Redmi Note: ರೆಡ್ಮಿ ನೋಟ್‌ನ ಈ ಸ್ಮಾರ್ಟ್‌ಫೋನ್‌ಗೆ ಆಫರ್! 48MP ಕ್ಯಾಮೆರಾ... 5,020mAh ಬ್ಯಾಟರಿ!
ರೆಡ್ಮಿ ಫೋನ್‌ಗಳಿಗೆ (Redmi phone) ಬಹಳ ಬೇಡಿಕೆ ಇದೆ. ಈ ಕಾರಣಕ್ಕೆ ರೆಡ್ಮಿ ಫೋನ್‌ಗಳು ಭಾರತದಲ್ಲಿ ಹೆಚ್ಚು ಹೆಚ್ಚಾಗಿ ಸೇಲ್ ಆಗುತ್ತಿವೆ. ಈ ನಡುವೆ ಈಗ ರೆಡ್ಮಿಯ ಈ ವಿಶೇಷ ಫೋನ್‌ಗೆ ಆಫರ್ ನೀಡಲಾಗಿದೆ. ಇದರಿಂದಾಗಿ ಖರೀದಿದಾರರು ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ.
ಹೌದು, ರೆಡ್ಮಿ ನೋಟ್ 9 ಫೋನ್ (Redmi Note 9 phone) ಈಗ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಅಂದರೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ (Flipkart Big Billion Day Sale) ಭರ್ಜರಿ ಆಫರ್ ನೀಡಲಾಗಿದೆ. ಅದಾಗ್ಯೂ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಬೇಕು ಎಂದರೆ ನೀವು ಕೆಲವು ಬ್ಯಾಂಕ್ ಕಾರ್ಡ್ ಬಳಕೆ ಮಾಡಬಹುದಾಗಿದೆ. ಈ ಫೋನ್ 48MP ಮುಖ್ಯ ಕ್ಯಾಮೆರಾ ಸೆನ್ಸರ್ ಹಾಗೂ 5,020mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ

ರೆಡ್ಮಿ ನೋಟ್ 9 ಫೋನ್ ಆಫರ್ ವಿವರ: ಈ ರೆಡ್ಮಿ ನೋಟ್9 ನ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 16,499 ರೂ.ಗಳ ಬೆಲೆಗೆ ಕಾಣಿಸಿಕೊಂಡಿದ್ದು, ನೀವೀಗ ಇದನ್ನು 15,490 ರೂ.ಗಳಿಗೆ ಖರೀದಿ ಮಾಡಬಹುದು. ಅದಾಗ್ಯೂ ಇನ್ನೂ ಹೆಚ್ಚಿನ ಆಫರ್‌ಲ್ಲಿ ಈ ಫೋನ್ ಖರೀದಿ ಮಾಡಬೇಕು ಎಂದರೆ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿ ಖರೀದಿ ಮಾಡಿ.
ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಟ್‌ನಲ್ಲಿ ಖರೀದಿದಾರರು 5% ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಪಾರ್ಟನರ್ ಆಫರ್‌ಗೆ ಸೈನ್ ಅಪ್ ಮಾಡಿ ಪೇ ಲೇಟರ್ ಆಯ್ಕೆ ಮಾಡಿದ್ರೆ 20,000 ರೂ.ಗಳ ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಫ್ಯೂಚರ್ ನೋ ಮೋರ್‌ನಲ್ಲಿ ಒಂದು ಕ್ಯಾಶ್‌ಬ್ಯಾಕ್ ಕೂಪನ್ ಸಹ ಸಿಗಲಿದೆ ಹಾಗೂ ಡೆಬಿಟ್ ಕಾರ್ಡ್ ಇಎಮ್‌ಐ ಆಯ್ಕೆ ಸಹ ಇದ್ದು, 960ರೂ.ಗಳನ್ನು ಪಾವತಿ ಮಾಡಬಹುದು.
ರೆಡ್ಮಿ ನೋಟ್ 9 ಫೋನ್ ಡಿಸ್ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.53 ಇಂಚಿನ FHD+ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 1080 x 2340 ಪಿಕ್ಸೆಲ್ ಸ್ಕ್ರೀನ್‌ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ ಫೋನ್‌ನ ಸ್ಕ್ರೀನ್-ಟು-ಬಾಡಿ ಅನುಪಾತವು 84.37% ಮತ್ತು ಅದರ ಆಕಾರ ಅನುಪಾತವು 19.5:9 ಆಗಿದ್ದು, ಸ್ಮಾರ್ಟ್‌ಫೋನ್‌ನ ಬೆಜೆಲ್-ಫ್ರೀ ಸ್ಕ್ರೀನ್ v5 ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಮತ್ತು ಪಂಚ್-ಹೋಲ್ ಲೇಔಟ್ ಅನ್ನು ಹೊಂದಿದೆ.
ರೆಡ್ಮಿ ನೋಟ್ 9 ಫೋನ್ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G85 ಪ್ರೊಸೆಸರ್ ಬಲ ಪಡೆದುಕೊಂಡಿದ್ದು, ಇದು 2GHz ಕಾರ್ಟೆಕ್ಸ್ A75 ಡ್ಯುಯಲ್-ಕೋರ್ ಮತ್ತು 2GHz ಕಾರ್ಟೆಕ್ಸ್ A55 ಹೆಕ್ಸಾ ಕೋರ್ ಜೊತೆಗೆ ಅಕ್ಟಾ ಕೋರ್ ಸಿಪಿಯು ಶಕ್ತಿ ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್ ಮಾಲಿ-ಜಿ 52 ಜಿಪಿಯುನೊಂದಿಗೆ ಬಹುಕಾರ್ಯಕ್ಕಾಗಿ 4 GB RAM ನಲ್ಲಿ ಕಾಣಿಸಿಕೊಂಡಿದೆ.

ರೆಡ್ಮಿ ನೋಟ್ 9 ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 48 ಮೆಗಾಪಿಕ್ಸೆಲ್ f/1.79 ಪ್ರಾಥಮಿಕ ISOCELL ಪ್ಲಸ್ ಸೆನ್ಸರ್, 8 ಮೆಗಾಪಿಕ್ಸೆಲ್ f/2.2 118 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 2 ಮೆಗಾಪಿಕ್ಸೆಲ್ f/2.4 ಡೆಪ್ತ್ ಸೆನ್ಸಾರ್ ಮತ್ತು ಹೆಚ್ಚುವರಿ 2 ಮೆಗಾಪಿಕ್ಸೆಲ್ f/2.4 ಮ್ಯಾಕ್ರೋ ಲೆನ್ಸ್ ಆಯ್ಕೆ ಹೊಂದಿದೆ. ಇದರೊಂದಿಗೆ 13 ಮೆಗಾಪಿಕ್ಸೆಲ್ f/2.25 ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ. ಹಾಗೆಯೇ 5,020mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 22.5W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.


Click it and Unblock the Notifications








