Home
ಸುದ್ದಿಜಾಲ

ಶಾಶ್ವತವಾಗಿ ಬೆಲೆ ಇಳಿಕೆ ಕಂಡ 'ರೆಡ್ಮಿ ನೋಟ್‌ 7 ಪ್ರೊ'!

ಶಿಯೋಮಿ ಕಂಪನಿಯ ಜನಪ್ರಿಯ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಅಬ್ಬರಿಸಿ ಗ್ರಾಹಕರನ್ನು ಸೆಳೆದಿದ್ದು, 48ಎಂಪಿ ಕ್ಯಾಮೆರಾ ಈ ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆ. ಇದರೊಂದಿಗೆ ಇದೊಂದು ಬಜೆಟ್‌ ಸ್ಮಾರ್ಟ್‌ಫೋನ್ ಎನ್ನುವುದು ಮತ್ತೊಂದು ವಿಶೇಷವಾಗಿದ್ದು, ಇದೀಗ ಕಂಪನಿಯು ಈ ಫೋನಿನ ಪ್ರೈಸ್‌ಟ್ಯಾಗ್‌ನಲ್ಲಿ ಶಾಶ್ವತ ಬೆಲೆ ಇಳಿಕೆ ಮಾಡಿದ್ದು, ಗ್ರಾಹಕರಿಗೆ ಖುಷಿ ಎನಿಸಿದೆ.

ರೆಡ್ಮಿ ನೋಟ್‌ 7 ಪ್ರೊ

ಹೌದು, ಶಿಯೋಮಿಯು ತನ್ನ 'ರೆಡ್ಮಿ ನೋಟ್‌ 7 ಪ್ರೊ' ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 2,000ರೂ.ಗಳ ಕಡಿತ ಮಾಡಿದ್ದು, ಹೀಗಾಗಿ 4GB + 64GB ವೇರಿಯಂಟ್ 11,999ರೂ.ಗಳಿಗೆ ಮತ್ತು 6GB + 64GB ವೇರಿಯಂಟ್ 14,999ರೂ.ಗಳಿಗೆ ಲಭ್ಯವಾಗಲಿದೆ. ಗ್ರಾಹಕರು ಈ ಸ್ಮಾರ್ಟ್‌ಫೋನ್‌ ಅನ್ನು ಫ್ಲಿಪ್‌ಕಾರ್ಟ್‌ ಮತ್ತು ಶಿಯೋಮಿ ಅಧಿಕೃತ ತಾಣದಲ್ಲಿ ಖರೀದಿಸಬಹುದಾಗಿದೆ. ನೆಪ್ಚುನ್ ಬ್ಲೂ, ನೆಬೂಲಾ ರೆಡ್‌ ಮತ್ತು ಸ್ಪೆಸ್‌ ಬ್ಲ್ಯಾಕ್‌ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಹಾಗಾದರೇ 'ರೆಡ್ಮಿ ನೋಟ್‌ 7 ಪ್ರೊ' ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಶಿಯೋಮಿ 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ FHD + ರೆಸಲ್ಯೂಶನ್ ಮತ್ತು 19.5:9ರ ಆಕಾರ ಅನುಪಾತದೊಂದಿಗೆ 6.3-ಇಂಚಿನ LTPS ಎಲ್‌ಸಿಡಿ ಪ್ರದರ್ಶನದೊಂದಿಗೆ ಬಿಡುಗಡೆಯಾಗಿದೆ. ಕಣ್ಣಿನ ಒತ್ತಡವನ್ನು ತಪ್ಪಿಸಲು ಸನ್‌ಲೈಟ್ ಡಿಸ್‌ಪ್ಲೇ ಮತ್ತು ಓದುವಿಕೆ ವಿಶೇಷ ಮೋಡ್ ಅನ್ನು ಹೊಂದಿರುವ ಫೋನ್ ಭಾಗಶಃ ಪೂರ್ಣ ಪ್ರಮಾಣದ ಸ್ಕ್ರೀನ್ ಡಿಸ್‌ಪ್ಲೇಯಂತೆ ಹೊಂದಿದೆ.

ಪ್ರೊಸೆಸರ್ ಬಲ

ಪ್ರೊಸೆಸರ್ ಬಲ

ಶಿಯೋಮಿ 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಆಕ್ಟಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಜೊತೆಗೆ 6GB LPDDR4X RAM ಮತ್ತು 128GB ಆಂತರಿಕ ಮೆಮೊರಿಯನ್ನು 'ರೆಡ್‌ಮಿ ನೋಟ್ 7 ಪ್ರೊ'ನಲ್ಲಿ ನೋಡಬಹುದು. ರೆಡ್‌ಮಿ ಫೋನಿನಲ್ಲಿ ಇದೇ ಮೊದಲ ಬಾರಿಗೆ 128GB ಮೆಮೊರಿಯನ್ನು ತರಲಾಗಿದ್ದು, ಅಡ್ರಿನೋ 612 ಜಿಪಿಯು ಜೊತೆಗೆ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಸ್ಮಾರ್ಟ್‌ ಕಾರ್ಯನಿರ್ವಹಣೆ ನೀಡಲಿದೆ.

ರಿಯರ್ ಕ್ಯಾಮೆರಾ

ರಿಯರ್ ಕ್ಯಾಮೆರಾ

ಶಿಯೋಮಿ 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನಿನಲ್ಲಿ 48MP ಪ್ರಾಥಮಿಕ ಸಂವೇದಕ ಮತ್ತು 5 MP ಸೆಕೆಂಡರಿ ಸಂವೇದಕಗಳನ್ನು ನೀಡಲಾಗಿದೆ. 48MP ಕ್ಯಾಮರಾವು ಸೋನಿ IMX586 ಸಂವೇದಕವನ್ನು ಬಳಸುತ್ತಿದ್ದು, ಇದು ಸ್ಮಾರ್ಟ್‌ಫೋನಗಳಿಗಾಗಿಯೇ ಅತ್ಯುನ್ನತ ರೆಸಲ್ಯೂಶನ್ ಸಂವೇದಕವಾಗಿದ್ದು ಉತ್ತಮ ಫೋಟೋಗಳಿಗಾಗಿ 4x ಡೈನಾಮಿಕ್ ಶ್ರೇಣಿಯನ್ನು ಬೆಂಬಲಿಸಲಿದೆ. ಹಾಗೂ ವೀಡಿಯೋ ರೆಕಾರ್ಡಿಂಗ್ ಫೀಚರ್ಸ್ ಹೊಂದಿದೆ.

ಸೆಲ್ಫೀ ಕ್ಯಾಮೆರಾ

ಸೆಲ್ಫೀ ಕ್ಯಾಮೆರಾ

ಶಿಯೋಮಿ 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನಿನಲ್ಲಿ 13 ಎಂಪಿ ಎಐ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಎಐ ಭಾವಚಿತ್ರ ಸೆಲ್ಫಿ, ಸ್ಟುಡಿಯೋ ಲೈಟಿಂಗ್ ಸೆಲ್ಫಿ, ಎಐ ಫೇಸ್ ಅನ್ಲಾಕ್, ಎಐ ಬ್ಯೂಟಿಗಳೊಂದಿಗೆ 13 ಎಂಪಿ ಎಐ ಸೆಲ್ಫ್ ಕ್ಯಾಮರಾ ಅದ್ಬುತವಾಗಿದೆ. ನಿರ್ದಿಷ್ಟ ಆಪ್ಟಿಮೈಸೇಶನ್ಗಳೊಂದಿಗೆ AI ದೃಶ್ಯ ಪತ್ತೆಹಚ್ಚುವಿಕೆ ತಂತ್ರಜ್ಞಾನ ಹೊಂದಿರುವುದು ಇದರ ವಿಶೇಷತೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

ಶಿಯೋಮಿ 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರುವಂತಹ 4000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಇದು ವೇಗವಾಗಿ ಚಾರ್ಜಿಂಗ್ ಆಗಲು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4.0 ಅನ್ನು ಬೆಂಬಲಿಸುತ್ತದೆ ಎಂದು ಶಿಯೋಮಿ ತಿಳಿಸಿದೆ. ಶಿಯೋಮಿ ರೆಡ್‌ಮಿ ನೋಟ್ 6 ನಲ್ಲಿ ಕ್ವಿಕ್ ಚಾರ್ಜ್ 3.0 ತಂದಿದನ್ನು ನಾವಿಲ್ಲಿ ನೋಡಬಹುದು.

Best Mobiles in India

English summary
Xiaomi has announced permanent price of Rs 2,000 discount to one of its best selling smartphones — Redmi Note 7 Pro. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+