Home
ಸುದ್ದಿಜಾಲ

ಇದೇ ಜುಲೈ 12ಕ್ಕೆ ಕ್ಲೋಸ್‌ ಆಗಲಿದೆ 'ರೆಡ್ಮಿ ನೋಟ್‌ 7 ಪ್ರೊ' ಓಪೆನ್ ಸೇಲ್!

ಶಿಯೋಮಿ ಕಂಪನಿಯ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್‌ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡೆ ಆರಂಭದಿಂದಲೂ ಸಖತ್ ಸದ್ದು ಮಾಡಿತ್ತು. ಈಗಾಗಲೇ ಹಲವು ಫ್ಲ್ಯಾಶ್‌ ಸೇಲ್‌ಗಳನ್ನು ಕಂಡಿದ್ದರೂ ಈ ಸ್ಮಾರ್ಟ್‌ಫೋನಿಗೆ ಇವತ್ತಿಗೂ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯ ಇದೆ. ಈ ನಿಟ್ಟಿನಲ್ಲಿ ಕಂಪನಿಯು ಓಪೆನ್ ಸೇಲ್‌ ಶುರುಮಾಡಿದ್ದು, 'ರೆಡ್ಮಿ ನೋಟ್ 7 ಪ್ರೊ' ಖರೀದಿಸುವುದಿದ್ದರೇ ಇದೇ ಜುಲೈ 12ರ ಒಳಗೆ ಖರೀದಿಸಿ.

ಇದೇ ಜುಲೈ 12ಕ್ಕೆ ಕ್ಲೋಸ್‌ ಆಗಲಿದೆ 'ರೆಡ್ಮಿ ನೋಟ್‌ 7 ಪ್ರೊ' ಓಪೆನ್ ಸೇಲ್!

ಹೌದು, ಶಿಯೋಮಿ ಕಂಪನಿಯ ಜನಪ್ರಿಯ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಓಪೆನ್‌ ಸೇಲ್ ಇದೇ ಜುಲೈ 12 ರಂದು ಕ್ಲೋಸ್‌ ಆಗಲಿದೆ. ಸದ್ಯ ಗ್ರಾಹಕರು ಫ್ಲಿಪ್‌ಕಾರ್ಟ್‌ ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ (Mi.com) ಖರೀದಿಸಬಹುದಾಗಿದ್ದು, 4GB + 64GB ಮತ್ತು 6GB + 64GB ವೇರಿಯಂಟ್‌ಗಳೆರಡು ಖರೀದಿಗೆ ಲಭ್ಯವಿದೆ. ಹಾಗೆಯೇ ಬ್ಲೂ, ಬ್ಲ್ಯಾಕ್‌ ಮತ್ತು ರೆಡ್‌ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ.

ಇದೇ ಜುಲೈ 12ಕ್ಕೆ ಕ್ಲೋಸ್‌ ಆಗಲಿದೆ 'ರೆಡ್ಮಿ ನೋಟ್‌ 7 ಪ್ರೊ' ಓಪೆನ್ ಸೇಲ್!

ರೆಡ್ಮಿ ನೋಟ್‌ 7 ಪ್ರೊ 4GB + 64GB ವೇರಿಯಂಟ್ ಬೆಲೆಯು 13,999ರೂ.ಗಳು ಮತ್ತು 6GB + 64GB ವೇರಿಯಂಟ್ ಬೆಲೆಯು 16,999ರೂ.ಗಳು ಆಗಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ನಲ್ಲಿ ನೋಕಾಸ್ಟ್‌ ಇಎಮ್‌ಐ, ಎಕ್ಸಚೇಂಜ್‌ ಸೌಲಭ್ಯದ ಆಯ್ಕೆಗಳು ಸಹ ಗ್ರಾಹಕರಿಗೆ ದೊರೆಯಲಿವೆ. ಹಾಗಾದರೇ ರೆಡ್ಮಿ ನೋಟ್‌ 7 ಪ್ರೊ ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳೆನು ಎನ್ನುವುದನ್ನು ಮುಂದೆ ನೋಡೋಣ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ FHD + ರೆಸಲ್ಯೂಶನ್ ಮತ್ತು 19.5:9ರ ಆಕಾರ ಅನುಪಾತದೊಂದಿಗೆ 6.3-ಇಂಚಿನ LTPS ಎಲ್‌ಸಿಡಿ ಪ್ರದರ್ಶನದೊಂದಿಗೆ ಬಿಡುಗಡೆಯಾಗಿದೆ. ಕಣ್ಣಿನ ಒತ್ತಡವನ್ನು ತಪ್ಪಿಸಲು ಸನ್‌ಲೈಟ್ ಡಿಸ್‌ಪ್ಲೇ ಮತ್ತು ಓದುವಿಕೆ ವಿಶೇಷ ಮೋಡ್ ಅನ್ನು ಹೊಂದಿರುವ ಫೋನ್ ಭಾಗಶಃ ಪೂರ್ಣ ಪ್ರಮಾಣದ ಸ್ಕ್ರೀನ್ ಡಿಸ್‌ಪ್ಲೇಯಂತೆ ಹೊಂದಿದೆ.

ಪ್ರೊಸೆಸರ್ ಬಲ

ಪ್ರೊಸೆಸರ್ ಬಲ

ಆಕ್ಟಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಜೊತೆಗೆ 6GB LPDDR4X RAM ಮತ್ತು 128GB ಆಂತರಿಕ ಮೆಮೊರಿಯನ್ನು 'ರೆಡ್‌ಮಿ ನೋಟ್ 7 ಪ್ರೊ'ನಲ್ಲಿ ನೋಡಬಹುದು. ರೆಡ್‌ಮಿ ಫೋನಿನಲ್ಲಿ ಇದೇ ಮೊದಲ ಬಾರಿಗೆ 128GB ಮೆಮೊರಿಯನ್ನು ತರಲಾಗಿದ್ದು, ಅಡ್ರಿನೋ 612 ಜಿಪಿಯು ಜೊತೆಗೆ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಸ್ಮಾರ್ಟ್‌ ಕಾರ್ಯನಿರ್ವಹಣೆ ನೀಡಲಿದೆ.

ರಿಯರ್ ಕ್ಯಾಮೆರಾ

ರಿಯರ್ ಕ್ಯಾಮೆರಾ

ರೆಡ್‌ಮಿ ನೋಟ್ 7 ಪ್ರೊನಲ್ಲಿ 48MP ಪ್ರಾಥಮಿಕ ಸಂವೇದಕ ಮತ್ತು 5 MP ಸೆಕೆಂಡರಿ ಸಂವೇದಕಗಳನ್ನು ನೀಡಲಾಗಿದೆ. 48MP ಕ್ಯಾಮರಾವು ಸೋನಿ IMX586 ಸಂವೇದಕವನ್ನು ಬಳಸುತ್ತಿದ್ದು, ಇದು ಸ್ಮಾರ್ಟ್ಫೋನ್ಗಳಿಗಾಗಿ ಅತ್ಯುನ್ನತ ರೆಸಲ್ಯೂಶನ್ ಸಂವೇದಕವಾಗಿದ್ದು ಉತ್ತಮ ಫೋಟೋಗಳಿಗಾಗಿ 4x ಡೈನಾಮಿಕ್ ಶ್ರೇಣಿಯನ್ನು ಬೆಂಬಲಿಸಲಿದೆ.

ಕ್ಯಾಮೆರಾ ತಂತ್ರಜ್ಞಾನ

ಕ್ಯಾಮೆರಾ ತಂತ್ರಜ್ಞಾನ

ರೆಡ್‌ಮಿ ನೋಟ್ 7 ಪ್ರೊ ಸಂವೇದಕವು 4 ಪಿಕ್ಸೆಲ್‌ಗಳನ್ನು 1 ಸೂಪರ್ ಪಿಕ್ಸೆಲ್‌ಗೆ ವಿಲೀನಗೊಳಿಸುವ ಮೂಲ ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಚಿತ್ರಗಳನ್ನು ಚಿತ್ರಿಸಲಿದೆ. ಕೃತಕ ಬುದ್ದಿಮತ್ತೆ ಸಹಾಯದಿಂದ ರಾತ್ರಿ ಸಮಯದಲ್ಲೂ ಛಾಯಾಗ್ರಹಣಕ್ಕೆ ಶಕ್ತವಾಗಿದೆ. AI ಪೋರ್ಟ್ರೇಟ್ 2.0 ಹೊಂದಿರುವ ಕ್ಯಾಮೆರಾ ಬೊಕೆ ಚಿತ್ರಗಳು, 4K ವೀಡಿಯೋ ರೆಕಾರ್ಡಿಂಗ್ ಫೀಚರ್ಸ್ ಹೊಂದಿದೆ

ಸೆಲ್ಫೀ ಕ್ಯಾಮೆರಾ

ಸೆಲ್ಫೀ ಕ್ಯಾಮೆರಾ

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನಿನಲ್ಲಿ 13 ಎಂಪಿ ಎಐ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಎಐ ಭಾವಚಿತ್ರ ಸೆಲ್ಫಿ, ಸ್ಟುಡಿಯೋ ಲೈಟಿಂಗ್ ಸೆಲ್ಫಿ, ಎಐ ಫೇಸ್ ಅನ್ಲಾಕ್, ಎಐ ಬ್ಯೂಟಿಗಳೊಂದಿಗೆ 13 ಎಂಪಿ ಎಐ ಸೆಲ್ಫ್ ಕ್ಯಾಮರಾ ಅದ್ಬುತವಾಗಿದೆ. ನಿರ್ದಿಷ್ಟ ಆಪ್ಟಿಮೈಸೇಶನ್ಗಳೊಂದಿಗೆ AI ದೃಶ್ಯ ಪತ್ತೆಹಚ್ಚುವಿಕೆ ತಂತ್ರಜ್ಞಾನ ಹೊಂದಿರುವುದು ಇದರ ವಿಶೇಷತೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರುವಂತಹ 4000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಇದು ವೇಗವಾಗಿ ಚಾರ್ಜಿಂಗ್ ಆಗಲು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4.0 ಅನ್ನು ಬೆಂಬಲಿಸುತ್ತದೆ ಎಂದು ಶಿಯೋಮಿ ತಿಳಿಸಿದೆ. ಶಿಯೋಮಿ ರೆಡ್‌ಮಿ ನೋಟ್ 6 ನಲ್ಲಿ ಕ್ವಿಕ್ ಚಾರ್ಜ್ 3.0 ತಂದಿದನ್ನು ನಾವಿಲ್ಲಿ ನೋಡಬಹುದು.

Best Mobiles in India

English summary
The Redmi Note 7 Pro will be on open sale till July 12 in India on Flipkart and Mi.com both. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+