Home
ಸುದ್ದಿಜಾಲ

ರೆಡ್ಮಿಯ ಈ ಜನಪ್ರಿಯ ಫೋನ್‌ ಬೆಲೆಯಲ್ಲಿ ಸಖತ್‌ ಇಳಿಕೆ!..ಗ್ರಾಹಕರಿಗೆ ಉಳಿತಾಯ ಖಚಿತ!

ಶಿಯೋಮಿ ಸಂಸ್ಥೆಯ ರೆಡ್ಮಿ ನೋಟ್‌ ಸರಣಿಯ ಫೋನ್‌ಗಳು ಹೆಚ್ಚು ಗಮನ ಸೆಳೆದಿದ್ದು, ಆಕರ್ಷಕ ಫೀಚರ್ಸ್‌ ಪಡೆದಿವೆ. ಸಂಸ್ಥೆಯ ಶಿಯೋಮಿ ರೆಡ್ಮಿ ನೋಟ್‌ 12 ಪ್ರೊ+ 5G ಫೋನ್‌ ಪ್ರೀಮಿಯಂ ಮಾದರಿಯ ಫೀಚರ್ಸ್‌ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಈ ಫೋನ್‌ ಇದೀಗ ಫ್ಲಿಪ್‌ಕಾರ್ಟ್‌ ಇಯರ್‌ ಎಂಡ್ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ.

ಹೌದು, ಇ ಕಾಮರ್ಸ್‌ ದೈತ್ಯ ತಾಣ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ 'ಇಯರ್‌ ಎಂಡ್ ಸೇಲ್‌' ನಲ್ಲಿ ಶಿಯೋಮಿ ರೆಡ್ಮಿ ನೋಟ್‌ 12 ಪ್ರೊ+ 5G ಫೋನ್‌ ಶೇ. 17% ರಷ್ಟು ನೇರ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಆಫರ್‌ನಲ್ಲಿ ಈ ಫೋನಿನ 8 GB RAM + 256 GB ಸ್ಟೋರೇಜ್‌ ವೇರಿಯಂಟ್‌ 27,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಫ್ಲಿಪ್‌ಕಾರ್ಟ್‌ ಇಯರ್‌ ಎಂಡ್ ಸೇಲ್‌ ಈಗ ಲೈವ್ ಇದೆ.

ರೆಡ್ಮಿಯ ಈ ಜನಪ್ರಿಯ ಫೋನ್‌ ಬೆಲೆಯಲ್ಲಿ ಸಖತ್‌ ಇಳಿಕೆ!..ಗ್ರಾಹಕರಿಗೆ ಉಳಿತಾಯ ಖಚಿತ

ಶಿಯೋಮಿಯ ರೆಡ್ಮಿ ನೋಟ್‌ 12 ಪ್ರೊ+ 5G ಮೊಬೈಲ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 1080SoC ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಇದರ ಜೊತೆಗೆ 4,980mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 120W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ. ಹಾಗಾದರೇ ರೆಡ್ಮಿ ನೋಟ್‌ 12 ಪ್ರೊ+ 5G ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್‌ ಹಾಗೂ ಪ್ರೊಸೆಸರ್‌ ಮಾಹಿತಿ

ಶಿಯೋಮಿ ರೆಡ್ಮಿ ನೋಟ್‌ 12 ಪ್ರೊ+ 5G ಮೊಬೈಲ್‌ AMOLED ಪ್ಯಾನೆಲ್ ಅನ್ನು ಪಡೆದಿದ್ದು, 6.67 ಇಂಚಿನ FHD+ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದು ಡಾಲ್ಬಿ ವಿಷನ್ ಮತ್ತು 120Hz ರಿಫ್ರೆಶ್ ರೇಟ್‌ಗೆ ಬೆಂಬಲದೊಂದಿಗೆ ಅತ್ಯುತ್ತಮ ಪ್ರಖರತೆಯನ್ನು ಪಡೆದಿದೆ. ಹಾಗೆಯೇ ಇದು ಮೊಬೈಲ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 1080SoC ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ಮಾಡಲಿದೆ.

ರೆಡ್ಮಿಯ ಈ ಜನಪ್ರಿಯ ಫೋನ್‌ ಬೆಲೆಯಲ್ಲಿ ಸಖತ್‌ ಇಳಿಕೆ!..ಗ್ರಾಹಕರಿಗೆ ಉಳಿತಾಯ ಖಚಿತ

ಕ್ಯಾಮೆರಾ ಸೆನ್ಸಾರ್ ಸೌಲಭ್ಯ

ಶಿಯೋಮಿ ರೆಡ್ಮಿ ನೋಟ್‌ 12 ಪ್ರೊ+ 5G ಫೋನ್‌ ಅತ್ಯುತ್ತಮ ಆಲ್‌ರೌಂಡರ್ ಮೊಬೈಲ್‌ ಆಗಿ ಕಾಣಿಸುತ್ತದೆ. ಈ ಫೋನ್‌ ಮೂರು ಕ್ಯಾಮೆರಾ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 200 ಮೆಗಾ ಪಿಕ್ಸಲ್‌ ಸಾಮರ್ಥ್ಯದಲ್ಲಿ ಇದೆ. ಹಗಲು ಬೆಳಕಿನಲ್ಲಿ ಅತ್ಯುತ್ತಮ ಫೋಟೊಗಳನ್ನು ಸೆರೆಹಿಡಿಯುವ ಸೌಲಭ್ಯ ಪಡೆದಿದ್ದು, ಇದರೊಂದಿಗೆ ಮಂದ ಬೆಳಕಿನ ಸಂದರ್ಭಗಳಲ್ಲಿಯೂ ಉತ್ತಮ ಫೋಟೋ ಸೆರೆಹಿಡಿಯಲಿದೆ.

ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ

ಶಿಯೋಮಿ ರೆಡ್ಮಿ ನೋಟ್‌ 12 ಪ್ರೊ+ 5G ಫೋನ್‌ 4,980mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 120W ಫಾಸ್ಟ್‌ ಚಾರ್ಜರ್ ಅನ್ನು ಪಡೆದುಕೊಂಡಿದೆ. ಈ ಫೋನ್‌ ಸೂಪರ್ ಫಾಸ್ಟ್ ಮತ್ತು ಸುಮಾರು 10 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಬ್ಯಾಟರಿ ಅನ್ನು ಭರ್ತಿ ಮಾಡಲು ಅವಕಾಶ ಪಡೆದಿದೆ.

ರೆಡ್ಮಿಯ ಈ ಜನಪ್ರಿಯ ಫೋನ್‌ ಬೆಲೆಯಲ್ಲಿ ಸಖತ್‌ ಇಳಿಕೆ!..ಗ್ರಾಹಕರಿಗೆ ಉಳಿತಾಯ ಖಚಿತ

ಮೆಮೊರಿ ಹಾಗೂ ಕಲರ್‌ ಆಯ್ಕೆ

ಶಿಯೋಮಿ ಕಂಪನಿಯ ರೆಡ್ಮಿ ನೋಟ್‌ 12 ಪ್ರೊ+ 5G ಮೊಬೈಲ್‌ ಎರಡು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಅವು ಕ್ರಮವಾಗಿ 8 GB + 256 GB ಸ್ಟೋರೇಜ್‌ ಮತ್ತು 12 GB + 256 GB ಸ್ಟೋರೇಜ್ ಆಗಿವೆ. ಅಂದಹಾಗೆ ಈ ಫೋನ್‌ ಬ್ಲ್ಯಾಕ್‌, ಬ್ಲೂ ಹಾಗೂ ವೈಟ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಗ್ರಾಹಕರು ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿ ಮಾಡಬಹುದು.

Best Mobiles in India

English summary
REDMI Note 12 Pro+ 5G price down on flipkart website. offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+