Home
ಸುದ್ದಿಜಾಲ

ಲಾಂಚ್‌ ಆಗಿಯೇ ಬಿಡ್ತು ರೆಡ್ಮಿ ನೋಟ್‌ 14 5G ಫೋನ್‌!..ಥಂಡಾ ಹೊಡೆದ ಮಾರುಕಟ್ಟೆ!

ಅಂತೂ ಇಂತೂ ಬಹುನಿರೀಕ್ಷಿತ ಶಿಯೋಮಿ ಮೊಬೈಲ್‌ ಕಂಪನಿಯ ರೆಡ್ಮಿ ನೋಟ್‌ 14 5G (Redmi Note 14 series) ಮೊಬೈಲ್‌ ಸರಣಿಯು ಇಂದು ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗಿದೆ. ಈ ಸರಣಿಯು ರೆಡ್ಮಿ ನೋಟ್‌ 14, ರೆಡ್ಮಿ ನೋಟ್‌ 14 ಪ್ರೊ ಹಾಗೂ ರೆಡ್ಮಿ ನೋಟ್‌ 14 ಪ್ರೊ+ ಫೋನ್‌ಗಳನ್ನು ಪಡೆದಿದ್ದು, ಆಕರ್ಷಕ ಫೀಚರ್ಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಅಬ್ಬರಿಸುವ ಸೂಚನೆಗಳನ್ನು ನೀಡಿವೆ. ಅ ಪೈಕಿ ರೆಡ್ಮಿ ನೋಟ್‌ 14 ಹೆಚ್ಚಿನ ಗಮನ ಸೆಳೆದಿದೆ.

ಹೌದು, ಶಿಯೋಮಿ ಸಂಸ್ಥೆಯು ರೆಡ್ಮಿ ನೋಟ್‌ 14 5G ಮೊಬೈಲ್‌ ಅನ್ನು ಇಂದು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ SoC ಪ್ರೊಸೆಸರ್‌ ವೇಗವನ್ನು ಪಡೆದಿದೆ. ಹಾಗೆಯೇ ಈ ಮಾಡೆಲ್‌ 5110mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಅಲ್ಲದೇ ಬಜೆಟ್‌ ಪ್ರೈಸ್‌ ಟ್ಯಾಗ್‌ ಪಡೆದಿರುವುದು ಮತ್ತೊಂದು ಪ್ಲಸ್‌ ಪಾಯಿಂಟ್‌ ಎನಿಸಿದೆ.

ಲಾಂಚ್‌ ಆಗಿಯೇ ಬಿಡ್ತು ರೆಡ್ಮಿ ನೋಟ್‌ 14 5G ಫೋನ್‌!..ಥಂಡಾ ಹೊಡೆದ ಮಾರುಕಟ್ಟೆ!

ಈ ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಆ ಪೈಕಿ ಈ ಫೋನಿನ ಮೊದಲ ಕ್ಯಾಮೆರಾವು 50ಮೆಗಾ ಪಿಕ್ಸಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸಾಮರ್ಥ್ಯದಲ್ಲಿ ಇದೆ. ಹಾಗಾದರೇ ರೆಡ್ಮಿ ನೋಟ್‌ 14 5G ಫೋನಿನ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

AMOLED ಡಿಸ್‌ಪ್ಲೇ ರಚನೆ

ರೆಡ್ಮಿ ನೋಟ್‌ 14 5G ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1080×2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲ ಇದ್ದು, ಇದು 2100 nits ಗರಿಷ್ಠ ಬ್ರೈಟ್‌ನೆಸ್ ಅನ್ನು ಪಡೆದಿದೆ. ಇದಲ್ಲದೆ 1920Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್‌ ಅನ್ನು ಬೆಂಬಲಿಸಲಿದೆದೆ.

ಲಾಂಚ್‌ ಆಗಿಯೇ ಬಿಡ್ತು ರೆಡ್ಮಿ ನೋಟ್‌ 14 5G ಫೋನ್‌!..ಥಂಡಾ ಹೊಡೆದ ಮಾರುಕಟ್ಟೆ!

ಪವರ್‌ಫುಲ್‌ ಪ್ರೊಸೆಸರ್‌

ರೆಡ್ಮಿ ನೋಟ್‌ 14 5G ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ SoC ಪ್ರೊಸೆಸರ್‌ ವೇಗದಲ್ಲಿ ಕೆಲಸ ಮಾಡಲಿದ್ದು, ಇದು ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಜೊತೆಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6GB + 128GB, 8GB + 128GB ಹಾಗೂ 8GB+256GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ಪಡೆದಿದೆ.

ಬೆಸ್ಟ್‌ ಕ್ಯಾಮೆರಾ ಸೆಟ್‌ಅಪ್‌

ರೆಡ್ಮಿ ನೋಟ್‌ 14 5G ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪಡೆದಿದ್ದು, ದ್ವಿತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಪ್ರೊ ಹಾಗೂ ಪ್ರೊ+ ಮಾಡೆಲ್‌ಗಳು ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿವೆ.

ಫಾಸ್ಟ್‌ ಚಾರ್ಜಿಂಗ್‌

ರೆಡ್ಮಿ ನೋಟ್‌ 14 5G ಫೋನ್‌ 5110mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದು 45W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಅಲ್ಲದೇ ಈ ಫೋನ್‌ ಫ್ಯಾಂಟಮ್ ಪರ್ಪಲ್, ಟೈಟಾನ್ ಬ್ಲಾಕ್, ಮಿಸ್ಟಿಕ್ ವೈಟ್ ಕಲರ್‌ ಆಯ್ಕೆಗಳನ್ನು ಪಡೆದಿದೆ. ಇದರೊಂದಿಗೆ ಇದು ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆ ಹಾಗೂ IP64 ರೇಟಿಂಗ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಪಡೆದಿದೆ.

ಬೆಲೆ ಹಾಗೂ ಲಭ್ಯತೆ

6GB + 128GB ವೇರಿಯಂಟ್‌ ಬೆಲೆ 17,999ರೂ.
8GB + 128GB ವೇರಿಯಂಟ್‌ ಬೆಲೆ 18,999ರೂ.
8GB + 256GB ವೇರಿಯಂಟ್‌ ಬೆಲೆ 20,999ರೂ.

ಇನ್ನು ಈ ಫೋನ್‌ ಇದೇ ಡಿಸೆಂಬರ್‌ 13 ರಿಂದ ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ ಇ ಕಾಮರ್ಸ್‌ ತಾಣ ಹಾಗೂ ಮಿ.ಕಾಮ್‌ ವೆಬ್‌ಸೈಟ್‌ ಮೂಲಕ ಮಾರಾಟ ಪ್ರಾರಂಭಿಸಲಿದೆ. ಆರಂಭಿಕ ಕೊಡುಗೆಗಳು ಲಭ್ಯವಾಗಲಿವೆ.

Best Mobiles in India

English summary
Redmi Note 14 5G launched in india. Know Price, Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+