Just In
- 10 hrs ago
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- 13 hrs ago
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- 13 hrs ago
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- 15 hrs ago
Oppo Reno 8T 5G : ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
Don't Miss
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- News
ಫೆಬ್ರವರಿ 4ರಂದು 313 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂದು ರೆಡ್ಮಿ ನೋಟ್ 12 5G ಫಸ್ಟ್ ಸೇಲ್: ಗ್ರಾಹಕರಿಗೆ ಸಖತ್ ಆಫರ್ ಇದೆ!
ಶಿಯೋಮಿ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ ಡಿಸೈನ್ ಹಾಗೂ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್ ಫಸ್ಟ್ ಸೇಲ್ ಇಂದು ಮಧ್ಯಾಹ್ನ 12 ರಿಂದ ಇ-ಕಾಮರ್ಸ್ ತಾಣ ಅಮೆಜಾನ್ ಮತ್ತು ಅಧಿಕೃತ Mi.com ತಾಣಗಳಲ್ಲಿ ಮಾರಾಟ ಆರಂಭವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಆರಂಭಿಕ 4GB RAM + 128GB ಸ್ಟೋರೇಜ್‌ನ ವೇರಿಯಂಟ್ ಬೆಲೆಯು 17,999ರೂ.ಗಳು ಆಗಿದೆ.

ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ ಮೊದಲ ಮಾರಾಟ ಇಂದು (ಜ. 11) ನಡೆಯಲಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, 48 ಮೆಗಾ ಪಿಕ್ಸಲ್ ಕ್ಯಾಮೆರಾ ಸೆನ್ಸಾರ್ ಒಳಗೊಂಡಿದೆ. ಹಾಗೂ ಫಾಸ್ಟ್ ಚಾರ್ಜಿಂಗ್ ಬೆಂಬಲಿತ 5000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಹಾಗೆಯೇ ಎರಡು ವೇರಿಯಂಟ್ ಆಯ್ಕೆ ಹೊಂದಿದ್ದು, ಅವುಗಳು ಕ್ರಮವಾಗಿ 4GB RAM + 128GB ಮತ್ತು 6GB RAM + 128GB ಆಗಿವೆ.
ಆಫರ್ ಏನಿದೆ?
ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ ಇಂದು ಖರೀದಿಗೆ ಲಭ್ಯ ಜೊತೆಗೆ ಗ್ರಾಹಕರಿಗೆ ಕೊಡುಗೆಯು ಸಿಗಲಿದೆ. ಗ್ರಾಹಕರು ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ವಹಿವಾಟುಗಳ ಮೂಲಕ ಪ್ರತಿ ಖರೀದಿಗೆ ಫ್ಲಾಟ್ 1,500 ರೂ. ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದಾಗಿದೆ. ಹಾಗೆಯೇ ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಕೆದಾರರು ಮಿ ಸ್ಟೋರ್ ಮೂಲಕ ಖರೀದಿಸಿದರೆ 1,000ರೂ. ರಿಯಾಯಿತಿಯನ್ನು ಪಡೆಯಬಹುದು. ಹಾಗಾದರೇ ರೆಡ್ಮಿ ನೋಟ್ 12 5G ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2,400 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಡಿಸ್‌ಪ್ಲೇ 1200nits ಬ್ರೈಟ್ನೆಸ್ ಹೊಂದಿದ್ದು, HDR10+ ಬೆಂಬಲವನ್ನು ಪಡೆದಿದೆ.
ಪ್ರೊಸೆಸರ್ ಪವರ್ ಯಾವುದು
ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 4 Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB + 128GB, 4GB RAM + 128GB ಮತ್ತು 6GB RAM + 128GB ಇಂಟರ್ ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 12 ಓಎಸ್ ಆಧಾರಿತ MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ.

ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್
ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಬ್ಯಾಟರಿ ಮತ್ತು ಇತರೆ ಸೌಲಭ್ಯ
ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಆಡಿಯೊಗಾಗಿ, ಹೈ-ರೆಸ್ ಆಡಿಯೊ ಬೆಂಬಲದೊಂದಿಗೆ ಫೋನ್ ಒಂದೇ ಸ್ಪೀಕರ್ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಫೋನ್ ವೈಫೈ ಮತ್ತು ಬ್ಲೂಟೂತ್ v5.1 ಮತ್ತು USB ಟೈಪ್-ಸಿ ಸೇರಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470