ಕರ್ನಾಟಕದಲ್ಲೇ ಮತ್ತೊಂದು ರೆಡ್‌ಮಿ ನೋಟ್ 4 ಬ್ಲಾಸ್ಟ್: ಎಚ್ಚರವಹಿಸುವುದು ಅಗತ್ಯ....!

Written By:

ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಚೀನಾ ಮೂಲದ ಶಿಯೋಮಿ ಕಂಪನಿಯ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಸ್ಟೋಟವಾಗುತ್ತಿರುವ ಪ್ರಕರಣಗಳು ದಿನಕ್ಕೊಂದು ವರದಿಯಾಗುತ್ತಿದೆ. ಮೊನ್ನೆ ತಾನೇ ಬೆಂಗಳೂರಿನಲ್ಲಿ ಹೊಸ ಮೊಬೈಲ್ ಬ್ಲಾಸ್ಟ್ ಆಗಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಮೊಬೈಲ್ ಸ್ಫೋಟಗೊಂಡಿದೆ.

ಕರ್ನಾಟಕದಲ್ಲೇ ಮತ್ತೊಂದು ರೆಡ್‌ಮಿ ನೋಟ್ 4 ಬ್ಲಾಸ್ಟ್: ಎಚ್ಚರವಹಿಸುವುದು ಅಗತ್ಯ

ಓದಿರಿ: 'ಸೆಲ್ಫಿ ಇತಿಹಾಸವನ್ನು ಬದಲಾಯಿಸಲು ಬಂದಿದೆ AI ಟೆಕ್ನಾಲಾಜಿಯ ಒಪ್ಪೊ F5'


ಕೊಪ್ಪಳದಲ್ಲಿ ಯುವನೋರ್ವನ ಪ್ಯಾಂಟಿನಲ್ಲಿಟ್ಟಿದ್ದ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಕಾರಣವಿಲ್ಲದೇ ಬ್ಲಾಸ್ಟ್ ಆಗಿದ್ದು, ಇದರಿಂದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಸ್ಫೋಟದಿಂದ ಗಾಯಗೊಂಡಿದ್ದ ಯುವಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗಂಗಾವತಿಯಲ್ಲಿ ಘಟನೆ:

ಗಂಗಾವತಿಯಲ್ಲಿ ಘಟನೆ:

ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹನುಮೇಶ್ ಹರಿಜನ ಎಂಬವರು ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ಅನ್ನು ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡಿದ್ದ ಸಂದರ್ಭದಲ್ಲಿ ಫೋನ್ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ.

ಆನ್‌ಲೈನ್‌ ಮೂಲಕ ಖರೀದಿಸಿದ್ದ:

ಆನ್‌ಲೈನ್‌ ಮೂಲಕ ಖರೀದಿಸಿದ್ದ:

ಶಿಯೋಮಿ ಫೋನ್‌ಗಳು ಆನ್‌ಲೈನಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸದ್ಯ ಸ್ಪೋಟಗೊಂಡಿರುವ ಸ್ಮಾರ್ಟ್‌ಫೋನ್ ಸಹ ಆನ್‌ಲೈನಿನಲ್ಲಿ ಖರೀದಿಸಿದ್ದು ಎನ್ನಲಾಗಿದೆ. ಈ ಘಟನೆಯಿಂದಾಗಿ ಸ್ಥಳೀಯ ಜನರು ಭಯಭೀತರಾಗಿದ್ದಾರೆ.

ಎಚ್ಚರ:

ಎಚ್ಚರ:

ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚುಕಾಲ ಬಳಸಿದಾಗ, ಇಲ್ಲವೇ ಹೆಚ್ಚು ಹೊತ್ತು ಚಾರ್ಜಿಂಗ್ ಹಾಕಿದ ಸಂದರ್ಭದಲ್ಲಿ ಸ್ಪೋಟಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನಲೆಯಲ್ಲಿ ಬಿಸಿಯಾಗಿರುವ ಸ್ಮಾರ್ಟ್‌ಫೋನ್ ಅನ್ನು ಜೇಬಿನಲ್ಲಿ ಇಟ್ಟುಕೊಳ್ಳುವ ಮುನ್ನ ಎಚ್ಚರ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Redmi Note 4 explosion. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot