಸ್ಮಿಕ್‌ ವೈಟ್‌, ಸ್ಪೇಸ್‌ ಬ್ಲ್ಯಾಕ್ ಮತ್ತು ಥಂಡರ್‌ ಪರ್ಪಲ್‌ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ.

Best Mobiles in India

English summary
Redmi Note 11se first sale today at 12 noon via Flipkart: Price and Offers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X