Redmi phone: ರೆಡ್ಮಿಯ ಈ ಫೋನ್‌ಗೆ ಜಾಗತಿಕವಾಗಿ ಭಾರೀ ಬೇಡಿಕೆ... 1 ಮಿಲಿಯನ್ ಸಾಗಣೆ!
ರೆಡ್ಮಿ ಫೋನ್‌ಗಳು (Redmi phone) ಸಾಮಾನ್ಯವಾಗಿ ಹೆಚ್ಚಿನ ಬೇಡಿಕೆ ಹೊಂದಿರುತ್ತವೆ. ಆದರೆ ಈಗ ಮಾತ್ರ ಕಂಪೆನಿಯೂ ಸಹ ನಿರೀಕ್ಷೆ ಮಾಡಿರದ ರೀತಿಯಲ್ಲಿ ರೆಡ್ಮಿಯ ಈ ಫೋನ್‌ಗಳು ಸೇಲ್ ಆಗಿವೆ. ಈ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಈ ಫೋನ್‌ಗಳು ಕಿಂಗ್ ಆಗಲಿವೆ.
ಹೌದು, ರೆಡ್ಮಿ ಫೋನ್‌ಗಳ ವಿಭಾಗದಲ್ಲಿ ಸಾಕಷ್ಟು ಸುಧಾರಿತ ಫೀಚರ್ಸ್ ಆಯ್ಕೆ ಸಾಕಷ್ಟು ಫೋನ್‌ಗಳಿವೆ ಆದರೂ ಸಹ ಮಾರುಕಟ್ಟೆಯಲ್ಲಿ ರೆಡ್ಮಿ ನೋಟ್ 12 5G (Redmi Note 12 5G) ಫೋನ್ ಮಾತ್ರ ಭರ್ಜರಿಯಾಗಿ ರೆಡ್ಮಿಗೆ ಲಾಭ ತಂದುಕೊಟ್ಟಿದೆಯಂತೆ. ಈ ಸಂಬಂಧ ಸಂಸ್ಥೆಯೇ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಹಾಗಿದ್ರೆ, ಏನಿದು ಹೊಸ ವಿಚಾರ?, ಅಂತಹುದ್ದೇನಿದೆ ಈ ಫೋನ್‌ನಲ್ಲಿ ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

ರೆಡ್ಮಿ ನೋಟ್ 12 5G: ಈಗಾಗಲೇ ಮೊದಲೇ ತಿಳಿಸಿದಂತೆ ರೆಡ್ಮಿ ನೋಟ್ ಸ್ಮಾರ್ಟ್‌ಫೋನ್‌ಗಳು (Redmi Note smartphones) ಬಹಳ ಜನಪ್ರಿಯವಾಗಿವೆ. ಸೆಪ್ಟೆಂಬರ್ 2023 ರ ಹೊತ್ತಿಗೆ ಪ್ರಪಂಚದಾದ್ಯಂತ 338 ಮಿಲಿಯನ್ ರೆಡ್ಮಿ ನೋಟ್ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ ಎಂಬ ಆಂಶ ಈಗ ಬೆಳಕಿಗೆ ಬಂದಿದೆ. ಈ ವರ್ಷ ತುಲನಾತ್ಮಕವಾಗಿ ಕಡಿಮೆ ಬೇಡಿಕೆಯ ವರದಿಗಳ ಹೊರತಾಗಿಯೂ, ಈ ನೋಟ್ ಸರಣಿಯ ಸ್ಮಾರ್ಟ್‌ಫೋನ್ ಮಾತ್ರ ಭಾರೀ ಬೇಡಿಕೆ ಕಂಡಿವೆ.
ಕಂಪನಿಯ ಪ್ರಕಾರ, ರೆಡ್ಮಿ ನೋಟ್ 12 5G 2023 ರಲ್ಲಿ ಒಂದು ಮಿಲಿಯನ್ ಶಿಪ್‌ಮೆಂಟ್‌ಗಳನ್ನು ದಾಟಿದ ವೇಗದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆಗಿದೆಯಂತೆ. ಈ ಮೂಲಕ ಇತರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಹಿಂದಿಕ್ಕಿದೆ. ಈ ಸಂಬಂಧ ರೆಡ್ಮಿ ಟ್ವಿಟ್ಟರ್ ಅಥವಾ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ ಉಲ್ಲೇಖ ಮಾಡಿದಂತೆ, #RedmiNote12 5G 2023 ರಲ್ಲಿ 1 ಮಿಲಿಯನ್ ಸಾಗಣೆಯನ್ನು ಮೀರಿದ ವೇಗದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆಗಿ ಜ್ವಲಂತ ದಾಖಲೆಯನ್ನು ಮಾಡಿದೆ ಎಂದು ಶೇರ್ ಮಾಡಲು ನಾವು ರೋಮಾಂಚನಗೊಂಡಿದ್ದೇವೆ ಎಂದು ಕಂಪನಿ ಹೇಳಿದೆ.
ಇನ್ನು ರೆಡ್‌ಮಿ ಸ್ಮಾರ್ಟ್‌ಫೋನ್‌ಗಳು ಯಾವಾಗಲೂ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ನಡುವೆ ಮುಂಚೂಣಿಯಲ್ಲಿರುವ ರೆಡ್ಮಿ ನೋಟ್ 12 5G ಫೋನ್ $250 (20,792ರೂ.ಗಳು) ಕ್ಕಿಂತ ಕಡಿಮೆಯಿರುವ ಉತ್ತಮವಾದ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ ಅನ್ನು ಈಗಾಗಲೇ ಸಾಕಷ್ಟು ಜನರು ಭಾರತದಲ್ಲಿಯೂ ಬಳಕೆ ಮಾಡುತ್ತಿದ್ದು, ಉತ್ತಮ ಕಾರ್ಯಕ್ಷಮತೆಗೆ ಮಾರುಹೋಗಿದ್ದಾರೆ.
ಈ ಫೋನ್ ಪ್ರಭಾವಶಾಲಿ 120Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಹೊಸ ಚಿಪ್‌ಸೆಟ್ ಮತ್ತು 5G ಸಂಪರ್ಕದಿಂದ ಗ್ರಾಹಕರು ಪ್ರಭಾವಿತರಾಗಿದ್ದಾರೆ. ಅದೆಲ್ಲಕ್ಕಿಂತ ಮಿಗಿಲಾಗಿ ಈ ಫೋನ್ ಅತ್ಯುತ್ತಮವಾದ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ. ಜೊತೆಗೆ ಕ್ಯಾಮೆರಾ ಫೀಚರ್ಸ್‌ನಲ್ಲಂತೂ ಈ ಬೆಲೆಗೆ ಉತ್ತಮ ಆಯ್ಕೆ ಎಂದೇ ಹೇಳಬಹುದು.
ನಿಖರವಾಗಿ ಮಾಹಿತಿ ನೀಡುವುದಾದರೆ ರೆಡ್ಮಿ ನೋಟ್ 12 5G ಫೋನ್ 6.67 ಇಂಚಿನ ಅಮೋಲೆಡ್ FHD+ ಡಿಸ್‌ಪ್ಲೇ ಹೊಂದಿದೆ. ಜೊತೆಗೆ 120Hz ರಿಫ್ರೆಶ್ ರೇಟ್, 1200 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಆಯ್ಕೆ ಪಡೆದಿಕೊಂಡಿದ್ದು, ಸ್ನಾಪ್‌ಡ್ರಾಗನ್ 4 ಜನ್ 1 ಚಿಪ್‌ನಿಂದ (Snapdragon 4 Gen 1 chipset) ಕಾರ್ಯನಿರ್ವಹಿಸಲಿದೆ.

ಹಾಗೂ 5,000mAhಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದರಲ್ಲಿದ್ದು, ಟ್ರಿಪಲ್ ಕ್ಯಾಮೆರಾ ಮೂಲಕ ಕಾಣಿಸಿಕೊಂಡಿದೆ. ಅಂದರೆ ಇದರಲ್ಲಿ 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಸೆನ್ಸರ್ ಆಯ್ಕೆ ಪಡೆಯುವ ಮೂಲಕ ಕ್ಯಾಮೆರಾ ಪ್ರಿಯರ ನೆಚ್ಚಿನ ಸ್ಮಾರ್ಟ್‌ಫೋನ್ ಆಗಿಯೂ ಗುರುತಿಸಿಕೊಂಡಿದೆ.


Click it and Unblock the Notifications








