Redmi: ಎರಡು ಹೊಸ ಫೋನ್ ಬರಲಿವೆ.. ಫೀಚರ್ಸ್ ಬಹಿರಂಗ.. ಬೆಲೆ ಎಷ್ಟು?
ರೆಡ್ಮಿ (Redmi) ಎರಡು ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇವು, ರೆಡ್ಮಿ ಟರ್ಬೊ 4 (Redmi Turbo 4) ಮತ್ತು ರೆಡ್ಮಿ ಟರ್ಬೊ 4 ಪ್ರೊ (Redmi Turbo 4 Pro) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಈ ಮೂಲಕ ಕಂಪನಿಯು, ತನ್ನ ರೆಡ್ಮಿ ಟರ್ಬೊ (Redmi Turbo) ಸರಣಿಯನ್ನು ವಿಸ್ತರಿಸಲಿದೆ. ಈಗಾಗಲೇ, ಕಂಪನಿಯು Redmi Turbo 3 ಅನ್ನು ಬಿಡುಗಡೆ ಮಾಡಿದೆ. ಇದೀಗ, ಮುಂಬರುವ ಸರಣಿಯು ಇದರ ಉತ್ತರಾಧಿಕಾರಿಯಾಗಿ ಬರಲಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ರೆಡ್ಮಿ ಟರ್ಬೊ 4 ಸರಣಿಯ ಘೋಷಣೆಗೂ ಮುನ್ನವೇ ಪ್ರಮುಖ ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಮೈಕ್ರೊ ಬ್ಲಾಗಿಂಗ್ ಸೈಟ್ ವೈಬೊದಲ್ಲಿ ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಮುಂಬರುವ ಎರಡು ರೆಡ್ಮಿ ಫೋನ್‌ಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಸೋರಿಕೆಯಲ್ಲಿ ಫೋನಿನ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಇವು ರೆಡ್ಮಿ ಟರ್ಬೊ 4 ಮತ್ತು ರೆಡ್ಮಿ ಟರ್ಬೊ 4 ಪ್ರೊ ಎಂದು ಹೇಳಲಾಗುತ್ತಿದೆ. ಫೋನ್ ಉತ್ತಮ ವಿನ್ಯಾಸ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಫೋನಿನ ವಿಶೇಷತೆಗಳ ಬಗ್ಗೆ ತಿಳಿಯಲು ಮುಂದೆ ಓದಿ.

ವೈಬೊ ಪೋಸ್ಟ್ ಪ್ರಕಾರ, ರೆಡ್ಮಿ ಟರ್ಬೊ 4 ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಪ್ರೊಸೆಸರ್ ಹೊಂದಿರಲಿದೆ. ರೆಡ್ಮಿ ಟರ್ಬೊ 4 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8S ಜೆನ್ 4 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಈ ಎರಡೂ ಪ್ರೊಸೆಸರ್‌ಗಳು ಅಧಿಕೃತವಾಗಿ ಬಿಡುಗಡೆಯಾಗಬೇಕಿದೆ. ಮುಂಬರುವ ರೆಡ್ಮಿ ಫೋನ್‌ಗಳು 1.5K ಫ್ಲಾಟ್ ಸ್ಕ್ರೀನ್ ಡಿಸ್ಪ್ಲೇ ಮತ್ತು 6000mAh ಬ್ಯಾಟರಿಯನ್ನು ಹೊಂದಿರಲಿದೆ. ಕ್ಯಾಮೆರಾ ಸೆಟಪ್ ಈ ಹಿಂದಿನ ಫೋನ್‌ಗಳನ್ನೇ ಹೋಲುತ್ತದೆ.
ರೆಡ್ಮಿ ಟರ್ಬೊ 4 ಸರಣಿ ಬಿಡುಗಡೆ ಯಾವಾಗ?
ಮುಂಬರುವ ರೆಡ್ಮಿ ಟರ್ಬೊ 4 ಮತ್ತು ರೆಡ್ಮಿ ಟರ್ಬೊ 4 ಪ್ರೊ ಮೊಬೈಲ್ ಅನ್ನು ಮೊದಲು ಚೀನಾದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಕಂಪನಿಯು ಈ ವರ್ಷದ ಏಪ್ರಿಲ್‌ನಲ್ಲಿ ಟರ್ಬೊ 3 ಅನ್ನು ಬಿಡುಗಡೆ ಮಾಡಿತ್ತು. ಇದು Poco F6 5G ಎಂಬ ಹೆಸರಿನೊಂದಿಗೆ ಭಾರತದಲ್ಲಿ ಗುರುತಿಸಿಕೊಂಡಿದೆ. ಇದೇ ಮಾದರಿಯನ್ನು ಅನುಸರಿಸಿ, ಟರ್ಬೊ 4 ಅನ್ನು Poco F7 ಆಗಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ರೆಡ್ಮಿ ಟರ್ಬೊ 3 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರೆಡ್ಮಿ ಟರ್ಬೊ 3 ಮೊಬೈಲ್ 6.67 ಇಂಚಿನ ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಇದು 1.5K ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 2,400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ರೆಡ್ಮಿ ಟರ್ಬೊ 3 ಫೋನಿನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8S ಜೆನ್ 3 ಪ್ರೊಸೆಸರ್ ಅಳವಡಿಸಿದೆ. ಇದರೊಂದಿಗೆ, ವಿಸಿ (VC) ಚೇಂಬರ್ ಮತ್ತು ಶಿಯೋಮಿನ ಐಸ್ ಕೂಲಿಂಗ್ ಸಿಸ್ಟಮ್ ಲಭ್ಯವಿದೆ. ಈ ಫೋನ್ 16GB RAM + 1TB ವರೆಗಿನ ಇಂಟರ್ನಲ್ ಸ್ಟೋರೇಜ್ ಸೌಲಭ್ಯವನ್ನು ಹೊಂದಿದೆ.
ಈ ಸುದ್ದಿ ಓದಿದ್ದೀರಾ?: ಕೇವಲ 7,249 ಸಾಕು! Itel P55T ಬೆಲೆ ಇಳಿಕೆ.. 28% ಡಿಸ್ಕೌಂಟ್.. ಈಗ ಬಿಟ್ಟರೆ ಮತ್ತೆ ಸಿಗಲ್ಲ!
ಕ್ಯಾಮೆರಾ ಸೆಟಪ್
ರೆಡ್ಮಿ ಟರ್ಬೊ 3 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ LYT-600 ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಈ ಮೊಬೈಲ್ 5,000mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದೆ. ಇದು 90W ವೇಗದ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಈ ಫೋನಿನಲ್ಲಿ ಅನೇಕ ಎಐ (AI) ವೈಶಿಷ್ಟ್ಯಗಳು ಲಭ್ಯವಿದೆ. ಜೊತೆಗೆ, ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ಡ್ಯುಯಲ್ ಸಿಮ್, 5G, ಯುಎಸ್‌ಬಿ ಸಿ ಪೋರ್ಟ್, ವೈ ಫೈ 7, ಬ್ಲೂಟೂತ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








