ರೆಡ್ಮಿಯ ಈ 128GB ಸ್ಟೋರೇಜ್ ಫೋನಿನ ಬೆಲೆಯಲ್ಲಿ ದಿಢೀರ್ ಇಳಿಕೆ!
ದಿಗ್ಗಜ ಇ ಕಾಮರ್ಸ್ ಅಡ್ಡಾ ಎಂದೇ ಗುರುತಿಸಿಕೊಂಡಿರುವ ಫ್ಲಿಪ್‌ಕಾರ್ಟ್ (flipkart) ಆನ್‌ಲೈನ್ ಶಾಪಿಂಗ್‌ಗೆ ಒನ್ ಸ್ಟಾಪ್ ತಾಣವಾಗಿದೆ. ಈ ಸಂಸ್ಥೆಯು ವಿಶೇಷ ಕೊಡುಗೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಾ ಮುಂದೆ ನಡೆದಿದ್ದು, ಅದರಲ್ಲಿಯೂ ಬಹು ಮುಖ್ಯವಾಗಿ ಕೆಲವು ಆಯ್ದ ಮೊಬೈಲ್‌ಗಳಿಗೆ ದೊಡ್ಡ ರಿಯಾಯಿತಿ ಘೋಷಿಸುತ್ತದೆ. ಪ್ರಸ್ತುತ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ರಿಯಲ್‌ಮಿ ಸಂಸ್ಥೆಯ ರೆಡ್ಮಿ ನೋಟ್ 13 5G (REDMI Note 13 5G) ಮೊಬೈಲ್‌ಗೆ ಆಕರ್ಷಕ ಡಿಸ್ಕೌಂಟ್ ನೀಡಿದ್ದು, ಗ್ರಾಹಕರನ್ನು ಸೆಳೆದಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ರೆಡ್ಮಿ ನೋಟ್ 13 5G (REDMI Note 13 5G) ಶೇ. 19% ರಷ್ಟು ನೇರ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯ ಇದೆ. ಈ ಫೋನಿನ 6 GB RAM + 128 GB ಸ್ಟೋರೇಜ್ ವೇರಿಯಂಟ್ 16,999ರೂ. ಗಳ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳ ಕೊಡುಗೆ ಅಲ್ಲದೇ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯ ಆಗಲಿವೆ.

ಇನ್ನು ಈ ಫೋನ್ 6GB RAM + 128 GB ಹಾಗೂ 8GB RAM+ 256 GB ಆಂತರೀಕ ಸ್ಟೋರೇಜ್ ಆಯ್ಕೆಗಳನ್ನು ಹೊಂದಿದ್ದು, ಇದು 108 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಮುಖ್ಯ ಕ್ಯಾಮೆರಾ ಅನ್ನು ಪಡೆದುಕೊಂಡದೆ. ಹಾಗೆಯೇ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಲಭ್ಯ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ರೆಡ್ಮಿ ನೋಟ್ 13 5G - ಫೀಚರ್ಸ್
ರೆಡ್ಮಿ ನೋಟ್ 13 5G ಮೊಬೈಲ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1080 × 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲ ಪಡೆದಿದ್ದು, ಇದು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ. ಇದಲ್ಲದೆ 1920Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಅನ್ನು ಸಪೋರ್ಟ್ ಇದೆ.
ರೆಡ್ಮಿ ನೋಟ್ 13 5G ಮೊಬೈಲ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 13 ಓಎಸ್ ಬೆಂಬಲ ಜೊತೆಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6GB RAM + 128 GB ಹಾಗೂ 8GB RAM+ 256 GB ಆಂತರೀಕ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಸಪೋರ್ಟ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ.
ರೆಡ್ಮಿ ನೋಟ್ 13 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಪಡೆದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ರೆಡ್ಮಿ ನೋಟ್ 13 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದಕ್ಕೆ ಅನುಗುಣವಾಗಿ 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳು 3.5 ಎಂಎಂ ಆಡಿಯೊ ಜಾಕ್, 5G SA, NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.3, GPS + GLONASS, USB ಟೈಪ್-C ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.


Click it and Unblock the Notifications








