Redmi: ರೆಡ್ಮಿ ನೋಟ್ 13 ಪ್ರೊ+ ಫೋನ್ ಫೀಚರ್ಸ್ ಲೀಕ್! ಕರ್ವ್ಡ್ ಡಿಸ್‌ಪ್ಲೇ, ಶಕ್ತಿಯುತ ಪ್ರೊಸೆಸರ್
ರೆಡ್ಮಿ ಸ್ಮಾರ್ಟ್‌ಫೋನ್‌ಗಳಿಗೆ (Redmi smartphone) ಭಾರತದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದ್ದು, ಈ ಮೂಲಕ ಸಾಕಷ್ಟು ಗ್ರಾಹಕರನ್ನು ಪಡೆದುಕೊಂಡಿದೆ. ಅದರಲ್ಲೂ ಕೆಲವು ಫೋನ್‌ಗಳು ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಭರ್ಜರಿ ರಿಯಾಯಿತಿಯೊಂದಿಗೆ ಕಾಣಿಸಿಕೊಳ್ಳುತ್ತಿವೆ. ಈ ನಡುವೆ ರೆಡ್ಮಿ ನೋಟ್ 13 ಪ್ರೊ+ (Redmi Note 13 Pro+) ಬಗ್ಗೆ ಕೆಲವು ಮಾಹಿತಿ ಲೀಕ್ ಆಗಿದೆ.
ಹೌದು, ರೆಡ್ಮಿ ನೋಟ್ 13 ಪ್ರೊ+ ಸ್ಮಾರ್ಟ್‌ಫೋನ್ ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದ್ದು, ಲಾಂಚ್ ಆಗುವ ಮುನ್ನವೇ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಈ ಫೋನ್ 1.5K ಕರ್ವ್ಡ್ OLED ಸ್ಕ್ರೀನ್ ಹೊಂದಿರಲಿದೆ ಎನ್ನಲಾಗಿದ್ದು, ಡೈಮೆನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್ ಬಲ ಪಡೆದುಕೊಂಡಿರಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಹಾಗಿದ್ರೆ, ಈ ಫೋನ್‌ನ ಲೀಕ್ ಮಾಹಿತಿಗಳ ಪ್ರಕಾರ ಇದು ಏನೆಲ್ಲಾ ವಿಶೇಷ ಫೀಚರ್ಸ್ ಪಡೆದುಕೊಂಡಿರಲಿದೆ?, ಭಾರತದಲ್ಲಿ ಇದರ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.

ರೆಡ್ಮಿ ನೋಟ್ 13 ಪ್ರೊ+ ಸ್ಮಾರ್ಟ್‌ಫೋನ್: ರೆಡ್ಮಿ ನೋಟ್ 13 5G ಸರಣಿಯ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದ ಬಳಿಕ ಕಂಪನಿಯು ಈಗ ಟಾಪ್-ಎಂಡ್ ಮಿಡ್‌ರೇಂಜ್ ಫೋನ್‌ನ ಫೀಚರ್ಸ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕೀಟಲೆ ಮಾಡುತ್ತಿದೆ. ಈ ಫೋನ್ ಉತ್ತಮ ಕಾರ್ಯಕ್ಷಮತೆಗಾಗಿ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಅಲ್ಟ್ರಾ (MediaTek Dimensity 7200 Ultra) ಚಿಪ್‌ನಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.
ರೆಡ್ಮಿ ನೋಟ್ 13 ಪ್ರೊ+ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಜನವರಿ 4 ರಂದು ಲಾಂಚ್ ಮಾಡಲಿದೆ ಎನ್ನಲಾಗಿದೆ. ಅದರಂತೆ ಈ ಫೋನ್ ವೆಗಾನ್ ಲೆದರ್, ರ್ಪಲ್ ಮಾದರಿಯಲ್ಲಿ (Vegan leather, purple pattern) ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಇದರಲ್ಲಿ ಫ್ಯೂಷನ್ ಬ್ಲಾಕ್ ಮತ್ತು ಫ್ಯೂಷನ್ ವೈಟ್ ರೂಪಾಂತರಗಳು ಸಹ ಲಭ್ಯವಿರುತ್ತವೆ ಎಂದು ಹೇಳಲಾಗಿದೆ. ಇದರೊಂದಿಗೆ ಈ ಫೋನ್ 1.5K ಕರ್ವ್ಡ್ OLED ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿರಲಿದ್ದು, ಉತ್ತಮ ಐಪಿ ರೇಟಿಂಗ್ ಅನ್ನು ಸಹ ಹೊಂದಿರುತ್ತದೆ ಎಂದು ತಿಳಿದುಬಂದಿದೆ.

ಅದರಂತೆ ರೆಡ್ಮಿ ನೋಟ್ 13 ಪ್ರೊ+ ಸ್ಮಾರ್ಟ್‌ಫೋನ್ ಚೀನೀ ರೂಪಾಂತರವು 6.67 ಇಂಚಿನ 12 ಬಿಟ್ 120Hz ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು 8.9 ಮಿಮೀ ದಪ್ಪವನ್ನು ಹೊಂದಿರಬಹುದು ಮತ್ತು 204 ಗ್ರಾಂ ತೂಕವಿರಬಹುದು ಎನ್ನಲಾಗಿದೆ. ಇದರೊಂದಿಗೆ 4nm ಡೈಮೆನ್ಸಿಟಿ ಚಿಪ್‌ನೊಂದಿಗೆ G610 ಗ್ರಾಫಿಕ್ಸ್ ಆಯ್ಕೆ ಪಡೆಯಲಿದ್ದು, MIUI 14 ಸ್ಕಿನ್‌ನಲ್ಲಿ ರನ್ ಆಗುವ ಸಾಧ್ಯತೆ ಇದೆ.
ಹಾಗೆಯೇ ಈ ಫೋನ್ 120W ವೈರ್ಡ್ ಚಾರ್ಜಿಂಗ್‌ನೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿರಬಹುದು ಎನ್ನಲಾಗಿದ್ದು, 200 ಮೆಗಾಪಿಕ್ಸೆಲ್ OIS ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಆಯ್ಕೆ ಪಡೆಯಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆಯಲಿದ್ದು, IP68 ರೇಟೆಡ್ ಹ್ಯಾಂಡ್‌ಸೆಟ್ ಇದಾಗಿರಲಿದೆ ಎಂದು ಊಹಿಸಲಾಗಿದೆ.

ಭಾರತದಲ್ಲಿ ರೆಡ್ಮಿ ನೋಟ್ 13 ಪ್ರೊ+ ಬೆಲೆ ಎಷ್ಟಿರಬಹುದು?: ಈ ಸ್ಮಾರ್ಟ್‌ಫೋನ್ ಚೀನಾದಲ್ಲಿ 1,999 ಯುವಾನ್‌ನಿಂದ ಪ್ರಾರಂಭವಾಗುತ್ತದೆ ಎನ್ನಲಾಗಿದೆ. ಅಂದರೆ ಭಾರತದಲ್ಲಿ ಇದರ ಬೆಲೆ 23,300 ರೂ. ಗಳಾಗಿರಲಿದೆ. ಆದಾಗ್ಯೂ, ಹಿಂದಿನ ಟ್ರ್ಯಾಕ್ ರೆಕಾರ್ಡ್ ಮತ್ತು ಪ್ರಮುಖ ನವೀಕರಣಗಳನ್ನು ಪರಿಗಣಿಸಿದರೆ ಈ ಸ್ಮಾರ್ಟ್‌ಫೋನ್ ಭಾರತದಲ್ಲಿ 30,000-35,000 ರೂ.ಗಳ ಬೆಲೆ ಹೊಂದಿರಬಹುದು ಎನ್ನಲಾಗಿದೆ.


Click it and Unblock the Notifications








