ರೆಡ್ಮಿ ನೋಟ್ 12 4G, ರೆಡ್ಮಿ 12C ಸ್ಮಾರ್ಟ್‌ಫೋನ್ ಲಾಂಚ್; ಬೆಲೆ ಎಷ್ಟು?
ಶಿಯೋಮಿ ಕಂಪೆನಿಯ ಹಾಗೂ ಇದರ ಉಪ ಬ್ರ್ಯಾಂಡ್‌ನ ಯಾವುದೇ ಫೋನ್‌ಗಳಿಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ರೆಡ್ಮಿ ಫೋನ್‌ಗಳು ವಿಶೇಷ ಫೀಚರ್ಸ್ ಹೊಂದಿದ್ದು, ಇದರೊಂದಿಗೆ ಬಜೆಟ್ ಬೆಲೆಯಲ್ಲೂ ಲಭ್ಯವಾಗುತ್ತಿರುವುದು ವಿಶೇಷ. ಇದರೊಂದಿಗೆ ಎರಡು ರೆಡ್ಮಿ ಫೋನ್‌ಗಳನ್ನು ಅನಾವರಣ ಮಾಡಲಾಗಿದೆ.
ಹೌದು, ಭಾರತದಲ್ಲಿ ರೆಡ್ಮಿ ನೋಟ್ 12 4G ಮತ್ತು ರೆಡ್ಮಿ 12C (Redmi Note 12 4G, Redmi 12C) ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದೆ. ಇವು 4G ಫೋನ್‌ಗಳಾಗಿದ್ದು, ರೆಡ್ಮಿ ನೋಟ್12 4G ಫೋನ್ ಹಿಲಿಯೋ G85SoC ಪ್ರೊಸೆಸರ್ ಬಲ ಹೊಂದಿದ್ದರೆ ರೆಡ್ಮಿ ನೋಟ್12 ಸ್ನಾಪ್‌ಡ್ರಾಗನ್ 685 SoC ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿದೆ. ಹಾಗಿದ್ರೆ, ಈ ಫೋನ್‌ಗಳ ಪ್ರಮುಖ ಫೀಚರ್ಸ್, ಬೆಲೆ ಎಷ್ಟು ಎನ್ನುವುದನ್ನು ತಿಳಿದುಕೊಳ್ಳಿ.

ರೆಡ್ಮಿ 12C, ರೆಡ್ಮಿ ನೋಟ್ 12 ಡಿಸ್‌ಪ್ಲೇ ವಿವರ: ರೆಡ್ಮಿ 12C ಫೋನ್ 6.71 ಇಂಚಿನ HD+ ಡಿಸ್‌ಪ್ಲೇ ಹೊಂದಿದ್ದು, 1600×720 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೆಯೇ 60Hz ರಿಫ್ರೆಶ್ ರೇಟ್ ನೀಡಲಿದ್ದು, ಜೊತೆಗೆ 20:9 ಆಕಾರ ಅನುಪಾತ ಹೊಂದಿದೆ. ಸೆಲ್ಫಿ ಉದ್ದೇಶಕ್ಕೆ ವಾಟರ್‌ಡ್ರಾಪ್ ನಾಚ್ ಶೈಲಿ ಪಡೆದುಕೊಂಡಿದೆ.
ಇನ್ನು ರೆಡ್ಮಿ ನೋಟ್ 12 ಫೋನ್ 6.67 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ಹೈ ರಿಫ್ರೆಶ್ ರೇಟ್ ನೀಡಲಿದೆ. ಹಾಗೆಯೇ 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿರುವ ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಲೇಯರ್ ನಿಂದ ರಕ್ಷಿಸಲ್ಪಟ್ಟಿದೆ. ಜೊತೆಗೆ ಸೆಲ್ಪೀ ಕ್ಯಾಮೆರಾ ಉದ್ದೇಶಕ್ಕೆ ಪಂಚ್-ಹೋಲ್ ಕಟೌಟ್ ರಚನೆ ಪಡೆದಿದೆ.
ರೆಡ್ಮಿ 12C, ರೆಡ್ಮಿ ನೋಟ್ 12 ಪ್ರೊಸೆಸರ್ ಯಾವುದು?: ರೆಡ್ಮಿ 12C ಫೋನ್ ಮೀಡಿಯಾ ಟೆಕ್ ಹಿಲಿಯೋ G85 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಿದರೆ ಮತ್ತೊಂದು ಫೋನ್ ಸ್ನಾಪ್‌ಡ್ರಾಗನ್ 685 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಎರಡೂ ಫೋನ್‌ಗಳು ಸಹ 6GB RAM ಹಾಗೂ 128GB ಇಂಟರ್‌ಸ್ಟೋರೇಜ್‌ನ ಬೇಸ್ ಮಾಡೆಲ್‌ನಲ್ಲಿ ಕಂಡುಬಂದಿವೆ.

ರೆಡ್ಮಿ 12C, ರೆಡ್ಮಿ ನೋಟ್12 ಕ್ಯಾಮೆರಾ ರಚನೆ: ರೆಡ್ಮಿ 12C ಫೋನ್ 50 ಮೆಗಾಪಿಕ್ಸೆಲ್ ರಿಯರ್ ಪ್ರಾಥಮಿಕ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಅದರಂತೆ ರೆಡ್ಮಿ ನೋಟ್12 ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಲೆನ್ಸ್ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಪಡೆದುಕೊಂಡಿದೆ.
ರೆಡ್ಮಿ 12C, ರೆಡ್ಮಿ ನೋಟ್12 ಬ್ಯಾಟರಿ ಸಾಮರ್ಥ್ಯ: ರೆಡ್ಮಿ 12C 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಇದು 10W ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇದಕ್ಕಾಗಿ ಈ ಫೋನ್‌ನಲ್ಲಿ ಮೈಕ್ರೋ ಯುಎಸ್‌ಬಿ ಪೋರ್ಟ್ ಆಯ್ಕೆ ನೀಡಲಾಗಿದೆ. ಇದರೊಂದಿಗೆ ರೆಡ್ಮಿ ನೋಟ್12 ಫೋನ್ ಸಹ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.
ರೆಡ್ಮಿ 12C, ರೆಡ್ಮಿ ನೋಟ್12 ಬೆಲೆ ಹಾಗೂ ಲಭ್ಯತೆ : ಭಾರತದಲ್ಲಿ ರೆಡ್ಮಿ ನೋಟ್ 12 4G ಯ 6GB/64GB ವೇರಿಯಂಟ್‌ಗೆ 14,999ರೂ. ನಿಗದಿ ಮಾಡಲಾಗಿದೆ. ಹಾಗೆಯೇ 6GB/128GB ವೇರಿಯಂಟ್‌ಗೆ 16,999 ರೂ. ಬೆಲೆ ನಿಗದಿ ಮಾಡಲಾಗಿದ್ದು, ಕೊಡುಗೆ ದರವಾಗಿ ಈ ಎರಡೂ ವೇರಿಯಂಟ್ ಫೋನ್‌ಗಳಿಗೂ 1,000 ರೂ. ಗಳ ಡಿಸ್ಕೌಂಟ್ ಇದೆ. ಈ ಫೋನ್ ಸನ್‌ರೈಸ್ ಗೋಲ್ಡ್, ಐಸ್ ಬ್ಲೂ ಮತ್ತು ಲೂನಾರ್ ಕಪ್ಪು ಬಣ್ಣಗಳಲ್ಲಿ ಕಂಡುಬಂದಿದೆ.
ಇದರೊಂದಿಗೆ ರೆಡ್ಮಿ 12C ಯ 4GB + 64GB ವೇರಿಯಂಟ್‌ಗೆ 8,999 ರೂ. ಗಳು ಹಾಗೂ 6GB + 128GB ವೇರಿಯಂಟ್‌ಗೆ 10,999 ರೂ. ಬೆಲೆ ನಿಗದಿ ಮಾಡಲಾಗಿದೆ. ಆದರೆ ಕೊಡುಗೆ ಹಿನ್ನೆಲೆ ಈ ಈ ಫೋನ್ ಮೇಲೆ 500 ರಿಯಾಯಿತಿ ಲಭ್ಯವಾಗಲಿದೆ. ಈ ಫೋನ್ ಮ್ಯಾಟ್ ಬ್ಲಾಕ್, ಮಿಂಟ್ ಗ್ರೀನ್, ರಾಯಲ್ ಬ್ಲೂ ಮತ್ತು ಲ್ಯಾವೆಂಡರ್ ಪರ್ಪಲ್ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.

ಈ ಎರಡೂ ಫೋನ್‌ಗಳನ್ನು ಏಪ್ರಿಲ್ 6 ರಂದು ಮಧ್ಯಾಹ್ನ 12 ರಿಂದ ಫ್ಲಿಪ್‌ಕಾರ್ಟ್, ಅಮೆಜಾನ್, ಮಿ ವೆಬ್‌ಸೈಟ್, ಮಿ ಹೋಮ್ ಸ್ಟೋರ್‌ಗಳು ಮತ್ತು ರಿಟೇಲ್ ಔಟ್‌ಲೆಟ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಹಾಗೆಯೇ ಖರೀದಿಯ ವೇಳೆ ಕೆಲವು ಬ್ಯಾಂಕ್‌ಗಳ ಕಾರ್ಡ್‌ಗಳಿಗೆ ಹೆಚ್ಚುವರಿ ರಿಯಾಯಿತಿ ಸಹ ಲಭ್ಯ.


Click it and Unblock the Notifications








