Home
ಸುದ್ದಿಜಾಲ

Redmi: 200MP ಕ್ಯಾಮೆರಾ.. 12GB RAM.. ಶೀಘ್ರವೇ ಲಾಂಚ್‌ ಆಗಲಿದೆ ರೆಡ್ಮಿಯ ಈ ವಿಶೇಷ ಫೋನ್‌!

ರೆಡ್ಮಿ ನೋಟ್‌ 13 ಪ್ರೊ ಪ್ಲಸ್‌ (Redmi Not e 13 Pro Plus) ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಫೋನ್ 200 ಮೆಗಾಪಿಕ್ಸೆಲ್‌ ಕ್ಯಾಮೆರಾ, 120W ವೇಗದ ಚಾರ್ಜಿಂಗ್ ಬೆಂಬಲ ಹಾಗೂ 12GB RAM ನಂತಹ ಪ್ರೀಮಿಯಂ ಫೀಚರ್ಸ್‌ ಆಯ್ಕೆ ಹೊಂದಿರಲಿದೆ ಎಂದು ಹೇಳಲಾಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ಸಂಬಂಧ ಲೀಕ್‌ ಮಾಹಿತಿ ಇಲ್ಲಿದೆ ನೋಡಿ.

ರೆಡ್ಮಿ ಫೋನ್‌ಗಳು (Redmi phones) ವಿವಿಧ ಫೀಚರ್ಸ್‌ ಆಯ್ಕೆಯ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಅದರಲ್ಲೂ ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಫೋನ್‌ಗಳ ಸಾಲಿಗೆ ಈ ಫೋನ್‌ಗಳು ಸಹ ಸೇರಲಿವೆ. ಈ ನಡುವೆ ರೆಡ್ಮಿಯ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್ ಲಾಂಚ್‌ಗೆ ದಿನಗಣನೆ ಆರಂಭ ಆಗಿದೆ.

200MP ಕ್ಯಾಮೆರಾ.. 12GB RAM.. ಶೀಘ್ರವೇ ಲಾಂಚ್‌ ಆಗಲಿದೆ ರೆಡ್ಮಿಯ ಈ ವಿಶೇಷ ಫೋನ್

ಹೌದು, ಭಾರತದಲ್ಲಿ ಶೀಘ್ರವೇ ರೆಡ್ಮಿ ನೋಟ್‌ 13 ಪ್ರೊ ಪ್ಲಸ್‌ (Redmi Note 13 Pro Plus) ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಫೋನ್ 200 ಮೆಗಾಪಿಕ್ಸೆಲ್‌ ಕ್ಯಾಮೆರಾ, 120W ವೇಗದ ಚಾರ್ಜಿಂಗ್ ಬೆಂಬಲ ಹಾಗೂ 12GB RAM ನಂತಹ ಪ್ರೀಮಿಯಂ ಫೀಚರ್ಸ್‌ ಆಯ್ಕೆ ಹೊಂದಿರಲಿದೆ ಎಂದು ಹೇಳಲಾಗಿದೆ. ಹಾಗಿದ್ರೆ ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ಸಂಬಂಧಿ ಲೀಕ್‌ ಮಾಹಿತಿ ಇಲ್ಲಿದೆ ನೋಡಿ.

ರೆಡ್ಮಿ ನೋಟ್‌ 13 ಪ್ರೊ ಪ್ಲಸ್‌ ಡಿಸ್‌ಪ್ಲೇ ವಿವರ: ಈ ವಿಶೇಷ ಸ್ಮಾರ್ಟ್‌ಫೋನ್ 6.67 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದ್ದು, 2712 x 1220 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದರೊಂದಿಗೆ 1.5K ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 1800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಈ ಫೋನ್‌ ಲಭ್ಯ ಇರಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

ರೆಡ್ಮಿ ನೋಟ್‌ 13 ಪ್ರೊ ಪ್ಲಸ್‌ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಅಲ್ಟ್ರಾ 4nm ಚಿಪ್‌ಸೆಟ್‌ನೊಂದಿಗೆ (Octa core MediaTek Dimensity 7200 Ultra 4nm chipset) ಬರಲಿದೆ ಎಂದು ಹೇಳಲಾಗಿದ್ದು, ಮಾಲಿ G610 MC4 GPU ಗ್ರಾಫಿಕ್ಸ್ ಕಾರ್ಡ್‌ನೊಂದಿಗೆ ಕಾಣಿಸಿಕೊಳ್ಳಲಿದೆ. ಆಂಡ್ರಾಯ್ಡ್ 13 ಓಎಸ್ ಅನ್ನು ಈ ಫೋನ್‌ ರನ್‌ ಮಾಡಲಿದೆ ಎಂದು ಹೇಳಲಾಗಿದೆ. ಉಳಿದಂತೆ ಈ ಸ್ಮಾರ್ಟ್‌ಫೋನ್ 12GB RAM + 256GB ಮತ್ತು 16GB RAM + 512GB ನ ಎರಡು ವೇರಿಯಂಟ್‌ನಲ್ಲಿ ಲಭ್ಯ ಇರಲಿದೆ.

ರೆಡ್ಮಿ ನೋಟ್‌ 13 ಪ್ರೊ ಪ್ಲಸ್‌ ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಸ್ಯಾಮ್‌ಸಂಗ್‌ HP3 ಸೆನ್ಸರ್‌ ಆಯ್ಕೆಯೊಂದಿಗೆ 200 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾದೊಂದಿಗೆ ಕಾಣಿಸಿಕೊಳ್ಳಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಜೊತೆಗೆ ಸೋನಿ IMX355 ಸೆನ್ಸರ್‌ ಇರುವ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್‌ ಹಾಗೂ ಓಮ್ನಿವಿಷನ್ OV02B10 ಸೆನ್ಸರ್‌ ಇರುವ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಉಳಿದಂತೆ ಇದು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ.

ರೆಡ್ಮಿ ನೋಟ್‌ 13 ಪ್ರೊ ಪ್ಲಸ್‌ ಬ್ಯಾಟರಿ ಹಾಗೂ ಇತರೆ: ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ದೊಡ್ಡ ಬ್ಯಾಟರಿ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಅಂದರೆ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಳ್ಳಲಿದ್ದು, ಇದು 120W ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ ಎಂದು ಮಾಹಿತಿ ತಿಳಿದುಬಂದಿದೆ. ಇದಕ್ಕಾಗಿ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ ಆಯ್ಕೆ ಪಡೆದುಕೊಳ್ಳಲಿದೆ.

ಇದರೊಂದಿಗೆ ಈ ಫೋನ್ IP68 ರೇಟಿಂಗ್‌ ಆಯ್ಕೆ, ಸ್ಟೀರಿಯೋ ಸ್ಪೀಕರ್‌ ಡಾಲ್ಬಿ ಅಟ್ಮಾಸ್ (Dolby Atmos) ಬೆಂಬಲದೊಂದಿಗೆ ಬರಲಿದೆ. ಮತ್ತು ಅತಿಗೆಂಪು ಸೆನ್ಸರ್‌ ಆಯ್ಕೆ, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ನಂದಿಗೆ ಈ ಫೋನ್‌ ಕಾಣಿಸಿಕೊಳ್ಳಲಿದೆ ಎಂದು ಲೀಕ್‌ ಮಾಹಿತಿಯಿಂದ ತಿಳಿದುಬಂದಿದೆ. ಇದರ ಜೊತೆಗೆ ಸುಧಾರಿತ ಬ್ಲೂಟೂತ್‌ ಆವೃತ್ತಿ, ವೈ ಫೈ ಹಾಗೂ ಇನ್ನಿತರೆ ಕನೆಕ್ಟಿವಿಟಿ ಸೌಲಭ್ಯ ಈ ಫೋನ್‌ನಲ್ಲಿ ಇರಲಿದೆ.

200MP ಕ್ಯಾಮೆರಾ.. 12GB RAM.. ಶೀಘ್ರವೇ ಲಾಂಚ್‌ ಆಗಲಿದೆ ರೆಡ್ಮಿಯ ಈ ವಿಶೇಷ ಫೋನ್

ರೆಡ್ಮಿ ನೋಟ್‌ 13 ಪ್ರೊ ಪ್ಲಸ್‌ ಬೆಲೆ ವಿವರ: ಈ ಫೋನಿನ 12 GB RAM + 256 GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಫೋನ್‌ಗೆ 23,100 ರೂ. ಗಳ ಬೆಲೆ ಇರಲಿದೆ ಎನ್ನಲಾಗಿದೆ. ಅದೇ ರೀತಿ 16 GB RAM + 512 GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಫೋನ್‌ಗೆ 26,150 ರೂ.ಗಳನ್ನು ನಿಗದಿ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈಗಾಗಲೇ ಈ ಫೋನ್‌ ಚೀನಾದಲ್ಲಿ ಲಭ್ಯವಿದೆ. ಭಾರತದಲ್ಲಿ ಡಿಸೆಂಬರ್ ವೇಳೆಗೆ ಫೋನ್ ಲಾಂಚ್‌ ಆಗಲಿದೆ.

Best Mobiles in India

English summary
Redmi Note 13 Pro Plus smartphone will be launched. This phone will have a selection of premium features like 200 megapixel camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+