ಅಮೆಜಾನ್‌ನಲ್ಲಿ ಇಂದು ರೆಡ್ಮಿ ನೋಟ್ 9 ಪ್ರೊ ಫೋನ್ ಸೇಲ್‌!

|

ಭಾರೀ ಕುತೂಹಲ ಮೂಡಿಸಿರುವ ಶಿಯೋಮಿಯ ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನಿನ ಮಾರಾಟ ಇಂದು (ಮೇ 14) ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಇ-ಕಾಮರ್ಸ್ ದೈತ್ಯ ಅಮೆಜಾನ್ ಮತ್ತು ಅಧಿಕೃತ mi.com ವೆಬ್‌ಸೈಟ್‌ನಲ್ಲಿ ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್‌ ಮಾರಾಟ ನಡೆಯಲಿದೆ. ಅರೋರಾ ಬ್ಲೂ, ಗ್ಲೇಸಿಯರ್ ವೈಟ್ ಮತ್ತು ಇಂಟರ್ ಸ್ಟೆಲ್ಲಾರ್ ಬ್ಲ್ಯಾಕ್ ಎಂಬ ಮೂರು ವಿಶೇಷ ಬಣ್ಣಗಳ ಆಯ್ಕೆಗಳನ್ನು ಈ ಫೋನ್ ಹೊಂದಿದೆ.

ರೆಡ್ಮಿ ನೋಟ್ 9 ಪ್ರೊ

ಲಾಕ್‌ಡೌನ್‌ ಶುರುವಾದಾಗಿಂದ ಅಗತ್ಯ ಸಾಮಗ್ರಿಗಳನ್ನು ಹೊರತುಪಡಿಸಿ ಇತರೆ ವಸ್ತುಗಳ ಆನ್‌ಲೈನ್ ಮಾರಾಟಕ್ಕೆ ಅನುಮತಿ ಇರಲಿಲ್ಲ. ಆದ್ರೆ ಇತ್ತೀಚಿಗೆ ಆರೆಂಜ್ ಮತ್ತು ಗ್ರೀನ್‌ ಝೂನ್‌ ವಲಯಗಳಲ್ಲಿ ಅಗತ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದ ನಂತರ ಕಳೆದ ವಾರ ಭಾರತದಲ್ಲಿ ರೆಡ್ಮಿ ನೋಟ್ 9 ಪ್ರೊ ಮಾರಾಟ ನಡೆಸಿದೆ. ಈಗ ಮತ್ತೆ ಮಾರಾಟ ಆರಂಭಿಸಲಿದೆ. ಅಂದಹಾಗೇ ಈ ಸ್ಮಾರ್ಟ್‌ಫೋನ್ ಮಾರ್ಚ್‌ನಲ್ಲಿ ಬಿಡುಗಡೆ ಆಗಿತ್ತು. ಈ ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು ಪಂಚ್ ಹೋಲ್ ಮಾದರಿಯಲ್ಲಿದ್ದು, ಈ ಫೋನ್ 60Hz ಡಿಸ್‌ಪ್ಲೇ ರೀಫ್ರೇಶ್ ರೇಟ್ ಹೊಂದಿದೆ ಹಾಗೂ ಟಚ್ ಸಾಂಪ್ಲಿಂಗ್ ರೇಟ್ 120Hz ಆಗಿದೆ.

ಪ್ರೊಸೆಸರ್ ಯಾವುದು

ಪ್ರೊಸೆಸರ್ ಯಾವುದು

ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 720 ಪ್ರೊಸೆಸರ್‌ ಅನ್ನು ಪಡೆದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಈ ಫೋನ್ 4GB RAM +64GB ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ಹೆಚ್ಚಿಸಲು ಅವಕಾಶ ನೀಡಲಾಗಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 8ಎಂಪಿಯ ವೈಲ್ಡ್‌ ಆಂಗಲ್ ಲೆನ್ಸ್‌ ಹೊಂದಿದೆ. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಬಲ

ಬ್ಯಾಟರಿ ಬಲ

ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್ 5020mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗಿದೆ. ಇದರೊಂದಿಗೆ ಸೈಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ, ಬ್ಲೂಟೂತ್, ಹಾಟ್‌ಸ್ಟಾಪ್ ಸೇರಿದಂತೆ ಇತ್ತೀಚಿನ ಫೀಚರ್ಸ್‌ಗಳು ಲಭ್ಯ ಇವೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್ ಆರಂಭಿಕ ವೇರಿಯಂಟ್ ಬೆಲೆಯು 13,999ರೂ. ಆಗಿದೆ. 6GB RAM ವೇರಿಯಂಟ್ ಬೆಲೆಯು 16,999ರೂ. ಆಗಿದೆ. ಮೇ.14 ಇ-ಕಾಮರ್ಸ್ ದೈತ್ಯ ಅಮೆಜಾನ್ ಮತ್ತು ಅಧಿಕೃತ mi.com ವೆಬ್‌ಸೈಟ್‌ನಲ್ಲಿ ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್‌ ಮಾರಾಟ ನಡೆಯಲಿದೆ.

Best Mobiles in India

English summary
Redmi Note 9 Pro is available in two storage variants, namely 4GB + 64GB and 6GB + 128GB.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X