Redmi: ರೆಡ್ಮಿ ನೋಟ್ 13 ಪ್ರೊ+ 5G ವರ್ಲ್ಡ್ ಚಾಂಪಿಯನ್ಸ್ ಆವೃತ್ತಿಯ ಫೀಚರ್ಸ್ ಲೀಕ್! ಭಾರತದಲ್ಲಿ ಯಾವಾಗ ಲಾಂಚ್?
ರೆಡ್ಮಿ ಸ್ಮಾರ್ಟ್‌ಫೋನ್‌ಗಳಿಗೆ (Redmi smartphones) ವಿಶೇಷ ಬೇಡಿಕೆ ಇದ್ದು, ಈ ನಡುವೆ ರೆಡ್ಮಿ ನೋಟ್ 13 ಪ್ರೊ+ 5G ವರ್ಲ್ಡ್ ಚಾಂಪಿಯನ್ಸ್ ಆವೃತ್ತಿಯ (Redmi Note 13+ 5G World Champions Edition) ಕೆಲವು ಫೀಚರ್ಸ್ ಲೀಕ್ ಆಗಿವೆ. ಅದರಲ್ಲೂ ಇದರ ವಿನ್ಯಾಸದ ಬಗ್ಗೆ ಪ್ರಮುಖ ಮಾಹಿತಿ ತಿಳಿದುಬಂದಿದ್ದು, ಸ್ಮಾರ್ಟ್‌ಫೋನ್ ವಲಯದಲ್ಲಿ ಕಮಾಲ್ ಮಾಡಲಿದೆ ಎಂದು ತಿಳಿದುಬಂದಿದೆ.
ಹೌದು, ರೆಡ್ಮಿ ನೋಟ್ 13 ಪ್ರೊ+ 5G ವರ್ಲ್ಡ್ ಚಾಂಪಿಯನ್ಸ್ ಆವೃತ್ತಿ ಸ್ಮಾರ್ಟ್‌ಫೋನ್‌ನ ಕೆಲವು ಮಾಹಿತಿಗಳು ಈಗಾಗಲೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡುತ್ತಿದೆ. ಈ ನಡುವೆ ಈ ಆವೃತ್ತಿಯ ವಿನ್ಯಾಸವನ್ನು ಲೇವಡಿ ಮಾಡಲಾಗಿದ್ದು ಇದೇ ತಿಂಗಳು ಭಾರತದಲ್ಲಿ ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಏನಿರಬಹುದು?, ಯಾವೆಲ್ಲಾ ಬಣ್ಣದಲ್ಲಿ ಈ ಫೋನ್ ಕಾಣಿಸಿಕೊಳ್ಳಬಹುದು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ರೆಡ್ಮಿ ನೋಟ್ 13 ಪ್ರೊ+ 5G ವರ್ಲ್ಡ್ ಚಾಂಪಿಯನ್ಸ್ ಆವೃತ್ತಿ: ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಟಾಕ್ ಆಗುತ್ತಿದೆ. ಅದರಂತೆ ಏಪ್ರಿಲ್ 30 ರಂದು ಭಾರತದಲ್ಲಿ ಈ ಫೋನ್ ಲಾಂಚ್ ಆಗಬಹುದು ಎಂದು ತಿಳಿದುಬಂದಿದೆ. ಇದರ ಜೊತೆಗೆ ಈ ಫೋನ್ ಫ್ಯೂಷನ್ ಬ್ಲಾಕ್, ಫ್ಯೂಷನ್ ಪರ್ಪಲ್ ಮತ್ತು ಫ್ಯೂಷನ್ ವೈಟ್ ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ ಎಂದು ಈಗಾಗಲೇ ದೃಢವಾಗಿದೆ.
ಈ ರೆಡ್ಮಿ ನೋಟ್ 13 ಪ್ರೊ+ 5G ಸ್ಮಾರ್ಟ್‌ಫೋನ್ (Note 13 Pro+ 5G smartphone) ಅನ್ನು ಈ ವರ್ಷದ ಜನವರಿಯಲ್ಲಿ ಭಾರತದಲ್ಲಿ ರೆಡ್ಮಿ ನೋಟ್ 13 5G ಮತ್ತು ರೆಡ್ಮಿ ನೋಟ್ 13 ಪ್ರೊ 5G ಜೊತೆಗೆ ಲಾಂಚ್ ಮಾಡಲಾಗಿತ್ತು. ಈ ಎಲ್ಲಾ ಫೋನ್‌ಗಳೂ ಸಹ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದವು. ಅಲ್ಲದೆ ಆಂಡ್ರಾಯ್ಡ್ 13-ಆಧಾರಿತ MIUI 14 ನೊಂದಿಗೆ ಈ ಫೋನ್‌ಗಳು ಲಭ್ಯ ಇವೆ.

ಇನ್ನು ರೆಡ್ಮಿ ನೋಟ್ 13 ಪ್ರೊ+ 5G, ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 120W ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಜೊತೆಗೆ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಆಯ್ಕೆಯೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಮತ್ತು ಮೂರು RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಕಂಡು ಬಂದಿದೆ. ಈ ನಡುವೆ ಕಂಪನಿಯು ಭಾರತದಲ್ಲಿ ರೆಡ್ಮಿ ನೋಟ್ 13 ಪ್ರೊ+ 5G ವರ್ಲ್ಡ್ ಚಾಂಪಿಯನ್ಸ್ ಆವೃತ್ತಿ ಅಥವಾ AFA ಆವೃತ್ತಿಯ ಬಿಡುಗಡೆಯನ್ನು ಖಚಿತಪಡಿಸಿದೆ.
ಎಕ್ಸ್ ನಲ್ಲಿ ಈ ಬಗ್ಗೆ ಮಾಹಿತಿ ಖಚಿತಪಡಿಸಲಾಗಿದೆ. ಶಿಯೋಮಿ ಇಂಡಿಯಾ ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್ (AFA) ಸಹಯೋಗದೊಂದಿಗೆ ಏಪ್ರಿಲ್ 30 ರಂದು ರೆಡ್ಮಿ ನೋಟ್ 13 ಪ್ರೊ+ 5G ವರ್ಲ್ಡ್ ಚಾಂಪಿಯನ್ಸ್ ಆವೃತ್ತಿಯ ಮುಂಬರುವ ಬಿಡುಗಡೆಯನ್ನು ಘೋಷಿಸಿದೆ. ಪೋಸ್ಟ್ ಜೊತೆಗೆ ಟೀಸರ್ ಸಹ ಇದೆ. ಅದು ಫೋನ್‌ನ ರಿಯರ್ ಪ್ಯಾನೆಲ್‌ನ ಔಟ್‌ಲೈನ್ ಹೇಗಿರಲಿದೆ ಅನ್ನೋದನ್ನು ತೋರಿಸುತ್ತದೆ.

ಟೀಸರ್‌ನಲ್ಲಿ ರೆಡ್ಮಿ ನೋಟ್ 13 ಪ್ರೊ+ 5G ವರ್ಲ್ಡ್ ಚಾಂಪಿಯನ್ಸ್ ಆವೃತ್ತಿಯು ನೀಲಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಕ್ಯಾಮರಾ ಮತ್ತು ಎಲ್ಇಡಿ ಫ್ಲ್ಯಾಶ್ ಮಾಡ್ಯೂಲ್‌ಗಳ ಸುತ್ತಲೂ ಗೋಲ್ಡನ್ ಕಲರ್‌ನ ಲೋಗೋಗಳನ್ನು ಕಾಣಬಹುದಾಗಿದೆ. ಹಾಗೆಯೇ ಮೇಲಿನ ಬಲ ಮೂಲೆಯಲ್ಲಿ AFA ಲೋಗೋ ಇದೆ. ಮಾಡೆಲ್ ಬಗ್ಗೆ ಇನ್ನೂ ಏನನ್ನೂ ಬಹಿರಂಗಪಡಿಸಲಾಗಿಲ್ಲ. ಆದಾಗ್ಯೂ, ವರ್ಲ್ಡ್ ಚಾಂಪಿಯನ್ಸ್ ಆವೃತ್ತಿಯು ಪ್ರಸ್ತುತ ನೋಟ್ 13 ಪ್ರೊ+ 5G ಯಂತೆಯೇ ಫೀಚರ್ಸ್ ಅನ್ನು ಹೊಂದಿರುವ ಸಾಧ್ಯತೆಯಿದೆ.
ಈ ನಡುವೆ ಟಿಪ್‌ಸ್ಟರ್ ಇಶಾನ್ ಅಗರ್ವಾಲ್ (@ishanagarwal24) ಮುಂಬರುವ ರೆಡ್ಮಿ ನೋಟ್ 13 ಪ್ರೊ+ 5G ವರ್ಲ್ಡ್ ಚಾಂಪಿಯನ್ಸ್ ಆವೃತ್ತಿಯ ಲೀಕ್ ಆದ ಲೈವ್ ಚಿತ್ರಗಳನ್ನು ಸಹ ಶೇರ್ ಮಾಡೊಕೊಂಡಿದ್ದಾರೆ. ಇದು ಮೇಲಿನ ಬಲ ಮೂಲೆಯಲ್ಲಿ ಲೋಗೋ ಮತ್ತು ರಿಯರ್ ಪ್ಯಾನಲ್‌ನಲ್ಲಿನ ಕೆಳಗೆ ಲಂಬವಾದ ಬಿಳಿ ಪಟ್ಟೆಗಳೊಂದಿಗೆ ನೀಲಿ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಅಗತ್ಯ ಇದ್ದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications








