Home
ಸುದ್ದಿಜಾಲ

ರೆಡ್ಮಿಯ ಈ 200ಎಂಪಿ ಕ್ಯಾಮೆರಾ ಫೋನಿನ ಡಿಸ್ಕೌಂಟ್‌ ಬೆಲೆ ತಿಳಿದ್ರೆ, ನೀವು ವಾವ್‌ ಅಂತೀರಾ!

ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ ನಲ್ಲಿ ಶಿಯೋಮಿ ಸಂಸ್ಥೆಯ ಫೋನ್‌ಗಳು ಕೂಡಾ ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಶಿಯೋಮಿ ರೆಡ್ಮಿ ನೋಟ್‌ 12 ಪ್ರೊ+ 5G ಮೊಬೈಲ್‌ ಈ ಮಾರಾಟ ಮೇಳದಲ್ಲಿ ಖರೀದಿದಾರರು ಹುಬ್ಬೇರಿಸುವಂತಹ ರಿಯಾಯಿತಿ ಪಡೆದಿದ್ದು, ಖುಷಿ ಸಂಗತಿ ಎನಿಸಿದೆ.

ಹೌದು, ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ ನಲ್ಲಿ ಶಿಯೋಮಿ ರೆಡ್ಮಿ ನೋಟ್‌ 12 ಪ್ರೊ+ 5G ಮೊಬೈಲ್‌ ಶೇ. 17% ರಷ್ಟು ರಿಯಾಯಿತಿ ಹೊಂದಿದ್ದು, 8 GB RAM + 256 GB ವೇರಿಯಂಟ್‌ ಫೋನ್‌ 27,999 ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್ ಆಫರ್‌, ಎಕ್ಸ್‌ಚೇಂಜ್ ಕೊಡುಗೆಗಳು ಕೂಡಾ ಗ್ರಾಹಕರಿಗೆ ಸಿಗಲಿವೆ. ಈ ನಿಟ್ಟಿನಲ್ಲಿ ಮತ್ತಷ್ಟು ಡಿಸ್ಕೌಂಟ್‌ ದರದಲ್ಲಿ ಮೊಬೈಲ್‌ ಖರೀದಿ ಮಾಡಬಹುದು.

ರೆಡ್ಮಿಯ 200ಎಂಪಿ ಕ್ಯಾಮೆರಾ ಫೋನಿನ ಡಿಸ್ಕೌಂಟ್‌ ಬೆಲೆ ತಿಳಿದ್ರೆ, ವಾವ್‌ ಅಂತೀರಾ

ಅಂದಹಾಗೆ ರೆಡ್ಮಿ ನೋಟ್‌ 12 ಪ್ರೊ+ 5G ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 1080SoC ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಜೊತೆಗೆ 4,980mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಸಹ ಇದೆ. ಹಾಗಾದರೇ ಇನ್ನುಳಿದಂತೆ ರೆಡ್ಮಿ ನೋಟ್‌ 12 ಪ್ರೊ+ 5G ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸದ ಮಾಹಿತಿ

ಶಿಯೋಮಿ ರೆಡ್ಮಿ ನೋಟ್‌ 12 ಪ್ರೊ+ 5G ಫೋನ್‌ AMOLED ಪ್ಯಾನೆಲ್ ಅನ್ನು ಹೊಂದಿದ್ದು, 6.67 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ. ಇದು ಡಾಲ್ಬಿ ವಿಷನ್ ಮತ್ತು 120Hz ರಿಫ್ರೆಶ್ ರೇಟ್‌ಗೆ ಬೆಂಬಲದೊಂದಿಗೆ ಅತ್ಯುತ್ತಮ ಪ್ರಖರತೆಯನ್ನು ಹೊಂದಿದೆ.

ಕ್ಯಾಮೆರಾ ಸೆನ್ಸಾರ್ ರಚನೆಯ ಮಾಹಿತಿ

ಶಿಯೋಮಿ ರೆಡ್ಮಿ ನೋಟ್‌ 12 ಪ್ರೊ+ 5G ಫೋನ್‌ (Redmi Note 12 Pro+) ಅತ್ಯುತ್ತಮ ಆಲ್‌ರೌಂಡರ್ ಫೋನ್‌ ತರಹ ಇದೆ. ಈ ಮೊಬೈಲ್‌ ತ್ರಿವಳಿ ಕ್ಯಾಮೆರಾ ಪಡೆದಿದ್ದು, ಮುಖ್ಯ ಕ್ಯಾಮೆರಾವು 200 ಮೆಗಾ ಪಿಕ್ಸಲ್‌ ನಲ್ಲಿದೆ. ಹಗಲು ಬೆಳಕಿನಲ್ಲಿ ಅತ್ಯುತ್ತಮ ಫೋಟೊಗಳನ್ನು ಸೆರೆಹಿಡಿಯುವ ಸೌಲಭ್ಯ ಇದ್ದು, ಹಾಗೆಯೇ ಮಂದ ಬೆಳಕಿನ ಪರಿಸ್ಥಿತಿಗಳಲ್ಲಿ ಉತ್ತಮ ಫೋಟೋ ಸೆರೆಹಿಡಿಯಲಿದೆ.

ಬಿಗ್ ಬ್ಯಾಟರಿ ಹಾಗೂ ಫಾಸ್ಟ್‌ ಚಾರ್ಜರ್

ಶಿಯೋಮಿ ರೆಡ್ಮಿ ನೋಟ್‌ 12 ಪ್ರೊ+ 5G ಫೋನ್‌ 4,980mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 120W ವೇಗದ ಚಾರ್ಜರ್ ಅನ್ನು ಪಡೆದುಕೊಂಡಿದೆ. ಇದು ಸೂಪರ್ ಫಾಸ್ಟ್ ಮತ್ತು ಸುಮಾರು 10 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಬ್ಯಾಟರಿಯನ್ನು ಟಾಪ್ ಅಪ್ ಮಾಡಲು ಅವಕಾಶ ಇದೆ.

ಮೆಮೊರಿ ಹಾಗೂ ಲಭ್ಯತೆ

ಶಿಯೋಮಿ ರೆಡ್ಮಿ ನೋಟ್‌ 12 ಪ್ರೊ+ 5G ಮೊಬೈಲ್‌ ಎರಡು ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಆ ಪೈಕಿ 8 GB + 256 GB ಸ್ಟೋರೇಜ್‌ ಮತ್ತು 12 GB + 256 GB ಸ್ಟೋರೇಜ್ ಆಗಿವೆ. ಇನ್ನು ಈ ಫೋನ್‌ ಅನ್ನು ಗ್ರಾಹಕರು ಮಿ.ಕಾಮ್‌, ಫ್ಲಿಪ್‌ಕಾರ್ಟ್‌, ಮಿ.ಹೋಮ್‌ ಮೂಲಕ ಖರೀದಿ ಮಾಡಬಹುದಾಗಿದೆ. ಗ್ರಾಹಕರಿಗೆ ಕೆಲವು ಆಯ್ದ ಬ್ಯಾಂಕ್ ಆಫರ್‌, ಎಕ್ಸ್‌ಚೇಂಜ್ ಕೊಡುಗೆಗಳು ಕೂಡಾ ಲಭ್ಯ ಆಗಲಿವೆ.

Best Mobiles in India

English summary
Redmi Note 12 Pro Plus 5G received biggest price drop on flipkart India. offer price, specifications and other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+