ಅಗ್ಗದ ಪ್ರೈಸ್‌ನಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟ ರೆಡ್ಮಿ ಸ್ಮಾರ್ಟ್ ಬ್ಯಾಂಡ್!
ಜನಪ್ರಿಯ ಶಿಯೋಮಿ ರೆಡ್‌ಮಿ ಸಂಸ್ಥೆಯು ಈಗಾಗಲೇ ಭಿನ್ನ ಸ್ಮಾರ್ಟ್ ಉತ್ಪನ್ನಗಳಿಂದ ಗ್ರಾಹಕ ಸ್ನೇಹಿಯಾಗಿ ಗುರುತಿಸಿಕೊಂಡಿದೆ. ಫಿಟ್ನೆಸ್ ಪ್ರಿಯರಿಗಾಗಿ ಸಂಸ್ಥೆಯು ಇತ್ತೀಚಿಗೆ ರೆಡ್ಮಿ ಬ್ಯಾಂಡ್ ಡಿವೈಸ್ ಅನ್ನು ಪರಿಚಯಿಸಿದೆ. ಇದೀಗ ರೆಡ್ಮಿ ಬ್ಯಾಂಡ್ ಡಿವೈಸ್ ಅನ್ನು ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಡಿವೈಸ್ ಹಾರ್ಟ್ ರೇಟ್ ಮಾನಿಟರ್ ಹಾಗೂ ನಿದ್ರೆಯನ್ನು ಟ್ರ್ಯಾಕ್ ಮಾಡುವ ಸೌಲಭ್ಯ ಪಡೆದಿದೆ.

ಹೌದು, ಶಿಯೋಮಿ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ರೆಡ್ಮಿ ಬ್ಯಾಂಡ್ ಡಿವೈಸ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಬ್ಯಾಂಡ್ ಡಿವೈಸ್ ಬೆಲೆಯು 1,599ರೂ. ಆಗಿದೆ. ಇನ್ನು ಈ ಡಿವೈಸ್ ಸೆಪ್ಟೆಂಬರ್ 9 ರ ಬುಧವಾರ ಮಧ್ಯಾಹ್ನ 1 ಗಂಟೆಗೆ ಅಮೆಜಾನ್, ಮಿ.ಕಾಮ್, ಮಿ ಹೋಮ್ ಮಳಿಗೆಗಳು ಮತ್ತು ಆಫ್‌ಲೈನ್ ರೀಟೇಲ್ ಸ್ಟೋರ್ ವ್ಯಾಪಾರಿಗಳ ಮೂಲಕ ಮಾರಾಟವಾಗಲಿದೆ. ಅಂದಹಾ ಗೇ ಈ ಡಿವೈಸ್‌ಕಪ್ಪು, ನೀಲಿ, ಹಸಿರು ಮತ್ತು ಕಿತ್ತಳೆ ರಿಸ್ಟ್ ಬ್ಯಾಂಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಈ ರೆಡ್ಮಿ ಸ್ಮಾರ್ಟ್ ಬ್ಯಾಂಡ್ 1.08-ಇಂಚಿನ ಬಣ್ಣದ LCD ಪ್ಯಾನಲ್ ಅನ್ನು ಹೊಂದಿದೆ, ರೆಡ್ಮಿ ಬ್ಯಾಂಡ್ ಆಪ್ಟಿಕಲ್ ಸಂವೇದಕದೊಂದಿಗೆ ಒಳಗೊಂಡಿದೆ. ಹಾಗೆಯೇ 24 ಗಂಟೆಗಳ ಹೃದಯ ಬಡಿತದ ಮೇಲ್ವಿಚಾರಣೆಯನ್ನು ಶಕ್ತಗೊಳಿಸುತ್ತದೆ. ಇದರೊಂದಿಗೆ ಐದು ಸ್ಪೋರ್ಟ್ಸ್ ಮೋಡ್ ಆಯ್ಕೆಗಳನ್ನು ಹೊಂದಿದೆ ಮತ್ತು ನಿದ್ರೆಯ ಗುಣಮಟ್ಟದ ವಿಶ್ಲೇಷಣೆಗಳಿವೆ. ಇದಲ್ಲದೆ, ಬ್ಯಾಂಡ್ ಕ್ಯಾಲೋರಿ ಮತ್ತು ಸ್ಟೆಪ್ ಟ್ರ್ಯಾಕರ್ ಅನ್ನು ಹೊಂದಿದೆ.

ಮಿ ಬ್ಯಾಂಡ್ 4 ರಂತೆಯೇ ಈ ರೆಡ್ಮಿ ಸ್ಮಾರ್ಟ್ ಬ್ಯಾಂಡ್ ಸಹ 5ATM ರೇಟ್ ಹೊಂದಿರುವ ವಾಟರ್ ರೆಸಿಸ್ಟನ್ಸ್ ಸೌಲಭ್ಯವನ್ನು ಪಡೆದಿದೆ. ಈ ಡಿವೈಸ್ 50 ಮೀಟರ್ ಆಳದವರೆಗೆ 10 ನಿಮಿಷಗಳ ಕಾಲ ನೀರನ್ನು ರೆಸಿಸ್ಟನ್ಸ್ ಮಾಡಲಿದೆ ಎನ್ನಲಾಗಿದೆ. ಹಾಗೂ ಹೆಚ್ಚಿನ ಆಳವಿಲ್ಲದ ನೀರಿನ ಕೊಳದಲ್ಲಿ ಸ್ನಾನ ಮಾಡುವಾಗ ಅಥವಾ ಈಜುವಾಗಲೂ ಸಹ ಈ ಸಾಧನವನ್ನು ಧರಿಸಬಹುದು ಎಂದು ಕಂಪನಿಯು ಹೇಳಿದೆ.

ಹಾಗೆಯೇ ಈ ರೆಡ್ಮಿ ಸ್ಮಾರ್ಟ್ ಬ್ಯಾಂಡ್ ವೇಕ್ ಗೆಸ್ಚರ್ ಸೂಚಕವನ್ನು ಬೆಂಬಲಿಸುತ್ತದೆ. ಅಂದರೇ ಬಳಕೆದಾರರಿಗೆ ಬರುವ ಹೊಸ ಮೆಸೆಜ್‌ಗಳನ್ನು ಡಿಸ್‌ಪ್ಲೇ ಅಥವಾ ಯಾವುದೇ ಬಟನ್ ಒತ್ತದೇ ಆ ಮೆಸೆಜ್ ವೀಕ್ಷಿಸುವ ಸೌಲಭ್ಯ ಇದಾಗಿದೆ.


Click it and Unblock the Notifications








