ರೆಡ್ಮಿ ಸ್ಮಾರ್ಟ್‌ ಬ್ಯಾಂಡ್ V/S ರಿಯಲ್‌ಮಿ ಬ್ಯಾಂಡ್: ಖರೀದಿಗೆ ಯಾವುದು ಬೆಸ್ಟ್‌?

|

ಪ್ರಸ್ತುತ ಸ್ಮಾರ್ಟ್‌ಫೋನಿನಷ್ಟೇ ಸ್ಮಾರ್ಟ್‌ ಬ್ಯಾಂಡ್ ಡಿವೈಸ್‌ಗಳು ಹೆಚ್ಚಿನ ಟ್ರೆಂಡ್‌ ಹೊಂದುತ್ತಿವೆ. ಮುಖ್ಯವಾಗಿ ಫಿಟ್ನೆಸ್ ಪ್ರಿಯರು ಸ್ಮಾರ್ಟ್‌ ಬ್ಯಾಂಡ್‌ ಡಿವೈಸ್‌ಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿಗಳು ಫಿಟ್ನೆಸ್‌ ಬ್ಯಾಂಡ್‌ಗಳನ್ನು ಲಾಂಚ್ ಮಾಡುತ್ತಿವೆ. ಇತ್ತೀಚಿಗಷ್ಟೆ ದೇಶಿಯ ಮಾರುಕಟ್ಟೆಗೆ ಅಗ್ಗದ ದರದಲ್ಲಿ ರೆಡ್ಮಿ ಸ್ಮಾರ್ಟ್‌ ಬ್ಯಾಂಡ್ ಬಿಡುಗಡೆ ಆಗಿದೆ. ಆದರೆ ರೆಡ್ಮಿ ಸ್ಮಾರ್ಟ್‌ ಬ್ಯಾಂಡ್ ಮತ್ತು ರಿಯಲ್‌ಮಿ ಬ್ಯಾಂಡ್ ಯಾವುದು ಬೆಸ್ಟ್?

ಭಿನ್ನ ಪ್ರೈಸ್‌ಟ್ಯಾಗ್‌

ಪ್ರತಿಷ್ಠಿತ ಕಂಪನಿಗಳು ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಆಕರ್ಷಕ ಫಿಟ್ನೆಸ್‌ ಫೀಚರ್ಸ್‌ಗಳೊಂದಿಗೆ ಸ್ಮಾರ್ಟ್‌ ಬ್ಯಾಂಡ್‌ ಡಿವೈಸ್‌ಗಳನ್ನು ಪರಿಚಯಿಸಿವೆ. ಅಗ್ಗದ ಪ್ರೈಸ್‌ನಲ್ಲಿ ರೆಡ್ಮಿ ಸ್ಮಾರ್ಟ್‌ ಬ್ಯಾಂಡ್ ಮತ್ತು ರಿಯಲ್‌ಮಿ ಡಿವೈಸ್‌ಗಳು ಗಮನ ಸೆಳೆದಿವೆ. ಈ ಎರಡು ಬ್ಯಾಂಡ್‌ಗಳ ಫೀಚರ್ಸ್‌ಗಳಲ್ಲಿ ಬಹುತೇಕ ಹೋಲಿಕೆ ಕಂಡು ಬಂದರು ಕೆಲವು ಅಂಶಗಳಲ್ಲಿ ಭಿನ್ನತೆಗಳಿವೆ. ಆದ್ರೆ ಅಗ್ಗದ ಬೆಲೆಯನ್ನು ಹೊಂದಿರುವ ರಿಯಲ್ ಮಿ ಅಬ್ಬರಿಸುವ ಲಕ್ಷಣಗಳು ಹೆಚ್ಚಿವೆ. ರೆಡ್ಮಿ ಸ್ಮಾರ್ಟ್‌ ಬ್ಯಾಂಡ್ ಮತ್ತು ರಿಯಲ್‌ಮಿ ಬ್ಯಾಂಡ್ ನಡುವಿನ ವ್ಯತ್ಯಾಸಗಳೆನು? ಖರೀದಿಗೆ ಯಾವುದು ಬೆಸ್ಟ್ ? ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಡಿಸ್‌ಪ್ಲೇ ಭಿನ್ನತೆಗಳೆನು

ಡಿಸ್‌ಪ್ಲೇ ಭಿನ್ನತೆಗಳೆನು

ರಿಯಲ್ ಮಿ ಬ್ಯಾಂಡ್ 0.96 ಇಂಚಿನ ಕಲರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಪಿಕ್ಸಲ್ ರೆಸಲ್ಯೂಶನ್ 80x160 ಆಗಿದೆ. ಹಾಗೆಯೇ 3D ಟೆಂಪರ್ ಗ್ಲಾಸ್ ಹೊಂದಿದೆ. ಅದೇ ರೀತಿ ರೆಡ್ಮಿ ಸ್ಮಾರ್ಟ್ ಬ್ಯಾಂಡ್ 1.08-ಇಂಚಿನ ಬಣ್ಣದ LCD ಪ್ಯಾನಲ್ ಅನ್ನು ಹೊಂದಿದೆ, ರೆಡ್ಮಿ ಬ್ಯಾಂಡ್ ಆಪ್ಟಿಕಲ್ ಸಂವೇದಕದೊಂದಿಗೆ ಒಳಗೊಂಡಿದೆ. ರೆಡ್ಮಿ ಡಿವೈಸ್ ಡಿಸ್‌ಪ್ಲೇ ಗಾತ್ರ ದೊಡ್ಡದಾಗಿದೆ.

ಬ್ಯಾಟರಿ ಲೈಫ್ ಹೇಗಿದೆ

ಬ್ಯಾಟರಿ ಲೈಫ್ ಹೇಗಿದೆ

ರಿಯಲ್‌ ಮಿ ಬ್ಯಾಂಡ್ ಡಿವೈಸ್ 90mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ದೀರ್ಘ ಬಾಳಿಕೆ ಲಭ್ಯವಾಗಲಿದೆ. ಅದೇ ರೀತಿ ರೆಡ್ಮಿ ಸ್ಮಾರ್ಟ್‌ ಬ್ಯಾಂಡ್ 130mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ರೆಡ್ಮಿ ಡಿವೈಸ್ ಬ್ಯಾಟರಿ ಅಧಿಕವಾಗಿದೆ.

ಫೀಚರ್ಸ್‌ಗಳೆನು

ಫೀಚರ್ಸ್‌ಗಳೆನು

ರಿಯಲ್‌ ಮಿ ಬ್ಯಾಂಡ್ IP68 ವಾಟರ್‌ ರೆಸಿಸ್ಟನ್ಸ್‌ ಸೌಲಭ್ಯ, ಹಾರ್ಟ್‌ ರೇಟ್ ಸೆನ್ಸಾರ್, ಬ್ಲೂ ಟೂತ್ 4.2 ಸೌಲಭ್ಯಗಳನ್ನು ಪಡೆದಿದೆ. ಹಾಗೆಯೇ ರೆಡ್ಮಿ ಸ್ಮಾರ್ಟ್‌ ಬ್ಯಾಂಡ್ 5ATM, ಹಾರ್ಟ್‌ ರೇಟ್ ಮಾನಿಟರಿಂಗ್ ಹಾಗೂ ಬ್ಲೂಟೂತ್ 5 ಸೌಲಭ್ಯವನ್ನು ಪಡೆದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಬ್ರ್ಯಾಂಡೆಡ್‌ ಸಂಸ್ಥೆಗಳ ಸ್ಮಾರ್ಟ್‌ ಬ್ಯಾಂಡ್‌ ಪೈಕಿ ರೆಡ್ಮಿ ಸ್ಮಾರ್ಟ್‌ ಬ್ಯಾಂಡ್ ಹಾಗೂ ರಿಯಲ್‌ ಮಿ ಬ್ಯಾಂಡ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ರೆಡ್ಮಿ ಸ್ಮಾರ್ಟ್‌ ಬ್ಯಾಂಡ್ ಡಿವೈಸ್‌ ಬೆಲೆಯು 1,599ರೂ. ಆಗಿದೆ. ಹಾಗೆಯೇ ರಿಯಲ್‌ ಮಿ ಬ್ಯಾಂಡ್ ಡಿವೈಸ್‌ ಬೆಲೆಯು 1,299ರೂ. ಆಗಿದೆ.

ಕೊನೆಯ ಮಾತು

ಕೊನೆಯ ಮಾತು

ರೆಡ್ಮಿ ಸ್ಮಾರ್ಟ್‌ ಬ್ಯಾಂಡ್ ಹಾಗೂ ರಿಯಲ್‌ ಮಿ ಬ್ಯಾಂಡ್ ಭಿನ್ನ ಕಾರಣಗಳಿಂದ ಎರಡು ಆಕರ್ಷಕ ಅನಿಸುತ್ತವೆ. ಅಗ್ಗದ ಬೆಲೆಯಲ್ಲಿ ರಿಯಲ್‌ ಮಿ ಬ್ಯಾಂಡ್ ಹೆಚ್ಚು ಗಮನ ಸೆಳೆಯುತ್ತದೆ. ಹಾಗೆಯೇ 1500ರೂ ಬೆಲೆಯಲ್ಲಿ ಆಕರ್ಷಕ ಫೀಚರ್ಸ್‌ಗಳಿಂದ ರೆಡ್ಮಿಯ ಸ್ಮಾರ್ಟ್‌ ಬ್ಯಾಂಡ್ ಖರೀದಿಗೆ ಹೆಚ್ಚು ಸೂಕ್ತ ಅನಿಸುತ್ತದೆ.

Best Mobiles in India

English summary
Redmi Smart Band and Realme Band both are cheapest fitness bands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X