Home
ಸುದ್ದಿಜಾಲ

ಭಾರತದಲ್ಲಿ ರೆಡ್ಮಿ ಸ್ಮಾರ್ಟ್‌ ಫೈರ್‌ ಟಿವಿ ಲಾಂಚ್‌; ಅಲೆಕ್ಸಾ ಬೆಂಬಲಿತ ರಿಮೋಟ್‌ ಆಯ್ಕೆ!

ರೆಡ್ಮಿ ಸ್ಮಾರ್ಟ್‌ಫೋನ್‌ಗಳು ಎಷ್ಟು ಜನಪ್ರಿಯವಾಗಿವೆಯೋ ಅದೇ ರೀತಿಯಲ್ಲಿ ಸ್ಮಾರ್ಟ್‌ಟಿವಿಗಳು ಸಹ ಭಾರೀ ಜನಮನ್ನಣೆ ಗಳಿಸಿವೆ. ಅಂತೆಯೇ ರೆಡ್ಮಿ ಕಂಪೆನಿಯು ವಿಶೇಷವಾದ ಫೀಚರ್ಸ್‌ ಇರುವ ಸ್ಮಾರ್ಟ್‌ಟಿವಿಯನ್ನು ಇಂದು ಅನಾವರಣ ಮಾಡಿದ್ದು, ಇದು 20W ಸ್ಪೀಕರ್‌ನೊಂದಿಗೆ ಕಂಡುಬಂದಿದೆ.

ಹೌದು, ಇತ್ತೀಚೆಗೆ ಸ್ಮಾರ್ಟ್‌ಟಿವಿಗಳಿಗೆ ಭಾರೀ ಬೇಡಿಕೆ ನಿರ್ಮಾಣ ಆಗಿದ್ದು, ಪ್ರಮುಖ ಕಂಪೆನಿಗಳು ಸುಧಾರಿತ ಫೀಚರ್ಸ್‌ಜೊತೆಗೆ ಹೊಸ ರೀತಿಯ ಟಿವಿಗಳನ್ನು ಲಾಂಚ್‌ ಮಾಡುತ್ತಲೇ ಇದ್ದು, ಇದರ ಭಾಗವಾಗಿಯೇ ರೆಡ್ಮಿಯು 32 ಇಂಚಿನ ಸ್ಮಾರ್ಟ್‌ ಫೈರ್‌ ಟಿವಿಯನ್ನು ಅನಾವರಣ ಮಾಡಿದೆ. ಇದು 1.5GHz ಕ್ವಾಡ್ ಕೋರ್ ಕಾರ್ಟೆಕ್ಸ್ A53 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟೆಂದು ತಿಳಿದುಕೊಳ್ಳಿ.

ಭಾರತದಲ್ಲಿ ರೆಡ್ಮಿ ಸ್ಮಾರ್ಟ್‌ ಫೈರ್‌ ಟಿವಿ ಲಾಂಚ್‌; ಅಲೆಕ್ಸಾ ಬೆಂಬಲಿತ ರಿಮೋಟ್‌

ರೆಡ್ಮಿ ಸ್ಮಾರ್ಟ್‌ ಫೈರ್‌ ಟಿವಿ 32 ಇಂಚಿನ ಹೆಚ್‌ಡಿ ರೆಡಿ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಬೆಜೆಲ್ ಲೆಸ್ ಮೆಟಾಲಿಕ್ ವಿನ್ಯಾಸವನ್ನು ಹೊಂದಿರುವ ಈ ಟಿವಿ 1366x768 ಪಿಕ್ಸೆಲ್ ರೆಸಲ್ಯೂಶನ್‌ ಬೆಂಬಲ ಪಡೆದಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಟಿವಿ ಆಟೋ ಲೋ ಲೇಟೆನ್ಸಿ ಮೋಡ್ ಫೀಚರ್ಸ್‌ ಹೊಂದಿದ್ದು, 96.9% ಸ್ಕ್ರೀನ್ ಟು ಬಾಡಿ ಅನುಪಾತವನ್ನು ನೀಡುತ್ತದೆ.

ಇದರ ಪ್ರೊಸೆಸರ್‌ ವಿಷಯಕ್ಕೆ ಬರುವುದಾದರೆ ಈ ಸ್ಮಾರ್ಟ್‌ಟಿವಿ 1.5GHz ಕ್ವಾಡ್-ಕೋರ್ ಕಾರ್ಟೆಕ್ಸ್ A53 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಇದು ಫೈರ್‌ ಓಎಸ್‌ 7 ಅನ್ನು ರನ್ ಮಾಡುತ್ತದೆ. ಇನ್ನುಳಿದಂತೆ 1GB RAM ಹಾಗೂ 8GB ಇಂಟರ್‌ ಸ್ಟೋರೇಜ್‌ ಆಯ್ಕೆ ಇದರಲ್ಲಿದೆ. ಈ ಮೂಲಕ ಬಳಕೆದಾರರು ಫೈರ್‌ಡಿವಿ ಆಪ್ ಸ್ಟೋರ್‌ ಮೂಲಕ ಬರೋಬ್ಬರಿ 12,000 ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಬಹುದಾಗಿದೆ.

ಭಾರತದಲ್ಲಿ ರೆಡ್ಮಿ ಸ್ಮಾರ್ಟ್‌ ಫೈರ್‌ ಟಿವಿ ಲಾಂಚ್‌; ಅಲೆಕ್ಸಾ ಬೆಂಬಲಿತ ರಿಮೋಟ್‌

ಇನ್ನು ಈ ಸ್ಮಾರ್ಟ್‌ಟಿವಿಯ ಡಿಸ್‌ಪ್ಲೇ ಮೂಲಕವೇ ಡಿಟಿಹೆಚ್‌ ಸೆಟ್ ಟಾಪ್ ಬಾಕ್ಸ್ ಹಾಗೂ ಡಿಟಿಹೆಚ್‌ ಟಿವಿ ಚಾನೆಲ್‌ಗಳು ಮತ್ತು ಓಟಿಟಿ ಅಪ್ಲಿಕೇಶನ್‌ಗಳನ್ನು ಮನಬಂದಂತೆ ಬದಲು ಮಾಡಲು ಅವಕಾಶ ನಡಲಿದ್ದು, ಇದಕ್ಕಾಗಿ ಬಳಕೆದಾರರು ಇನ್‌ಪುಟ್‌ ಅನ್ನು ಬದಲಾವಣೆ ಮಾಡುವ ಅನಿವಾರ್ಯತೆ ಇರುವುದಿಲ್ಲ. ಇದಿಷ್ಟೆ ಅಲ್ಲದೆ, ಆಪಲ್ ಮತ್ತು ಆಂಡ್ರಾಯ್ಡ್ ಫೋನ್‌ಗಳಿಂದ ಮಿರರಿಂಗ್‌ ಸೌಲಭ್ಯ ಪಡೆಯಲು ಸಹ ಸುಲಭವಾಗಿ ಅನುವು ಮಾಡಿಕೊಡುತ್ತದೆ.

ಇದರ ಮತ್ತೊಂದು ವಿಶೇಷತೆ ಎಂದರೆ ಅಲೆಕ್ಸಾ ಬೆಂಬಲಿತ ರಿಮೋಟ್‌, ಇದು ಎಲ್ಲಾ ರೀತಿಯ ಸ್ಮಾರ್ಟ್‌ಟಿವಿ ಕಾರ್ಯಗಳನ್ನು ನಿಯಂತ್ರಣ ಮಾಡಲು ಅನುವು ಮಾಡಿಕೊಡುತ್ತದೆ. ಅಂದರೆ ಟಿವಿ ಗೈಡ್, ಪ್ಲೇಬ್ಯಾಕ್ ಕಂಟ್ರೋಲ್‌, ಚಾನೆಲ್ ಅಪ್/ಡೌನ್, ಮ್ಯೂಟ್ ಮಾಡಲು ಸುಲಭವಾದ ಬಟನ್‌ಗಳನ್ನು ಹೊಂದಿದ್ದು, ಇದರೊಂದಿಗೆ ಜನಪ್ರಿಯ ಆಪ್‌ಗಳಿಗಾಗಿ ಶಾರ್ಟ್‌ಕಟ್‌ ಬಟನ್‌ಗಳು ನೀಡಲಾಗಿದೆ.

ಇನ್ನು ಈ ಟಿವಿಯ ವಿಶೇಷತೆ ಆಗಿರುವ ಅಲೆಕ್ಸಾ ಬಟನ್ ಅನ್ನು ಒತ್ತಿ ಹಿಡಿದರೆ ವಾಯ್ಸ್‌ ಕಂಟ್ರೋಲ್‌ ಮೂಲಕ ಯಾರೇ ಆದರೂ ಸುಲಭವಾಗಿ ಹಾಗೂ ಅತ್ಯಂತ ಸರಳವಾಗಿ ಬೇಕಾದ ಚಾನಲ್‌ಗಳನ್ನು ಬದಲಾಯಿಸಬಹುದು, ಆಪ್‌ಗಳನ್ನು ಓಪನ್‌ ಮಾಡಬಹುದು. ಹಾಗೂ ಇನ್ನಿತರೆ ಸ್ಟ್ರೀಮಿಂಗ್‌ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಹವಾಮಾನದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಇದನ್ನು ಬಳಸಬಹುದು ಮತ್ತು ಮನೆಯಲ್ಲಿನ ಸ್ಮಾರ್ಟ್‌ ಬಲ್ಬ್‌ಗಳು, ಎಸಿಗಳು ಮತ್ತು ಫ್ಯಾನ್‌ಗಳು ಸೇರಿದಂತೆ ಇನ್ನಿತರೆ ಡಿವೈಸ್‌ಗಳನ್ನು ಈ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ.

ಭಾರತದಲ್ಲಿ ರೆಡ್ಮಿ ಸ್ಮಾರ್ಟ್‌ ಫೈರ್‌ ಟಿವಿ ಲಾಂಚ್‌; ಅಲೆಕ್ಸಾ ಬೆಂಬಲಿತ ರಿಮೋಟ್‌

ಈ ಹೊಸ ಸ್ಮಾರ್ಟ್ ಟಿವಿಯು ಡಾಲ್ಬಿ ಆಡಿಯೋದಿಂದ ಟ್ಯೂನ್ ಮಾಡಲಾದ 20W ಸ್ಪೀಕರ್‌ನೊಂದಿಗೆ ಪ್ಯಾಕ್‌ ಆಗಿದ್ದು, ಇದಕ್ಕೆ 13,999 ರೂ. ಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಆದರೆ, ಅಮೆಜಾನ್ ಹಾಗೂ ಮಿ ಆನ್‌ಲೈನ್‌ಸ್ಟೋರ್‌ನಲ್ಲಿ ಕೊಡುಗೆ ದರವಾಗಿ 12,999 ರೂ. ಗಳ ಬೆಲೆ ಹೊಂದಿದ್ದು, ಅದಾಗ್ಯೂ 1,000 ರೂ. ಗಳ ತ್ವರಿತ ರಿಯಾಯಿತಿ ಸಹ ಲಭ್ಯವಾಗುತ್ತಿದ್ದು, ಈ ಮೂಲಕ 11,999 ರೂ. ಗಳಲ್ಲಿ ಈ ಟಿವಿಯನ್ನು ಖರೀದಿ ಮಾಡಬಹುದಾಗಿದೆ. ಮಾರ್ಚ್ 21 ರಿಂದ ಈ ಟಿವಿ ಮಾರಾಟಕ್ಕೆ ಲಭ್ಯ.

Best Mobiles in India

English summary
Redmi has unveiled the 32 inch Smart Fire TV in India. It will be powered by 1.5GHz quad core Cortex A53 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+