'ರೆಡ್ಮಿ ನೋಟ್ 8 ಪ್ರೊ' ಮತ್ತು 'ರೆಡ್ಮಿ ನೋಟ್ 7 ಪ್ರೊ : ಖರೀದಿಗೆ ಯಾವುದು ಬೆಸ್ಟ್?

|

ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗಟ್ಟಿ ಸ್ಥಾನ ಪಡೆದಿರುವ ಶಿಯೋಮಿ ಸಂಸ್ಥೆ ಭಾರತದಲ್ಲಿ ಇಂದು (ಅ.16) ಬಹುನಿರೀಕ್ಷಿತ 'ರೆಡ್ಮಿ ನೋಟ್‌ 8 ಪ್ರೊ' ಮತ್ತು 'ರೆಡ್ಮಿ ನೋಟ್ 8' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ 'ರೆಡ್ಮಿ ನೋಟ್‌ 8' ಸರಣಿಯು ಈ ಹಿಂದಿನ 'ರೆಡ್ಮಿ ನೋಟ್ 7' ಸರಣಿಯ ಅಪ್‌ಗ್ರೇಡ್‌ ವರ್ಷನ್ ಎಂದೇ ಬಿಂಬಿತವಾಗಿದ್ದು, ನೂತನ ರೆಡ್ಮಿ ನೋಟ್ 8' ಸರಣಿ ಅತ್ಯುತ್ತಮ ಫೀಚರ್ಸ್‌ ಮತ್ತು ಅಗ್ಗದ ಬೆಲೆಯಿಂದ ಹವಾ ಎಬ್ಬಿಸಲಿದೆ.

ರೆಡ್ಮಿ ನೋಟ್ 8 ಪ್ರೊ

ಹೌದು, ಶಿಯೋಮಿ ಸಂಸ್ಥೆಯು ಬಿಡುಗಡೆ ಮಾಡಿರುವ 'ರೆಡ್ಮಿ ನೋಟ್ 8 ಪ್ರೊ' ಮೀಡಿಯಾ ಟೆಕ್ ಹಿಲಿಯೋ G90T ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, MIUI 10 ಆಧಾರಿತ ಆಂಡ್ರಾಯ್ಡ್ ಪೈ ಓಎಸ್‌ ಬೆಂಬಲ ಪಡೆದಿದೆ. ಜೊತೆಗೆ ನಾಲ್ಕು ಕ್ಯಾಮೆರಾ ಸೆಟ್‌ಅಪ್‌ ಇದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಹಾಗಾದರೇ ಹೊಸ 'ರೆಡ್ಮಿ ನೋಟ್ 8 ಪ್ರೊ' ಈ ಹಿಂದಿನ ಜನಪ್ರಿಯ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್‌ಗಿಂತ ಹೇಗೆ ಭಿನ್ನವಾಗಿದೆ?..ಮತ್ತು ಇವೆರಡರಲ್ಲಿ ಯಾವುದು ಖರೀದಿಗೆ ಯೋಗ್ಯ?.. ಎಂಬುದರ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಡಿಸ್‌ಪ್ಲೇ ಭಿನ್ನತೆಗಳು

ಡಿಸ್‌ಪ್ಲೇ ಭಿನ್ನತೆಗಳು

ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು 500nits ಬ್ರೈಟ್ನೆಸ್‌ ಸಾಮರ್' ಪಡೆದಿದೆ. 'ರೆಡ್ಮಿ ನೋಟ್ 7 ಪ್ರೊ' 1080 x 2340 ಪಿಕ್ಸಲ್ ರೆಸಲ್ಯೂಶನೊಂದಿಗೆ 6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಪಡೆದಿದೆ. ಈ ಎರಡು ಡಿಸ್‌ಪ್ಲೇಗಳು ಗೊರಿಲ್ಲಾ ಗ್ಲಾಸ್‌ 5 ರಕ್ಷಣೆಯನ್ನು ಪಡೆದಿವೆ.

ಪ್ರೊಸೆಸರ್‌ನಲ್ಲಿ ವ್ಯತ್ಯಾಸ

ಪ್ರೊಸೆಸರ್‌ನಲ್ಲಿ ವ್ಯತ್ಯಾಸ

ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ 'ಮೀಡಿಯಾ ಟೆಕ್ ಹಿಲಿಯೋ G90T' ಪ್ರೊಸೆಸರ್ ಸಾಮರ್ಥ್ಯದೊಂದಿಗೆ MIUI 10 ಆಧಾರಿತ ಆಂಡ್ರಾಯ್ಡ್ ಪೈ ಓಎಸ್‌ ಬೆಂಬಲ ಪಡೆದಿದೆ. ಹಾಗೆಯೇ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ SDM675 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಇದು ಸಹ ಆಂಡ್ರಾಯ್ಡ್ 9 ಪೈ ಓಎಸ್‌ ಬೆಂಬಲದಲ್ಲಿ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ : ಡ್ಯುಯಲ್ V/S ಕ್ವಾಡ್

ಕ್ಯಾಮೆರಾ : ಡ್ಯುಯಲ್ V/S ಕ್ವಾಡ್

ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ರಿಯರ್ ಕ್ಯಾಮೆರಾ ಸೆಟ್‌ ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ( f/1.9) ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ(f/2.2) ಸೆನ್ಸಾರ್‌ನಲ್ಲಿದ್ದರೇ ಇನ್ನು ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳೆರಡು 2ಎಂಪಿ(f/2.4) ಸೆನ್ಸಾರ್ ಪಡೆದಿವೆ. ಹಾಗೆಯೇ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 48ಎಂಪಿ ಮತ್ತು 5ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿವೆ.

ಸೆಲ್ಫಿ ಕ್ಯಾಮೆರಾ ಫೀಚರ್

ಸೆಲ್ಫಿ ಕ್ಯಾಮೆರಾ ಫೀಚರ್

ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ ಸೆಲ್ಫಿಗಾಗಿ 20ಎಂಪಿಯ ಕ್ಯಾಮೆರಾ ಹೊಂದಿದ್ದು, ಅದುವೇ f/2.0 ಅಪರ್ಚರ್‌ನಲ್ಲಿದೆ. ಹಾಗೂ ಎಚ್‌ಆರ್‌ಡಿ ಮತ್ತು ಪನೋರಮ ಆಯ್ಕೆಗಳು ಇವೆ. ಇನ್ನು 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಸೆಲ್ಫಿ ಕ್ಯಾಮೆರಾ ನೋಡುವುದಾದರೇ ಈ ಫೋನಿನಲ್ಲಿ 13ಎಂಪಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. ಜೊತೆಗೆ ಎಚ್‌ಆರ್‌ಡಿ ಸೌಲಭ್ಯವನ್ನು ಪಡೆದಿದೆ.

ಬ್ಯಾಟರಿ ಪವರ್ ಕಥೆ ಏನು

ಬ್ಯಾಟರಿ ಪವರ್ ಕಥೆ ಏನು

ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಫೋನ್ ಬಹುಬೇಗನೆ ಚಾರ್ಜ್ ಪಡೆದುಕೊಳ್ಳುತ್ತದೆ. ಹಾಗೆಯೇ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ 4000mAh ಬ್ಯಾಟರಿ ಲೈಫ್‌ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಆಯ್ಕೆ ಸೌಲಭ್ಯ ಇದೆ.

Best Mobiles in India

English summary
Redmi Note 8 Pro features a quad rear camera setup, whereas the Redmi Note 7 Pro houses just two cameras on the back. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X