ಡಿಸೆಂಬರ್ 9 ರಂದು ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಬಿರುಗಾಳಿ ಖಚಿತ!
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ರೆಡ್ಮಿ (Redmi) ಸಂಸ್ಥೆಯು ಭಿನ್ನ ಶ್ರೇಣಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅಂದಹಾಗೆ ಸಂಸ್ಥೆಯ ಬಹುನಿರೀಕ್ಷಿತ ರೆಡ್ಮಿ ನೋಟ್ 14 ಸರಣಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲು ಅಧಿಕೃತ ದಿನಾಂಕ ನಿಗದಿಯಾಗಿದೆ. ಈ ಸರಣಿಯು ರೆಡ್ಮಿ ನೊಟ್ 14, ರೆಡ್ಮಿ ನೊಟ್ 14 ಪ್ರೊ ಹಾಗೂ ರೆಡ್ಮಿ ನೊಟ್ 14 ಪ್ರೊ+ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ.
ಹೌದು, ಶಿಯೋಮಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಇದೇ ಡಿಸೆಂಬರ್ 9 ರಂದು ಅಧಿಕೃತವಾಗಿ ರೆಡ್ಮಿ ನೊಟ್ 14 (Redmi Note 14 series) ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ ಮಾಡಲಿದೆ. ಇನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಈ ನೂತನ ಮೊಬೈಲ್ ಸರಣಿಯು ಚೀನಾದಲ್ಲಿ ಲಾಂಚ್ ಆಗಿತ್ತು. ಈ ಸರಣಿಯ ಫೀಚರ್ಸ್‌ಗಳು ಈಗಾಗಲೇ ಮೊಬೈಲ್ ಪ್ರಿಯರನ್ನು ಸಿಕ್ಕಾಪಟ್ಟೆ ಆಕರ್ಷಿಸಿವೆ.

ಹಾಗೆಯೇ ರೆಡ್ಮಿ ನೋಟ್ 14 5G ಸರಣಿಯ ಮೂರು ಫೋನ್‌ಗಳು ಭಿನ್ನ ಪ್ರೊಸೆಸರ್ ಹಾಗೂ ಬ್ಯಾಟರಿ ಬ್ಯಾಕ್‌ಅಪ್ ಆಯ್ಕೆ ಒಳಗೊಂಡಿರಲಿವೆ. ಈ ಸರಣಿಯ ಆರಮಭಿಕ ವೇರಿಯಂಟ್ ಮಾಡೆಲ್ ಬೆಲೆ ಸುಮಾರು 20,000ರೂ. ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಹಾಗಾದರೇ ರೆಡ್ಮಿ ನೋಟ್ 14 5G ಫೋನಿನ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ ನೋಟ್ 14 5G ಸರಣಿಯ ಫೀಚರ್ಸ್
ರೆಡ್ಮಿ ನೋಟ್ 14 5G ಮೊಬೈಲ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ Super AMOLED ಡಿಸ್‌ಪ್ಲೇಯನ್ನು ಪಡೆದಿರಲಿದ್ದು, ಈ ಡಿಸ್‌ಪ್ಲೇ 1080×2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿರಲಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲ ಇದ್ದು, ಇದು 2100 nits ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ. ಇದಲ್ಲದೆ 1920Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಅನ್ನು ಬೆಂಬಲಿಸಲಿದೆ.
ರೆಡ್ಮಿ ನೋಟ್ 14 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ SoC ಪ್ರೊಸೆಸರ್ ವೇಗದಲ್ಲಿ ಕೆಲಸ ಮಾಡಲಿದ್ದು, ಇದು ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6GB + 128GB, 8GB + 128GB, 8GB + 256GB ಹಾಗೂ 12GB + 256GB ಸ್ಟೋರೇಜ್ ಅನ್ನು ಒಳಗೊಂಡಿರಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ಪಡೆದಿರಲಿದೆ.
ರೆಡ್ಮಿ ನೋಟ್ 14 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿರಲಿದ್ದು, ದ್ವಿತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿರಲಿದೆ. ಇದಲ್ಲದೆ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ. ಇನ್ನು ಪ್ರೊ ಹಾಗೂ ಪ್ರೊ+ ಮಾಡೆಲ್‌ಗಳು ತ್ರಿವಳಿ ಕ್ಯಾಮೆರಾ ರಚನೆ ಪಡೆದಿರಲಿವೆ.
ರೆಡ್ಮಿ ನೋಟ್ 14 5G ಸ್ಮಾರ್ಟ್‌ಫೋನ್ 5110mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಹಾಗೆಯೇ ರೆಡ್ಮಿ ನೋಟ್ 14 5G ಪ್ರೊ ಫೋನ್ 5,500mAh ಬ್ಯಾಟರಿ ಪಡೆದಿರಲಿದ್ದು, ಅದೇ ರೀತಿ ರೆಡ್ಮಿ ನೋಟ್ 14 5G ಫೋನ್ 6,200mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಒಳಗೊಂಡಿರಲಿದೆ.


Click it and Unblock the Notifications








