Home
ಸುದ್ದಿಜಾಲ

ಇಂದು ಎಂಟ್ರಿ ಕೊಡಲಿದೆ ರೆಡ್ಮಿ ನೋಟ್‌ 14 5G ಸರಣಿ!..ಮಾರುಕಟ್ಟೆ ಶೇಕ್‌ ಖಚಿತ!

ಶಿಯೋಮಿ ಮೊಬೈಲ್‌ ಕಂಪನಿಯ ನೂತನ ರೆಡ್ಮಿ ನೋಟ್‌ 14 5G (Redmi Note 14 series) ಮೊಬೈಲ್‌ ಸರಣಿಯು ಇಂದು (ಡಿಸೆಂಬರ್‌ 9 ರಂದು) ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಫೋನಿನ ಕೆಲವು ಕೆಲವು ಫೀಚರ್ಸ್‌ಗಳು ಈಗಾಗಲೇ ಗ್ರಾಹಕರ ಗಮನ ಸೆಳೆದಿವೆ. ಅಂದಹಾಗೆ ರೆಡ್ಮಿ ನೋಟ್‌ 14 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ SoC ಪ್ರೊಸೆಸರ್‌ ಸೌಲಭ್ಯ ಪಡೆದುಕೊಂಡಿರುವುದು ನಿಕ್ಕಿ ಆಗಿದೆ.

ಹೌದು, ಶಿಯೋಮಿ ಕಂಪನಿಯು ರೆಡ್ಮಿ ನೋಟ್‌ 14 5G (Redmi Note 14 series) ಮೊಬೈಲ್‌ ಅನ್ನು ಇಂದು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಈ ಸರಣಿಯು ಮೂರು ಮಾಡೆಲ್‌ಗಳನ್ನು ಒಳಗೊಂಡಿರಲಿದ್ದು, ಅವುಗಳು ಕ್ರಮವಾಗಿ ರೆಡ್ಮಿ ನೋಟ್‌ 14, ರೆಡ್ಮಿ ನೋಟ್‌ 14 ಪ್ರೊ ಹಾಗೂ ರೆಡ್ಮಿ ನೋಟ್‌ 14 ಪ್ರೊ+ ಫೋನ್‌ಗಳು ಆಗಿವೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ.

ಇಂದು ಎಂಟ್ರಿ ಕೊಡಲಿದೆ ರೆಡ್ಮಿ ನೋಟ್‌ 14 5G ಸರಣಿ!..ಮಾರುಕಟ್ಟೆ ಶೇಕ್‌ ಖಚಿತ!

ಇನ್ನು ರೆಡ್ಮಿ ನೋಟ್‌ 14 5G ಸರಣಿಯ ಮೂರು ಫೋನ್‌ಗಳು ಭಿನ್ನ ಪ್ರೊಸೆಸರ್‌ ಹಾಗೂ ಬ್ಯಾಟರಿ ಸಾಮರ್ಥ್ಯದ ಆಯ್ಕೆ ಒಳಗೊಂಡಿರಲಿವೆ. ಅಲ್ಲದೇ ರೆಡ್ಮಿ ನೋಟ್‌ 14 ಪ್ರೊ+ ಮೊಬೈಲ್‌ 6,200mAh ಬ್ಯಾಟರಿ ಸೌಲಭ್ಯ ಪಡೆದಿದೆ. ಹಾಗಾದರೇ ರೆಡ್ಮಿ ನೋಟ್‌ 14 5G ಫೋನಿನ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ ನೋಟ್‌ 14 5G ಸರಣಿಯ ಫೀಚರ್ಸ್

ರೆಡ್ಮಿ ನೋಟ್‌ 14 5G ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ Super AMOLED ಡಿಸ್‌ಪ್ಲೇ ಅನ್ನು ಪಡೆದಿರಲಿದ್ದು, ಈ ಡಿಸ್‌ಪ್ಲೇ 1080×2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿರಲಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲ ಇದ್ದು, ಇದು 2100 nits ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ. ಇದಲ್ಲದೆ 1920Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್‌ ಅನ್ನು ಬೆಂಬಲಿಸಲಿದೆ.

ರೆಡ್ಮಿ ನೋಟ್‌ 14 5G ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ SoC ಪ್ರೊಸೆಸರ್‌ ವೇಗದಲ್ಲಿ ಕೆಲಸ ಮಾಡಲಿದ್ದು, ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6GB + 128GB, 8GB + 128GB, 8GB + 256GB ಹಾಗೂ 12GB + 256GB ಸ್ಟೋರೇಜ್‌ ಅನ್ನು ಒಳಗೊಂಡಿರಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ಪಡೆದಿರಲಿದೆ.

ರೆಡ್ಮಿ ನೋಟ್‌ 14 5G ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪಡೆದಿರಲಿದ್ದು, ದ್ವಿತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್‌ ಅನ್ನು ಹೊಂದಿರಲಿದೆ. ಇದಲ್ಲದೆ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ. ಇನ್ನು ಪ್ರೊ ಹಾಗೂ ಪ್ರೊ+ ಮಾಡೆಲ್‌ಗಳು ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಪಡೆದಿರಲಿವೆ.

ರೆಡ್ಮಿ ನೋಟ್‌ 14 5G ಫೋನ್‌ 5110mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದು 45W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಹಾಗೆಯೇ ರೆಡ್ಮಿ ನೋಟ್‌ 14 ಪ್ರೊ ಮೊಬೈಲ್‌ 5,500mAh ಬ್ಯಾಟರಿ ಪಡೆದಿರಲಿದ್ದು, ಹಾಗೆಯೇ ರೆಡ್ಮಿ ನೋಟ್‌ 14 ಪ್ರೊ+ ಮೊಬೈಲ್‌ 6,200mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದುಕೊಂಡಿರುವುದು ಬಹುತೇಕ ಖಚಿತ.

Best Mobiles in India

English summary
Redmi Note 14 series India launch Today. Check Price, Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+