ಶಿಯೋಮಿ 'ರೆಡ್ಮಿ ನೋಟ್ 9' ಬಿಡುಗಡೆಗೆ ಸಜ್ಜು!..ಕುತೂಹಲಕಾರಿ ಫೀಚರ್ಸ್‌!

|

ಶಿಯೋಮಿ ಸಂಸ್ಥೆಯು ತನ್ನ ಜನಪ್ರಿಯ ನೋಟ್ ಸರಣಿಯಲ್ಲಿ ಬಿಡುಗಡೆ ಮಾಡಿರುವ ರೆಡ್ಮಿ ನೋಟ್ 6, ರೆಡ್ಮಿ ನೋಟ್ 7 ಮತ್ತು ಇತ್ತೀಚಿನ ರೆಡ್ಮಿ ನೋಟ್ 8 ಸರಣಿ ಸ್ಮಾರ್ಟ್‌ಫೋನ್‌ಗಳು ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟುಹಾಕಿವೆ. ಈ ಸರಣಿಯಗಳ ಯಶಸ್ಸಿನಿಂದ ಶಿಯೋಮಿ ಇದೀಗ ರೆಡ್ಮಿ ನೋಟ್ 9 ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಲು ಸಕಲ ತಯಾರಿ ನಡೆಸಿದೆ. ಈ ಫೋನ್ ಸರಣಿ ಈಗಾಗಲೇ ಗ್ರಾಹಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.

ಚೀನಾ ಮೂಲದ

ಹೌದು, ಚೀನಾ ಮೂಲದ ಶಿಯೋಮಿ ಸಂಸ್ಥೆಯು ತನ್ನ ಬಹುನೀರೀಕ್ಷಿತ ರೆಡ್ಮಿ ನೋಟ್ 9 ಸ್ಮಾರ್ಟ್‌ಫೋನ್ ಸರಣಿಯನ್ನು ಇದೇ ಮಾರ್ಚ್ 12ರಂದು ಬಿಡುಗಡೆ ಮಾಡಲು ಮುಹೂರ್ತ ಫಿಕ್ಸ್‌ ಮಾಡಿಕೊಂಡಿದೆ. ಅಂದಹಾಗೆ ರೆಡ್ಮಿ ನೋಟ್ 9 ಸರಣಿಯು ರೆಡ್ಮಿ ನೋಟ್ 9 ಮತ್ತು ರೆಡ್ಮಿ ನೋಟ್ 9 ಪ್ರೊ ಮಾಡೆಲ್‌ಗಳನ್ನು ಹೊಂದಿರಲಿದೆ ಎಂಬುದು ಈಗಾಗಲೇ ಸ್ಮಾರ್ಟ್‌ಫೋನ್ ಪ್ರಿಯರಿಗೆ ತಿಳಿದಿರುವ ಸಂಗತಿಯೇ ಆಗಿದೆ.

ರೆಡ್ಮಿ ನೋಟ್ 9

ರೆಡ್ಮಿ ನೋಟ್ 9 ಸ್ಮಾರ್ಟ್‌ಫೋನ್‌ ಸರಣಿಯು ಸಾಕಷ್ಟು ಅಪ್‌ಡೇಟ್ ಫೀಚರ್ಸ್‌ಗಳನ್ನು ಒಳಗೊಂಡಿರುವ ಸೂಚನೆಯನ್ನು ಹೊರಹಾಕಿದೆ. ಮುಖ್ಯವಾಗಿ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ, ಡಿಸೈನ್, ಡಿಸ್‌ಪ್ಲೇ ರಿಫ್ರೇಶ್ ರೇಟ್, RAM ನಂತಹ ಅಗತ್ಯ ಫೀಚರ್ಸ್‌ಗಳಲ್ಲಿ ಹೊಸತನ ಇರಲಿದೆ ಎನ್ನಲಾಗಿದೆ. ಮುಖ್ಯವಾಗಿ ಇಸ್ರೋ ನಿರ್ಮಿತ ''ನ್ಯಾವಿಕ್'' ನ್ಯಾವಿಗೇಶನ್ ತಂತ್ರಜ್ಞಾನವನ್ನು ಈ ಸರಣಿಯ ಫೋನ್‌ಗಳು ಒಳಗೊಂಡಿರಲಿವೆ.

 90Hz ರಿಫ್ರೇಶ್‌ ರೇಟ್

ರೆಡ್ಮಿ ನೋಟ್ 9 ಮತ್ತು 9 ಪ್ರೊ ಫೋನ್‌ಗಳು 90Hz ರಿಫ್ರೇಶ್‌ ರೇಟ್ ಹೊಂದಿರಲಿದ್ದು, ಡಿಸ್‌ಪ್ಲೇ ಆಪರೇಟಿಂಗ್ ವ್ಯವಸ್ಥೆ ವೇಗವಾಗಿ ಇರಲಿದೆ. ಪಂಚ್ ಹೋಲ್ ಡಿಸೈನ್ ರಚನೆಯು ಇರಲಿದ್ದು, ಡ್ಯುಯಲ್ ಸೆಲ್ಫಿ ಕ್ಯಾಮೆರಾ ಇರುವ ಸಾಧ್ಯತೆಗಳು ಇವೆ. ಈ ಫೋನ್ ಎರಡು ವೇರಿಯಂಟ್ ಆಯ್ಕೆಗಳಲ್ಲಿರಲಿದ್ದು, ಅವುಗಳು ಕ್ರಮವಾಗಿ 4GB RAM + 64GB ಸ್ಟೋರೇಜ್ ವೇರಿಯಂಟ್ ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್ ಆಗಿರಲಿವೆ.

ಸ್ನ್ಯಾಪ್‌ಡ್ರಾಗನ್ 720

ಹಾಗೆಯೇ ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 720 ಪ್ರೊಸೆಸರ್ ಹೊಂದಿರಲಿದ್ದು, ಆಂಡ್ರಾಯ್ಡ್ 10 ಓಎಸ್‌ ಬೆಂಬಲ ಪಡೆದಿರಲಿದೆ. 4,500mAh ಅಥವಾ ಅದಕ್ಕಿಂತಲೂ ಉನ್ನತ ಮಟ್ಟದ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿರುವ ನಿರೀಕ್ಷೆಗಳಿವೆ. ಇನ್ನು ಈ ಫೋನ್ ಅರೋರಾ ಬ್ಲೂ, ಗ್ಲಾಸಿಯರ್ ವೈಟ್ ಹಾಗೂ ಇಂಟರ್‌ಸ್ಟೆಲ್ಲರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ.

Best Mobiles in India

English summary
Redmi India recently confirmed the launch date of the Redmi Note 9 and Note 9 Pro.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X