ಬಿಡುಗಡೆಗೂ ಮುನ್ನವೇ ಸಖತ್ ಸೌಂಡ್ ಮಾಡ್ತಿದೆ ಈ ಸ್ಮಾರ್ಟ್‌ಟಿವಿ! ಏನಿರಬಹುದು ಇದರಲ್ಲಿ!
ಶಿಯೋಮಿ ಕಂಪೆನಿ ರೆಡ್ಮಿ ಬ್ರ್ಯಾಂಡ್ ಅಡಿಯಲ್ಲಿ ಅನೇಕ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಈಗಾಗಲೇ ರೆಡ್ಮಿ ಬ್ರ್ಯಾಂಡ್‌ನ ಸ್ಮಾರ್ಟ್ ಟಿವಿಗಳು ತಮ್ಮದೇ ಡಿಮ್ಯಾಂಡ್ ಕ್ರಿಯೆಟ್ ಮಾಡಿಕೊಂಡಿವೆ. ಇದೀಗ 43-ಇಂಚಿನ ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K ಬಿಡುಗಡೆಗೆ ತಯಾರಿ ನಡೆದಿದೆ. ಈ ಸ್ಮಾರ್ಟ್‌ಟಿವಿ ಭಾರತದ ಮಾರುಕಟ್ಟೆಗೆ ಸೆಪ್ಟೆಂಬರ್ 15 ರಂದು ಬರಲಿದೆ.
ಹೌದು, ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಬಿಡುಗಡೆಗೂ ಮುನ್ನವೇ ಸ್ಮಾರ್ಟ್‌ಟಿವಿ ಸಖತ್ ಸೌಂಡ್ ಮಾಡುತ್ತಿದ್ದು, ಆನ್‌ಲೈನ್‌ನಲ್ಲಿ ಫೀಚರ್ಸ್ ಬಹಿರಂಗವಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಎರಡು 12W ಸ್ಪೀಕರ್ ಅನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಯು ಯಾವೆಲ್ಲಾ ಫೀಚರ್ಸ್ ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K ವಿಶೇಷತೆ ಏನು?
ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K ಸ್ಮಾರ್ಟ್‌ಟಿವಿ 43 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಜಿರೋ ಬೆಜೆಲ್ಸ್, ಸೀಮ್ ಲೆಸ್ ಕಂಟ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 3840 x 2160 ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 60Hz ರಿಫ್ರೆಶ್ ರೇಟ್ ಮತ್ತು 178-ಡಿಗ್ರಿ ವ್ಯೂ ಆಂಗಲ್ ಅನ್ನು ಒಳಗೊಂಡಿದೆ. ಅಲ್ಲದೆ ಡಿಸ್‌ಪ್ಲೇ HDR 10 ಮತ್ತು HLG ಫಾರ್ಮ್ಯಾಟ್ ಬೆಂಬಲವನ್ನು ಸಹ ಹೊಂದಿದೆ.
ಇದಲ್ಲದೆ ಸ್ಮಾರ್ಟ್‌ಟಿವಿಯು 12W ಸಾಮರ್ಥ್ಯದ ಎರಡು ಸ್ಪೀಕರ್ ಅನ್ನು ಹೊಂದಿದೆ. ಇದು ಡಾಲ್ಬಿ ಆಡಿಯೋ, DTS-HD ಮತ್ತು DTS ವರ್ಚುವಲ್:X ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಟಿವಿಯು ಮೀಡಿಯಾಟೆಕ್ MT9020 ಪ್ರೊಸೆಸರ್ ವೇಗದೊಂದಿಗೆ ಬರಲಿದೆ. ಇದು ಫೈರ್ OS 7 ಅನ್ನು ಬೂಟ್ ಮಾಡುತ್ತದೆ. ಇದಕ್ಕೆ ಪೂರಕವಾಗಿ Mali G52 MP2 GPU ಸಪೋರ್ಟ್ ಪಡೆದಿದೆ. ಹಾಗೆಯೇ ಸ್ಮಾರ್ಟ್‌ಟಿವಿ 2GB RAM ಮತ್ತು 16GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ.
ಇನ್ನು ಈ ಸ್ಮಾರ್ಟ್‌ಟಿವಿ ಸ್ಮಾರ್ಟ್ ಹೋಮ್ ಕಂಟ್ರೋಲ್ ಹಬ್, ಆಪಲ್ ಏರ್‌ಪ್ಲೇ ಮತ್ತು ಅಲೆಕ್ಸಾ ದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಕನೆಕ್ಟಿವಿಟ ಆಯ್ಕೆಗಳಲ್ಲಿ Wi-Fi, ಬ್ಲೂಟೂತ್ v5.0, HDMI 2.0 ಪೋರ್ಟ್, HDMI 2.1 ಪೋರ್ಟ್, ಎರಡು USB 2.0 ಪೋರ್ಟ್‌ಗಳು, AV ಪೋರ್ಟ್, 3.5mm ಆಡಿಯೊ ಜಾಕ್ ಮತ್ತು ಎತರ್ನೆಟ್ ಪೋರ್ಟ್ ಅನ್ನು ಬೆಂಬಲಿಸಲಿದೆ.
ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K ಸ್ಮಾರ್ಟ್‌ಟಿವಿಯ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಸದ್ಯದಲ್ಲೇ ಸ್ಮಾರ್ಟ್‌ಟಿವಿ ಬಿಡುಗಡೆ ಆಗುವುದರಿಂದ ಕೆಲ ದಿನಗಳಲ್ಲಿ ಇದರ ಬೆಲೆ ವಿವರ ಬಹಿರಂಗವಾಗುವ ನಿರೀಕ್ಷೆಯಿದೆ. ಅಲ್ಲದೆ ಇದರ ಕಲರ್ ಆಯ್ಕೆಗಳ ಬಗ್ಗೆ ಸಹ ಯಾವುದೇ ವಿಚಾರ ತಿಳಿದು ಬಂದಿಲ್ಲ.
ಇನ್ನು ಶಿಯೋಮಿ ರೆಡ್ಮಿ ಬ್ರ್ಯಾಂಡ್‌ನಲ್ಲಿ ಕಳೆದ ವರ್ಷ 43-ಇಂಚಿನ, 50-ಇಂಚಿನ ಮತ್ತು 55-ಇಂಚಿನ ರೂಪಾಂತರಗಳಲ್ಲಿ Fire OS ನಲ್ಲಿ ರನ್ ಆಗುವ ಟಿವಿಗಳನ್ನು ಪರಿಚಯಿಸಿದೆ. ಇದೇ ಮಾದರಿಯಲ್ಲಿ ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K TV 43-ಇಂಚಿನ ಮಾದರಿಯು ಬರಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಟಿವಿಯ ವಿನ್ಯಾಸವೇ ಬಲು ರೋಚಕವಾಗಿರಲಿದೆ ಅನ್ನೊದು ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ. ಇನ್ನು ಟಿವಿಯನ್ನು Amazon, Mi.com ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಸೆಪ್ಟೆಂಬರ್ 15 ರಂದು ಭಾರತದಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








