Home
ಸುದ್ದಿಜಾಲ

ಗ್ರಾಹಕರಿಗೆ ಸಿಹಿಸುದ್ದಿ; ರೆಡ್ಮಿಯ ಈ ಮೂರು ಫೋನ್‌ಗಳ ಬೆಲೆಯಲ್ಲಿ ದಿಢೀರ್‌ ಇಳಿಕೆ!

ಜನಪ್ರಿಯ ಶಿಯೋಮಿ ಸಂಸ್ಥೆಯು ಇದೀಗ ಭಾರತದಲ್ಲಿ ತನ್ನ 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂಭ್ರಮದ ಪ್ರಯುಕ್ತ ಶಿಯೋಮಿ ಸಂಸ್ಥೆಯು ತನ್ನ ಇತ್ತೀಚಿನ ರೆಡ್ಮಿ ನೋಟ್ 13 ಸರಣಿಯ ಫೋನ್‌ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದ್ದು, ಗ್ರಾಹಕರನ್ನು ಆಕರ್ಷಿಸಿದೆ.

ಹೌದು, ಶಿಯೋಮಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ 10 ನೇ ವಾರ್ಷಿಕೋತ್ಸವದ ಅಂಗವಾಗಿ ರೆಡ್ಮಿ ನೋಟ್ 13 ಸರಣಿ ಫೋನ್‌ ಬೆಲೆಯಲ್ಲಿ ಕಡಿತ ಘೋಷಿಸಿದೆ. ಈ ಸರಣಿಯು ರೆಡ್ಮಿ ನೋಟ್ 13 5G, ರೆಡ್ಮಿ ನೋಟ್ 13 ಪ್ರೊ 5G ಹಾಗೂ ರೆಡ್ಮಿ ನೋಟ್ 13 ಪ್ರೊ+ 5G ಮಾಡೆಲ್‌ಗಳನ್ನು ಒಳಗೊಂಡಿದೆ. ಇದೀಗ ಸಂಸ್ಥೆಯು ಈ ಮೂರು ಮಾಡೆಲ್‌ ಫೋನ್‌ಗಳ ಬೆಲೆಯಲ್ಲಿ ಆಕರ್ಷಕ ಇಳಿಕೆ ಮಾಡಿದ್ದು, ಖರೀದಿದಾರರಿಗೆ ಖುಷಿ ಎನಿಸಿದೆ.

ಗ್ರಾಹಕರಿಗೆ ಸಿಹಿಸುದ್ದಿ; ರೆಡ್ಮಿಯ ಈ ಮೂರು ಫೋನ್‌ಗಳ ಬೆಲೆಯಲ್ಲಿ ದಿಢೀರ್‌ ಇಳಿಕೆ!

ಅಂದಹಾಗೆ ಗ್ರಾಹಕರು ರೆಡ್ಮಿ ನೋಟ್ 13 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಫ್ಲಿಪ್‌ಕಾರ್ಟ್‌, ಅಮೆಜಾನ್‌, ಮಿ.ಕಾಮ್‌, ಶಿಯೋಮಿ ಹೋಮ್‌ ಮತ್ತು ಶಿಯೋಮಿ ರಿಟೇಲ್ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಬೆಲೆ ಇಳಿಕೆ ಜೊತೆಗೆ ಆಯ್ದ ಬ್ಯಾಂಕ್‌ನಿಂದ ಹೆಚ್ಚುವರಿ ರಿಯಾಯಿತಿ ಕೊಡುಗೆಯು ಲಭ್ಯ ಇದೆ. ಇನ್ನುಳಿದಂತೆ ಆಫರ್‌ ಬೆಲೆ ಎಷ್ಟು ಹಾಗೂ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಫರ್‌ ಬೆಲೆ ಮಾಹಿತಿ

ರೆಡ್ಮಿ ನೋಟ್ 13 5G ಫೋನಿನ ಬೆಲೆ ಮಾಹಿತಿ
6GB + 128GB ವೇರಿಯಂಟ್‌ ಆಫರ್‌ ಬೆಲೆ 16,999ರೂ. ಗಳು
8GB + 256GB ವೇರಿಯಂಟ್‌ ಆಫರ್‌ ಬೆಲೆ 18,999ರೂ. ಗಳು
12GB + 256GB ವೇರಿಯಂಟ್‌ ಆಫರ್‌ ಬೆಲೆ 20,999ರೂ. ಗಳು

ರೆಡ್ಮಿ ನೋಟ್ 13 ಪ್ರೊ 5G ಫೋನಿನ ಬೆಲೆ ಮಾಹಿತಿ
8GB + 128GB ವೇರಿಯಂಟ್‌ ಆಫರ್‌ ಬೆಲೆ 24,999ರೂ. ಗಳು
8GB + 256GB ವೇರಿಯಂಟ್‌ ಆಫರ್‌ ಬೆಲೆ 26,999ರೂ. ಗಳು
12GB + 256GB ವೇರಿಯಂಟ್‌ ಆಫರ್‌ ಬೆಲೆ 28,999ರೂ. ಗಳು

ರೆಡ್ಮಿ ನೋಟ್ 13 ಪ್ರೊ+ 5G ಫೋನಿನ ಬೆಲೆ ಮಾಹಿತಿ
8GB + 128GB ವೇರಿಯಂಟ್‌ ಆಫರ್‌ ಬೆಲೆ 30,999ರೂ. ಗಳು
12GB + 256GB ವೇರಿಯಂಟ್‌ ಆಫರ್‌ ಬೆಲೆ 32,999ರೂ. ಗಳು
12GB + 256GB ವೇರಿಯಂಟ್‌ ಆಫರ್‌ ಬೆಲೆ 34,999ರೂ. ಗಳು

ರೆಡ್ಮಿ ನೋಟ್‌ 13 5G ಫೀಚರ್ಸ್‌

ಈ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 13 ನಲ್ಲಿ ಕೆಲಸ ಮಾಡಲಿದೆ. ಜೊತೆಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಇದ್ದು ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಹಾಗೆಯೇ ರೆಡ್ಮಿ ನೋಟ್‌ 13 ಪ್ರೊ 5G ಮತ್ತು ರೆಡ್ಮಿ ನೋಟ್‌ 13 ಪ್ರೊ+ 5G ಈ ಸ್ಮಾರ್ಟ್‌ಫೋನ್‌ಗಳು 6.67 ಇಂಚಿನ AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಇವುಗಳ ಡಿಸ್‌ಪ್ಲೇಯು 1,220 x 2,712 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇವೆ. ಪ್ರೊ ಆವೃತ್ತಿಯು ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್‌ ಪಡೆದಿದ್ದು, ಪ್ರೊ+ ಆವೃತ್ತಿಯು ಡೈಮೆನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ.

Best Mobiles in India

English summary
Redmi Note 13 5G Series Get Price Drop in India. Check Offer price, Specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+