Home
ಸುದ್ದಿಜಾಲ

Redmi Note 12 : ರೆಡ್ಮಿ ನೋಟ್‌ 12 ಫೋನ್‌ ಬೆಲೆ ಇಳಿಕೆ: ಖರೀದಿಗೆ ಅತ್ಯುತ್ತಮ ಸಮಯ!

ಶಿಯೋಮಿ ಕಂಪೆನಿಯ ಉಪ ಬ್ರ್ಯಾಂಡ್‌ ಆಗಿರುವ ರೆಡ್ಮಿ ಫೋನ್‌ಗಳು ಇಂದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನ ಪಡೆದುಕೊಳ್ಳುತ್ತಿವೆ. ಅದರಲ್ಲೂ ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್‌ ಆಯ್ಕೆ ನೀಡಲಾಗುತ್ತಿದ್ದು, ಇದೀಗ ಕಂಪೆನಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ. ಅಂದರೆ ರೆಡ್ಮಿ ನೋಟ್‌ 12 ಬೆಲೆ ಪರಿಷ್ಕರಣೆ ಆಗಲಿದ್ದು, ಇನ್ನಷ್ಟು ಕೈಗೆಟಕುವ ದರದಲ್ಲಿ ಲಭ್ಯ ಆಗಲಿದೆ.

ಹೌದು, ಶಿಯೋಮಿ (Xiaomi) ಮುಂದಿನ ತಿಂಗಳು ಭಾರತದಲ್ಲಿ ತನ್ನ ಹೊಸ ರೆಡ್ಮಿ 12 (Redmi 12) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲು ಸಿದ್ಧತೆ ನಡೆಸಿದೆ. ಆದರೆ, ಲಾಂಚ್‌ಗೂ ಮುನ್ನವೇ ದೇಶದಲ್ಲಿ ರೆಡ್‌ಮಿ ನೋಟ್ 12 ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಕಡಿತಗೊಳಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಅಂದರೆ ಈ ವರ್ಷದ ಆರಂಭದಲ್ಲಿ ರೆಡ್ಮಿ ನೋಟ್ 12 ಮೂರು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಫೋನ್‌ಗಳೆಲ್ಲವೂ ಬೆಲೆ ಕಡಿತವನ್ನು ಪಡೆಯಲಿವೆ. ಹಾಗಿದ್ರೆ, ಈ ಫೋನ್‌ನ ಹೊಸ ಬೆಲೆ ಎಷ್ಟು?, ಫೀಚರ್ಸ್ ಏನು? ಬನ್ನಿ ತಿಳಿಯೋಣ.

ರೆಡ್ಮಿ ನೋಟ್‌ 12 ಫೋನ್‌ ಬೆಲೆ ಇಳಿಕೆ: ಖರೀದಿಗೆ ಅತ್ಯುತ್ತಮ ಸಮಯ!

ದರ ಪರಿಷ್ಕರಣೆ: ಶಿಯೋಮಿ ರೆಡ್ಮಿ ನೋಟ್‌ 12 ಅನ್ನು ಮೂರು ರೂಪಾಂತರಗಳಲ್ಲಿ ಲಾಂಚ್‌ ಮಾಡಲಾಗಿತ್ತು. ಅದರಲ್ಲಿ ಪ್ರಮುಖವಾಗಿ 4GB+128GB, 6GB+128GB ಮತ್ತು 8GB+256GB ಫೋನ್‌ಗಳು ಇದ್ದವು. ಈ ಫೋನ್‌ಗಳು ಕ್ರಮವಾಗಿ 17,999ರೂ, 19,999ರೂ ಮತ್ತು 21,999ರೂ,ಗಳ ಬೆಲೆ ಪಡೆದುಕೊಂಡಿದ್ದವು. ಆದರೆ, ಈ ಮೂರು ರೂಪಾಂತರಗಳು ಈಗ 1,000 ರೂಪಾಯಿಗಳ ಬೆಲೆ ಕಡಿತವನ್ನು ಪಡೆದಿವೆ.

ಇನ್ಮುಂದೆ ಗ್ರಾಹಕರು 4GB ಆವೃತ್ತಿಯನ್ನು 16,999ರೂ.ಗಳಿಗೆ, 6GB ಮತ್ತು 8GB ರೂಪಾಂತರಗಳನ್ನು ಕ್ರಮವಾಗಿ 18,999 ರೂ.ಗಳಿಗೆ ಮತ್ತು 20,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್‌ಗಳು ಫ್ರಾಸ್ಟೆಡ್ ಗ್ರೀನ್, ಮ್ಯಾಟ್ ಬ್ಲ್ಯಾಕ್ ಮತ್ತು ಮಿಸ್ಟಿಕ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಕಾಣಿಸಿಕೊಂಡಿವೆ. ಇದರೊಂದಿಗೆ ಗ್ರಾಹಕರು ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ಗಳನ್ನು ಖರೀದಿ ಮಾಡಲು ಬ್ಯಾಂಕ್‌ ಕಾರ್ಡ್ ಬಳಕೆ ಮಾಡಿಕೊಳ್ಳಬಹುದು.

ಬ್ಯಾಂಕ್‌ ಆಫರ್‌ ಏನು?: ಅಧಿಕೃತ ಬೆಲೆ ಕಡಿತದ ಜೊತೆಗೆ ಈ ರೆಡ್ಮಿ ನೋಟ್‌ 12 ಸ್ಮಾರ್ಟ್‌ಫೋನ್‌ ಅನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಬೇಕು ಎಂದರೆ ಗ್ರಾಹಕರು ICICI ಕ್ರೆಡಿಟ್ ಕಾರ್ಡ್ ಮತ್ತು HDFC ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಿಕೊಳ್ಳಬಹುದು. ಇದರಲ್ಲಿ 2,000 ರೂಪಾಯಿಗಳ ತ್ವರಿತ ರಿಯಾಯಿತಿ ಸಿಗಲಿದೆ. ಇಷ್ಟು ಮಾತ್ರವಲ್ಲದೆ ರೆಡ್ಮಿ ಮತ್ತು ಶಿಯೋಮಿ ಫೋನ್‌ಗಳನ್ನು ಈ ವೇಳೆ ವಿನಿಮಯ ಮಾಡಿಕೊಂಡರೆ 2,000 ರೂಪಾಯಿಗಳ ವಿನಿಮಯ ಬೋನಸ್ ಸಿಗಲಿದೆ.

ರೆಡ್ಮಿ ನೋಟ್‌ 12 ಫೋನ್‌ ಬೆಲೆ ಇಳಿಕೆ: ಖರೀದಿಗೆ ಅತ್ಯುತ್ತಮ ಸಮಯ!

ರೆಡ್ಮಿ ನೋಟ್ 12 ಫೀಚರ್ಸ್: ಈ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಪ್ಯಾನೆಲ್ ಅನ್ನು ಹೊಂದಿದ್ದು, 1080x2400 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿಕೊಂಡಿದೆ. ಇದರೊಂದಿಗೆ 120Hz ರಿಫ್ರೆಶ್ ರೆಟ್‌ ಪಡೆದುಕೊಂಡಿದೆ. ಜೊತೆಗೆ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 4 ಜನ್ 1 ಪ್ರೊಸೆಸರ್‌ ಬಲ ಪಡೆದಿದ್ದು, 8GB RAM ಹಾಗೂ 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ.ಇಷ್ಟು ಮಾತ್ರವಲ್ಲದೆ ಎಸ್‌ಡಿ ಕಾರ್ಡ್‌ ಮೂಲಕ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಬಹುದು.

ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, 48 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಶೂಟರ್ ಅನ್ನು ಹೊಂದಿದೆ. ಈ ಕ್ಯಾಮೆರಾಗಳು ಪ್ರತಿ ಕಂಟೆಂಟ್‌ ಅನ್ನೂ ಸಹ ಸ್ವಷ್ಟವಾಗಿ ಸೆರೆಹಿಡಿಯುತ್ತವೆ. ಉಳಿದಂತೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇದು 33W ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.

Best Mobiles in India

English summary
Xiaomi is all set to unveil its new Redmi 12 smartphone in India next month. However, it is known that the price of Redmi Note 12 smartphone will be cut in the country even before the launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+