ಅಮೆಜಾನ್‌ನಲ್ಲಿ ಇಂದು ಮತ್ತೆ ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್‌ ಫೋನ್ ಸೇಲ್!

|

ಚೀನಾ ಮೂಲದ ಜನಪ್ರಿಯ ಶಿಯೋಮಿ ಸಂಸ್ಥೆಯು ತನ್ನ ನೋಟ್ ಸರಣಿಯಲ್ಲಿ ಹೊಸದಾಗಿ ಮಾಡಿರುವ ಹೊಸ ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್‌ ಫೋನ್‌ ಟ್ರೆಂಡಿಂಗ್ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಮಿಂಚಿದೆ. ಈ ಫೋನ್ ಈಗಾಗಲೇ ಸೇಲ್ ಕಂಡಿದ್ದು, ಇಂದು (ಜೂ.10) ಅಮೆಜಾನ್ ಮತ್ತು ಶಿಯೋಮಿ ವೆಬ್‌ಸೈಟ್‌ಗಳಲ್ಲಿ ಮತ್ತೆ ಫ್ಲ್ಯಾಶ್ ಸೇಲ್ ನಡೆಯಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಯು 16,499ರೂ. ಆಗಿದೆ.

ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್‌

ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್‌ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 720G ಪ್ರೊಸೆಸರ್‌ ಹೊಂದಿದೆ. ಆಂಡ್ರಾಯ್ಡ್‌ 10 ಓಎಸ್ ಬೆಂಬಲ ಪಡೆದಿದೆ. ಮುಖ್ಯವಾಗಿ ಇಸ್ರೋದ ನ್ಯಾವಿಕ್‌ ತಂತ್ರಜ್ಞಾನದ ಆಯ್ಕೆ ಒಳಗೊಂಡಿರುವುದು ಪ್ರಮುಖ ಹೈಲೈಟ್‌ ಆಗಿದೆ. ಹಾಗೆಯೇ ಈ ಫೋನ್ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಈ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಶಿಯೋಮಿ ರೆಡ್ಮಿ ನೋಟ್‌ 9 ಪ್ರೊ ಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರುವ 6.67 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 385 PPI ಪಿಕ್ಸೆಲ್‌ ಸಾಂದ್ರತೆಯನ್ನ ಒಳಗೊಂಡಿರುವ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಆಗಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನ ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇ ರಕ್ಷಣೆಗಾಗಿ ಕಾರ್ನಿಂಗ್‌ ಗೋರಿಲ್ಲಾ ಗ್ಲಾಸ್‌ 5 ಅನ್ನು ಫ್ರಂಟ್‌ ಹಾಗೂ ರಿಯರ್‌ ಸೆಟ್‌ಅಪ್‌ನಲ್ಲೂ ಸಹ ನೀಡಲಾಗಿದೆ. ಇನ್ನು ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಹಾಗೂ 120Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ.

ಪ್ರೊಸೆಸರ್‌ ಕಾರ್ಯ

ಪ್ರೊಸೆಸರ್‌ ಕಾರ್ಯ

ಶಿಯೋಮಿ ರೆಡ್ಮಿ ನೋಟ್‌ 9 ಪ್ರೊ ಮ್ಯಾಕ್ಸ್‌ ಪೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 720G ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 10ಒಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 64GB, 6GB RAM ಮತ್ತು 128GB, ಹಾಗೂ 8GB RAM ಮತ್ತು 128GB ಆಂತರಿಕ ಸಂಗ್ರಹಣ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಯನ್ನ ಹೊಂದಿದೆ. ಜೊತೆಗೆ ಈ ಪ್ರೊಸೆಸರ್‌ ಭಾರತದ ಇಸ್ರೋ ಸಂಸ್ಥೆ ಅಭಿವೃದ್ದಿ ಪಡಿಸಿರುವ ನ್ಯಾವಿಗೇಷನ್‌ ತಂತ್ರಜ್ಞಾನ ನ್ಯಾವಿಕ್‌ ಅನ್ನು ಬೆಂಬಲಿಸಲಿದೆ.

ಕ್ವಾಡ್ ಕ್ಯಾಮೆರಾ

ಕ್ವಾಡ್ ಕ್ಯಾಮೆರಾ

ಶಿಯೋಮಿ ರೆಡ್ಮಿ ನೋಟ್‌ 9 ಪ್ರೊ ಮ್ಯಾಕ್ಸ್‌ ಪೋನ್ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೆ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ 120 ಡಿಗ್ರಿ ಆಂಗಲ್‌ ಲೆನ್ಸ್‌, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಶಿಯೋಮಿ ರೆಡ್ಮಿ ನೋಟ್‌ 9 ಪ್ರೊ ಸ್ಮಾರ್ಟ್‌ಫೋನ್‌ 5,020mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 33W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ನಲ್ಲಿ 0 ಟು 50% ಬ್ಯಾಟರಿ ಚಾರ್ಜಿಂಗ್‌ ಅನ್ನು ಕೇವಲ 30 ನಿಮಿಷಗಳಲ್ಲಿ ಮಾಡಬಹುದಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ನ್ಯಾವಿಕ್‌ ಜಿಪಿಎಸ್‌ ಟೆಕ್ನಾಲಜಿ ಹಾಗೂ 3.5mm ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಶಿಯೋಮಿ ರೆಡ್ಮಿ ನೋಟ್‌ 9 ಪ್ರೊ ಮ್ಯಾಕ್ಸ್‌ ಪೋನ್ ಮೂರು ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯವಾಗಲಿದ್ದು, ಬೇಸ್‌ ವೇರಿಯೆಂಟ್‌ 6GB RAM ಮತ್ತು 64GB ಸ್ಮಾರ್ಟ್‌ಫೋನ್‌ ಬೆಲೆ 16,499ರೂ ಆಗಿದೆ. ಅಲ್ಲದೆ 6GB RAM ಮತ್ತು 128GB ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಬೆಲೆ 17,999ರೂ.ಆಗಿದ್ದರೆ, 8GB RAM ಮತ್ತು 128GB ಆಯ್ಕೆಯ ಸ್ಮಾರ್ಟ್‌ಫೋನ್‌ ಬೆಲೆ 19,999ರೂ,ಆಗಿದೆ. ಇಂದು ಅಮೆಜಾನ್‌ ಇಂಡಿಯಾ, ಮಿ.ಕಾಮ್‌, ಫ್ಲ್ಯಾಶ್ ಸೇಲ್ ನಡೆಯಲಿದೆ. ಹಾಗೆಯೇ ಬ್ಲ್ಯಾಕ್‌, ಗ್ಲೇಸಿಯರ್‌ ವೈಟ್‌ ಮತ್ತು ಆರೋರಾ ಬ್ಲೂ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Redmi Note 9 Pro Max goes on flash sale today at 12:00PM IST via Amazon India and Mi.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X